ಕೊಪ್ಪಳ: ತಾಲೂಕಿನ ಚಿಲ್ಕಮುಖಿ ಹಾಗೂ ಯಲಂಗಿರಿ ಗ್ರಾಮದಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕೊಪ್ಪಳ ಜಿಲ್ಲೆ ಹಾಗೂ ತಾಲೂಕಿನ ಚಿಲ್ಕಮುಖಿ ಮತ್ತು ಯಲಂಗಿರಿ ಗ್ರಾಮದಲ್ಲಿ ಪಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಾಗೂ ಸೇವಾ ಮೊಬ್ ಸಹ ಭಾಗಿತ್ವದಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಗ್ರಾಮಸ್ಥರಿಗೆ ಬಿ.ಪಿ. ಶುಗರ್ ಹಾಗು ರಕ್ತ ತಪಾಸಣೆ ಮಾಡಿ, ಉಚಿತ ಮಾತ್ರೆಗಳನ್ನು ನೀಡಲಾಯಿತು. ಅಲ್ಲದೆ ಗ್ರಾಮಸ್ಥರಿಗೆ ಕೋವಿಡ್ 19 ಹಾಗೂ ರಕ್ತಹೀನತೆ ಬಗ್ಗೆ ಮುಂಜಾಗೃತಿ ಅಗತ್ಯವಿದೆ. ರೋಗ ತಡೆಗಟ್ಟಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗು ವಾಕ್ಸಿನೇಷನ್ ಪಡೆಯುವುದರ ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ನೀಡಲಾಯಿತು.
ಈ ಶಿಬಿರವನ್ನು ಆಯೋಜಿಸಿದ್ದ ಪಿನ್ ಕೇರ್ ಫೈನಾನ್ಸ್ ಬ್ಯಾಂಕಿನ ಮುಖ್ಯಸ್ಥರಾದ ಭೂಪತಿ ರೆಡ್ಡಿ, ಸುರೇಶ್ ಬಾಬು, ಪರಮೇಶ, ವೆಂಕಟೇಶ್, ವೈದ್ಯರಾದ ಆಡಿ. ವಿಜಯ ಹಾಗೂ ಗ್ರಾಮದ ಎಲ್ಲ ಸದಸ್ಯರು ಭಾಗವಹಿಸಿದ್ದರು.