ಸುದ್ದಿವಿಜಯ,ಜಗಳೂರು: ಪೊಲೀಸ್ ಅಧಿಕಾರಿಯಾಗಿ ದಾವಣಗೆರೆ ಜಿಲ್ಲೆಯಲ್ಲೇ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಈಗ ಮಂಗಳೂರಿಗೆ ವರ್ಗಾವಣೆಯಾಗಿರುವ ಸಿಬಿ ರಿಷ್ಯಂತ್ ಕುರಿತು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಸ್ಪಿ ಸಿಬಿ ರಿಷ್ಯಂತ್ ಒಬ್ಬ ಉತ್ತಮ ಅಧಿಕಾರಿ,ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಜನರಿಗೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಜೀವನ ಉತ್ತಮವಾಗಿರಲಿ.
-ಶಿವಾನಂದ ಕಾಪಶಿ, ಜಿಲ್ಲಾಧಿಕಾರಿ
ಎಸ್ಪಿ ರಿಷ್ಯಂತ್ ತುಂಬಾ ಸಮಾಧಾನದ ವ್ಯಕ್ತಿ, ಸಮಸ್ಯೆಗಳನ್ನು ಹೇಳಿಕೊಂಡು ಬರೋರಿಗೆ ಪರಿಹಾರ ನೀಡುತ್ತಾರೆ, ಉತ್ತಮ ಆಫೀಸರ್, ಚೆನ್ನಾಗಿ ಆಡಳಿತ ಮಾಡಿದ್ದಾರೆ. ಜನರಿಗೆ ಅವರ ಕಂಡ್ರೆ ತುಂಬಾ ಪ್ರೀತಿ ಅಭಿಮಾನವು ಇದೆ.
-ಡಾ.ಕೆ.ಅರುಣ್, ದಾವಣಗೆರೆ ಎಸ್ಪಿ
ನಮ್ಮ ಎಸ್ಪಿ ರಿಷ್ಯಂತ್ ಸರ್ ಬಹಳ ಒಳ್ಳೆಗುಣ, ಅವರು ಅಧಿಕಾರಿಗಳಿಗೆ ಸಾಕಷ್ಟು ಗೌರವ ಕೊಡುತ್ತಿದ್ದರು. ಅದರಲ್ಲೂ ಆತ್ಮಗೌರವದಿಂದ ನಮ್ಮ ಸಿಬ್ಬಂದಿಗಳ ಜತೆ ನಡೆದುಕೊಳ್ಳುತ್ತಿದ್ದರು. ಅವರಿಂದ ಕಲಿಯುವುದು ಬಹಳ ಇದೆ. ತುಂಬಾ ಖಡಕ್ ಆಫೀಸರ್, ಎಲ್ಲರ ಕಷ್ಟಗಳನ್ನು ಕೇಳುತ್ತಿದ್ದರು. ಹಾಗೆಯೇ ಹೃದಯವಂತರು.
– ರಾಮಗೊಂಡ ಬಸರಗಿ, ಎಎಸ್ಪಿ
ಎಸ್ಪಿ ರಿಷ್ಯಂತ್ ಸರ್ ಎಲ್ಲರೊಂದಿಗೆ ಆತ್ಮೀಯವಾಗಿ ಇದ್ದರು, ಮೆಕ್ಕೆಜೋಳ ಮಾರಾಟ ಮಾಡಿ ಮೋಸ ಮಾಡಿದ ರೈತರಿಗೆ ಕೋಟಿ ಹಣವನ್ನು ವಾಪಸ್ ಕೊಡಿಸುವಲ್ಲಿ ಅವರ ಪಾತ್ರ ಪ್ರಮುಖ, ಹಾಗೆಯೇ ಅನೇಕ ಪ್ರಕರಣಗಳು, ಸೂಕ್ಷ್ಮ ಪ್ರಕರಣಗಳನ್ನು ನಿಧಾನವಾಗಿ ಬೇಧಿಸುತ್ತಿದ್ದರು. ಎಲ್ಲ ಸಿಬ್ಬಂದಿಗಳಿಗೂ ಅಚ್ಚುಮೆಚ್ಚಿನ ಮಾರ್ಗದರ್ಶಕರಾಗಿದ್ದರು. ಅವರ ಕಾಲಾವಧಿಯಲ್ಲಿ ಸಾಕಷ್ಟು ಕೆಲಸವಾಗಿದೆ.
– ಬಿ.ಎಸ್.ಬಸವರಾಜ್, ಡಿಎಸ್ಪಿ ಡಿಸಿಆರ್‍ಬಿ
ನಾನು ಕೆಲಸ ಮಾಡಿರುವ ಅಧಿಕಾರಿಗಳಲ್ಲಿ ರಿಷ್ಯಂತ್ ಸರ್ ತುಂಬಾ ಅಚ್ಚುಮೆಚ್ಚಿನ ಅಧಿಕಾರಿ, ಅವರ ಮಾರ್ಗದರ್ಶನದಲ್ಲಿ ಅನೇಕ ಕೇಸ್‍ಗಳನ್ನು ಹಿಡಿದಿದ್ದೇವೆ. ಅದರಲ್ಲೂ ಡಬಲ್ ರೋಡ್‍ನಲ್ಲಿ ಆದ ಮರ್ಡರ್ ಕೇಸ್ ತುಂಬಾ ಟ್ವೀಸ್ಟ್ ಇತ್ತು..ಟೆಕ್ನಿಕಲ್ ಆಗಿ ಆರೋಪಿಯನ್ನು ಹಿಡಿಯಲಾಗಿದೆ. ಅದರಲ್ಲಿ ಎಸ್ಪಿ ರಿಷ್ಯಂತ್ ಸರ್ ಮಾರ್ಗದರ್ಶನ ಬಹಳ ಇದೆ. ಹೀಗೆ ಅನೇಕ ಕೇಸ್‍ಗಳನ್ನು ಮಟ್ಟ ಹಾಕಲು ಅವರು ಮಾರ್ಗದರ್ಶನ ನೀಡುತ್ತಿದ್ದರು.
-ಮಲ್ಲೇಶ್ ದೊಡ್ಮನಿ, ಡಿಎಸ್ಪಿ
ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆ ಅವರ ಅವಧಿಯಲ್ಲಿಯೇ ಪೂರ್ಣಗೊಂಡಿದ್ದುಘಿ, ಉತ್ತಮ ಶಿಕ್ಷಕರನ್ನು ನೇಮಿಸುವಲ್ಲಿ ಅವರ ಪಾತ್ರ ಪ್ರಮುಖ. ಇನ್ನು ಮಕ್ಕಳು ಹೇಗೆ ಕಲಿಕಾಭ್ಯಾಸ ಮಾಡಬೇಕು, ಅವರಿಗೆ ಏನು ಬೇಕಾಗಿದೆ ಎಂಬುದನ್ನು ದೂರದೃಷ್ಟಿ ಇಟ್ಟುಕೊಂಡು ಮಕ್ಕಳಿಗೆ ಪೂರಕವಾದ ಕೆಲಸಗಳನ್ನು ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಿಬ್ಬಂದಿಗಳಿಗೆ ಅಚ್ಚುಮೆಚ್ಚಿನ ಅಧಿಕಾರಿ
-ಪ್ರಕಾಶ್, ಡಿಎಸ್ಪಿ, ಡಿಆರ್
ಹೊನ್ನಾಳಿಯಲ್ಲಿ ಕೆಲಸ ಮಾಡುವಾಗ ಅವರ ಮಾರ್ಗದರ್ಶನದಲ್ಲಿ ಅನೇಕ ಕೇಸ್‍ಗಳನ್ನು ಮಟ್ಟ ಹಾಕಲಾಗಿದೆ. ಅವರ ಜತೆ ಸಾಕಷ್ಟು ದಿನ ಕೆಲಸ ಮಾಡಿರುವ ಖುಷಿ ಇದೆ. ಈಗ ಮಂಗಳೂರಿಗೆ ಹೋಗಿದ್ದಾರೆ. ಅವರ ಬಗ್ಗೆ ಹೇಳೋದಕ್ಕೆ ಪದವೇ ಇಲ್ಲ ಒಳ್ಳೆಯದಾಗಲಿ
– ದೇವರಾಜ್, ಉಡುಪಿ ಪಿಐ
ಎಸ್ಪಿ ರಿಷ್ಯಂತ್ ಒಬ್ಬ ಉತ್ತಮ ಅಧಿಕಾರಿ ಯಾವುದೇ ಅಹಂ ಇಲ್ಲ, ಅವರ ಬಳಿ ಸಮಸ್ಯೆ ಹೇಳಿಕೊಂಡು ಹೋಗೋರಿಗೆ ಖಂಡಿತ ಪರಿಹಾರ ಸಿಗುತ್ತದೆ. ಸಾರ್ವಜನಿಕರ ಕಷ್ಟವನ್ನು ನಿಧಾನವಾಗಿ ಕೇಳುತ್ತಾರೆ. ಅವರ ಅಧಿಕಾರವಾದಿಯಲ್ಲಿ ದಾವಣಗೆರೆಯಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಉತ್ತರ ಸಿಕ್ಕಿದೆ. ಡಿಜಿಟೆಲ್ ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಅವರ ಪ್ರಯಾಣ ಸುಖಕರವಾಗಿರಲಿ.
– ಜೆ.ಆರ್.ಷಣ್ಮುಖಪ್ಪ, ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ
ಎಸ್ಪಿ ರಿಷ್ಯಂತ್‍ರ ಸೇವೆ ದಾವಣಗೆರೆಯಲ್ಲಿ ಉತ್ತಮವಾಗಿತ್ತು, ನಗರದ ನಾನಾ ಕಡೆ ಸಿಸಿ ಕ್ಯಾಮೆರಾಗಳನ್ನು ಹಾಕಿ ನಗರದ್ಯಾಂತ ಹದ್ದಿನ ಕಣ್ಣೀಟ್ಟಿದ್ದರು. ಎಲ್ಲಿ ಏನೇ ಘಟನೆ ನಡೆದರೂ ಪೊಲೀಸ್ರಿಗೆ ಮಾಹಿತಿ ಹೋಗುತ್ತಿತ್ತು. ಅವರ ಕಾಲಾವಧಿಯಲ್ಲಿ ಸಾಕಷ್ಟು ಕ್ರೈಂಗಳು ಕಡಿಮೆ ಆಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿದ್ದಾರೆ.
-ಮಂಜುನಾಥ್ ಗುಂಡಾಳ್, ಉದ್ಯಮಿ
ಶ್ರೀ ಸಿ.ಬಿ.ರಿಷ್ಯಂತ್ ಅವರು ಸುಮಾರು 2 ವರ್ಷಗಳಕಾಲ ದಾವಣಗೆರೆಯ ಎಸ್ ಪಿ ಆಗಿ ವೃತ್ತಿಪರ ಸೇವೆ ಸಲ್ಲಿಸಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪೊಲೀಸ್ ಮತ್ತು ಸಾರ್ವಜನಿಕ ಸಂಬಂಧಗಳಿಗೆ ಒತ್ತು ನೀಡಿ ಜನಪರ ಕೆಲಸ ಮಾಡಿ ಜನಸ್ನೇಹಿಯಾಗಿ ಜನಾನುರಾಗಿಯಾಗಿದ್ದಾರೆ. ತನ್ನ ಅಧೀನದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವೆಲ್ಫೇರ್ ಬಗ್ಗೆ ಗಮನಹರಿಸಿದ್ದಾರೆ.ನಮ್ಮ ದಾವಣಗೆರೆ ಜಿಲ್ಲೆಯ ನಾಗರಿಕರ ಶುಭ ಹಾರೈಕೆ ಇದೆ. ಪ್ರಸ್ತುತ ಮಂಗಳೂರಿನ ಎಸ್ ಪಿ ಆಗಿ ತೆರಳುತ್ತಿದ್ದಾರೆ. ಅವರಿಗೆ ಮುಂದಿನ ಸೇವಾವಧಿಯಲ್ಲಿಯೂ ಸಹ ಸಂಪೂರ್ಣ ಯಶಸ್ಸು
ದೊರೆಯಲಿ. -ಜಿ.ಎ.ಜಗದೀಶ್,ಎಸ್ ಪಿ,ನಿವೃತ್ತ. ದಾವಣಗೆರೆ.