ಜಗಳೂರು: ಬಾಬಾ ಸಾಹೇಬರು ಇಲ್ಲದಿದ್ದರೆ ಭೀಮಾ ಕೋರೆಗಾಂವ್‌ ಯುದ್ಧ ಬೆಳಕಿಗೆ ಬರುತ್ತಿರಲಿಲ್ಲ!

Suddivijaya
Suddivijaya January 1, 2023
Updated 2023/01/01 at 12:26 PM

ಸುದ್ದಿವಿಜಯ, ಜಗಳೂರು: ಇತಿಹಾಸ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ಭೀಮಾ ಕೋರೆಗಾಂವ್ಯುದ್ಧದ ಬಗ್ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ಪ್ರಸ್ತಾಪಿಸದಿದ್ದರೆ ಬೆಳಕಿಗೆ ಬರುತ್ತಿಲ್ಲ ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ನೆನಪಿಸಿದರು.

ಪಟ್ಟಣದ ಅಂಬೇಡ್ಕರ್ವೃತ್ತದಲ್ಲಿ 205ನೇ ಕೋರೆಗಾಂವ್ವಿಜಯಯೋತ್ಸವ ಕಾಯಕ್ರಮಕ್ಕೆ ಅಂಬೇಡ್ಕರ್ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ ಭೀಮಾ–ಕೋರೆಗಾಂವ್ ಮರಾಠಾ ಇತಿಹಾಸದಲ್ಲಿ ಪ್ರಧಾನ ಪಾತ್ರ ವಹಿಸಿದೆ. 1818ರ ಜನವರಿ 1ರಂದು ಕೋರೆಗಾಂವ್ ನದೀತಟದಲ್ಲಿ 2ನೇ ಪೇಶ್ವೆ ಬಾಜೀರಾವ್ ನೇತೃತ್ವದ ಮರಾಠ ಸೇನೆ ಮತ್ತು ಬ್ರಿಟಿಷ್ ಸೇನೆ ನಡುವೆ ಯುದ್ಧ ನಡೆದಿತ್ತು.

ಈ ಯುದ್ಧದಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಬ್ರಿಟಿಷರ ಮಹಾರ್​ ರೆಜಿಮೆಂಟ್​ ಪೇಶ್ವೆಗಳ ಸೇನೆಯನ್ನು ಪರಾಭವಗೊಳಿಸಿತ್ತು. ಪೇಶ್ವೆಗಳ ದೌರ್ಜನ್ಯದ ವಿರುದ್ಧ ಮಹಾರ್ ಸಮುದಾಯದವರ ಗೆಲುವು ಇದು ಎಂದೇ ನಂತರದ ದಿನಗಳಲ್ಲಿ ಇದನ್ನು ವಿಶ್ಲೇಷಿಸಲಾಯಿತು. ಈ ಯುದ್ಧವನ್ನು ಭೀಮಾ–ಕೋರೆಗಾಂವ್ ಯುದ್ಧ ಎಂದೇ ಇತಿಹಾಸದಲ್ಲಿ ಬಣ್ಣಿಸಲಾಗಿದೆ.

ಗೆಲುವು ತಂದುಕೊಟ್ಟ ಯೋಧರ ನೆನಪಿಗಾಗಿ ಈಸ್ಟ್ ಇಂಡಿಯಾ ಕಂಪನಿ ವಿಜಯಸ್ತಂಭ ಸ್ಥಾಪಿಸಿತ್ತು. ಪರ್ತಿ ವರ್ಷವೂ ಜ.1ರಂದು ಸಾವಿರಾರು ದಲಿತರು ಇಲ್ಲಿ ಪುಪ್ಪಾರ್ಚನೆ ಮಾಡಿ ಗೌರವ ಸಲ್ಲಿಸುತ್ತಾರೆ. ಭೀಮಾ ಕೋರೆಗಾಂವ್ ಯುದ್ಧಕ್ಕೆ 205ನೇ ವರ್ಷ ತುಂಬಿದೆ. 44 ದಲಿತ ವೀರ ಯೋಧರು ಮೃತಪಟ್ಟಿರು ಅವರ ಸ್ಮರಣಾರ್ಥ ಪ್ರತಿ ವರ್ಷ ಭೀಮಾ ಕೋರೆಂಗಾವ್ಯುದ್ಧವನ್ನು ಸ್ಮಿರಸಲಾಗುತ್ತಿದೆ ಎಂದರು.

ಪ್ರಾಂಶುಪಾಲ ನಾಗಲಿಂಗಪ್ಪ ಮಾತನಾಡಿ, ದಲಿತರು ರಾಜರ ಸೇವೇಗಾಗಿಯೇ ಇದ್ದವರು ಎಂದು ಭಾವಿಸಿದ್ದರು. ನಮ್ಮ ನೆರಳು ಬಲಿತರ ಮೇಲೆ ಬೀಳುವಂತಿಲ್ಲ. ಕಾಲಿಗೆ ಪೊರಕೆ ಕಟ್ಟಿಕೊಂಡು ಓಡಾಡಬೇಕಿತ್ತು. ಆದರೆ ಅಂತಹ ದಲಿತರ ನೋವುಗಳಿಗೆ ದೀಪವಾವರು ಅಂಬೇಡ್ಕರ್‌. ದಲಿತರ ಸಂಕಷ್ಟಗಳು ಏನೇ ಇದ್ದರೂ ಅಂಬೇಡ್ಕರ್ಆದರ್ಶಗಳನ್ನು ಮೈಗೂಡಿಸಿಕೊಂಡು ಹೋದರೆ ಅಭಿವೃದ್ಧಿ ಸಾಧ್ಯ. ಅಂಬೇಡ್ಕರ್ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ಸಮಾನತೆ ಸಿಗುತ್ತಿರಲಿಲ್ಲ ಎಂದು ಹೇಳಿದರು.

ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಡಿಎಸ್ಎಸ್ಸಂಚಾಲಕ ಮಲೆ ಮಾಚಿಕೆರೆ ಸತೀಶ್, ಪ್ರಾಂಶುಪಾಲ ನಾಗಲಿಂಗಪ್ಪ, ವಕೀಲರಾದ ಹನುಮಂತಪ್ಪ ಮಾನತಾಡಿದರು.

ಸಂದರ್ಭದಲ್ಲಿಹೊನ್ನೂರ್ಸ್ವಾಮಿ, ಗ್ಯಾಸ್ಓಬಣ್ಣ, ನಜೀರ್ಅಹಮದ್, ಪ್ರಿಯದರ್ಶಿ ಅಣಬೂರು ರಾಜಶೇಖರ್, ರಾಘವೇಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಾಬು ರಾಜೇಂದ್ರ ಪ್ರಸಾದ್, ದಲಿತ ಮುಖಂಡ ಶಂಭುಲಿಂಗಪ್ಪ, ಕರಿಬಸಪ್ಪ, ಅಲೆಮಾರಿ ಸಮುದಾಯದ ಮುಖಂಡ ಕುರಿ ಜಯ್ಯಣ್ಣ, ಗೌರಿಪುರ ಸತ್ಯಮೂರ್ತಿ, ಪೂಜಾರ್ಸಿದ್ದಪ್ಪ, ರಾಕೇಶ್, ಸಂದೀಪ್, ಜೀವನ್, ವಿಜಯ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!