ಸುದ್ದಿವಿಜಯ,ನವದೆಹಲಿ: ಈಗಂತೂ ವಾಟ್ಸ್ ಆ್ಯಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಆದರೆ ಯಾರಿಗೋ ಕಳುಹಿಸಬೇಕಾದ ಮೆಸೇಜ್ ಅನ್ನು ಮತ್ಯಾರಿಗೋ ಕಳುಹಿಸಿದರೆಅದನ್ನು ಡಿಲೀಟ್ ಮಾಡುವ ಅವಕಾಶ ಕೊಟ್ಟಿದೆ. ಅಪ್‌ನಲ್ಲಿ ನಾವು ಹಾಕುವ ಸಂದೇಶವನ್ನು ಡಿಲೀಟ್ ಮಾಡುವಾಗ ಬರುವ “ಡಿಲೀಟ್ ಫಾರ್ ಆಲ್’ ಆಯ್ಕೆಯ ಅವಧಿಯನ್ನು ಎರಡೂವರೆ ದಿನಗಳವರೆಗೆ ವಿಸ್ತರಿಸಲು ವಾಟ್ಸ್‌ಆ್ಯಪ್ ಸಂಸ್ಥೆ ಮುಂದಾಗಿದೆ.
ಪ್ರಸ್ತುತ ಈ ಆಯ್ಕೆಯ ಲಭ್ಯವಾಗುವ ಅವಧಿ 1 ಗಂಟೆ, 8 ನಿಮಿಷ ಹಾಗೂ 16 ಸೆಕೆಂಡ್‌ಗಳಷ್ಟಿದೆ. ಇದರಿಂದ ಆಗುತ್ತಿರುವ ಅನಾನುಕೂಲ ಏನೆಂದರೆ, ಈ ಅವಧಿ ದಾಟಿದ ನಂತರ ನಾವು ಕಳುಹಿಸಿದ್ದ ಸಂದೇಶವನ್ನು ಕೇವಲ ನನಗೆ ಕಾಣದಂತೆ ಮಾತ್ರ ಡಿಲೀಟ್ ಮಾಡಲು ಅವಕಾಶ ಸಿಗುತ್ತದೆ.
ನಾವು ಕಳುಹಿಸಿದ ವ್ಯಕ್ತಿ ಅಥವಾ ಗುಂಪಿನವರು ಈ ಮೆಸೇಜ್ ನೋಡುವುದನ್ನು ತಡೆಗಟ್ಟಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ, “ಡಿಲೀಟ್ ಫಾರ್ ಆಲ್’ನ ಅವಧಿ ವಿಸ್ತರಣೆಗೆ ನಿರ್ಧರಿಸಲಾಗಿದೆ ಕಂಪನಿ ತಿಳಿಸಿದೆ.