‘ಮುತ್ತು’ಟ್ ಫೈನಾನ್ಸ್… ಯಾವ ರಾಶಿಯವರಲ್ಲಿ ಅಗ್ರೆಸ್ಸಿವ್ ಕಿಸ್ ಮಾಡ್ತಾರೆ ಗೊತ್ತಾ?

Suddivijaya
Suddivijaya January 5, 2023
Updated 2023/01/05 at 5:25 PM

ಸುದ್ದಿವಿಜಯ: ಜೇನಿನಲ್ಲೂ ಅಂಥ ಸಿಹಿಯಿಲ್ಲ ಮಾರಾಯರೇ.. ಹೂವಿನಲ್ಲೂ ಅಂಥ ಮಾದುರ್ಯವಿಲ್ಲ. ಆದರೆ ಸಂಗಾತಿಯ ತುಟಿಗಳಲ್ಲಿ ಇವೆಲ್ಲ ಜಬರ್ದಸ್ತಾಗಿವೆ ಅನ್ನುತ್ತಾರೆ ಸೆಕ್ಸ್ ಗುರು ಓಶೋ.

ತುಟಿಗಳಿಗೆ ಕೆಸಲ ಕೊಟ್ಟರಷ್ಟೇ ನಮ್ಮ ಪ್ರೀತಿ ಬಲು ತುಟ್ಟಿ! ಮುತ್ತೆಂದರೆ ಅದು ಮಧುರ ಅನುಭೂತಿ. ಮಿಗಿಲಾಗಿ ರಸಾನುಭೂತಿ. ಶೃಂಗಾರ ಸಾಗರದಲ್ಲಿ ಒದ್ದೆಯಾದಾಗ ಕೊಟ್ಟ ಬಿಸಿ ಕಾಫಿ. ಪ್ರೀತಿ ಪ್ರೇಮದ ಮೊದಲ ಕೊಡುಗೆಯೂ ಅದೇ ಸಂಗಾತಿ. ಬೇರ್ಯಾವುದೇ ವಿಚಾರದಲ್ಲಿ ರಾಜಿಯಾದರೂ ಈ ವಿಚಾರದಲ್ಲಿ ರಾಜಿಯೇ ಇಲ್ಲ.

ಮುತ್ತಿನಿಂದ ವಂಚಿತರಾದವರು ದುರದೃಷ್ಟರು ಅಂತಲೇ ಹೇಳಬೇಕು. ಅಷ್ಟರ ಮಟ್ಟಿಗೆ ಮುತ್ತು ಸಾರ್ವತ್ರಿಕ ಕ್ರಿಯೆ. ಮುತ್ತು ನೀಡುವುದು ಹೇಗೆ ಎಂದು ಎಲ್ಲಿಯೂ ಕಲಿಸುವುದಿಲ್ಲ. ಎಲ್ಲರೂ ತಮಗೆ ಕಂಡಂತೆ ಖುಷಿಯಾಗುವಂತೆ ಮುತ್ತಿಕ್ಕುತ್ತಾರಾದರೂ ಅನುಭವಿಸಿದಂತೆ ಅದರ ವಿಧಾನ ಬದಲಾಗುತ್ತದೆ.

ನಾವು ಭಾರತೀಯರು ಸಾಮಾನ್ಯವಾಗಿ ರಾಶಿ ನಕ್ಷತ್ರಗಳ ಮೇಲೆ ವ್ಯಕ್ತಿಗಳ ಸ್ವಭಾವ, ಕ್ರಿಯೆಗಳನ್ನು ಅವುಗಳೇ ನಿಯಂತ್ರಿಸುತ್ತವೆ ಎಮದು ನಂಬುವವರು. ಈ ಆಧಾರದ ಮೇಲೆ ಆಯಾ ರಾಶಿಗಳ ವ್ಯಕ್ತಿಗಳು ಹೇಗೆ ಮುತ್ತಿಕ್ಕುತ್ತಾರೆ ಎನ್ನುವುದನ್ನು ಒಂದು ಅಂದಾಜು ಮಾಡಬಹುದಂತೆ.

ಸಂಗಾತಿಗಳನ್ನು ನೀವು ಯಾವ ರೀತಿ ಮುತ್ತಿಕ್ಕಲು ಬಯಸುತ್ತೀರಿ? ಹೇಗೆ ಮುತ್ತು ನೀಡುತ್ತೀರಿ? ಎಂಬುದನ್ನು ರಾಶಿಯ ಮೇಲೆ ನಿರ್ಧಾರಿಸಲಾಗಿದೆ. ಅದನ್ನು ಅರಿಯಬೇಕು ಎಂಬ ಕುತೂಹಲ ಇದ್ದೇ ಇದೆ ಅಲ್ವೇ ಇಲ್ಲಿ ನೋಡಿ. ನೀವು ಹೇಗೆ ಚುಂಬಿಸಲು ಬಯಸುತ್ತೀರಿ, ಹೇಗೆ ಮುತ್ತಿಕ್ಕುವಿರಿ ಎಂಬ ಗುಟ್ಟು ಇಲ್ಲಿ ರಟ್ಟಾಗಿದೆ.

ಮೋಸ್ಟ್ ಅಗ್ರೆಸ್ಸಿವ್ ಕಿಸ್ ಕೊಡುವ ರಾಶಿಗಳು:
ಕಿಸ್ ಕೊಡುವ ವಿಚಾರದಲ್ಲಿ ಮೇಷ. ಸಿಂಹ ಹಾಗೂ ಧನು ರಾಶಿಯವರದ್ದು ಒಂದು ವಿಧ. ಅವರು ತುಂಬಾ ಪ್ಯಾಷನ್ ಆಗಿ ಚುಂಬಿಸುತ್ತಾರಂತೆ. ಅಗ್ರೆಸ್ಸಿವ್ ಆಗಿ ಚುಂಬಿಸುವುದೂ ಇವರಿಗೆ ಪ್ರೀತಿ. ಆದರೂ ಅವರಲ್ಲೇ ಭಿನ್ನತೆಯಿದೆ.

ಮೇಷ ರಾಶಿಯವರು ಕಾಮಾಸಕ್ತಿಯ ಚುಂಬನಕ್ಕೆ ಎತ್ತಿದ ಕೈ. ಒಂದಾದ ಮೇಲೆ ಒಂದರಂತೆ ತುಂಬಾ ಮುತ್ತುಗಳನ್ನು ಉದುರಿಸುತ್ತಾ ರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಇನು ಸಿಂಹ ರಾಶಿಯವರು ಸ್ವಲ್ಪ ಒರಟಾದ ಮುತ್ತು ನೀಡುತ್ತಾರೆ. ಈ ಸಮಯದಲ್ಲಿ ಸಣ್ಣಗೆ ಚುಚ್ಚುವುದು ಸಹ ಅವರಿಗೆ ಇಷ್ಟವಂತೆ. ಧನು ರಾಶಿಯವರಿಗೆ ಅಚ್ಚರಿದಾಯಕ ಮುತ್ತಿಕ್ಕುವುದರಲ್ಲಿ ಒಂದು ಕೈ ಮೇಲಂತೆ. ಸುಮ್ಮನೆ ಮಾತಿನ ಮಧ್ಯೆಯೂ ಆಗಾಗ್ಗೆ ಚುಂಬಿಸುತ್ತಲೇ ಇರುತ್ತಾರೆ ಎಂದು ತಿಳಿದು ಬಂದಿದೆ.

ಇದರಿಂದ ಸಂಗಾತಿಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ ಎನ್ನುತ್ತಾರೆ ಶೃಂಗಾರ ತಜ್ಞರು.

ಉಳಿದ ರಾಶಿಗಳ ಮುತ್ತಿನ ಕತೆ ಮುಂದಿನ ಭಾಗದಲ್ಲಿ….

Share this Article
Leave a comment

Leave a Reply

Your email address will not be published. Required fields are marked *

error: Content is protected !!