ಸುದ್ದಿವಿಜಯ ಜಗಳೂರು.ದೇವಸ್ಥಾನಗಳು ತೋರ್ಪಡಿಕೆಗೆ ನಿರ್ಮಾಣವಾಗದೆ, ಭಕ್ತಿ, ಭಾವೈಕ್ಯತೆಯಿಂದ ಕೂಡಿರಬೇಕು ಎಂದು ಶಾಸಕ ಎಸ್.ವಿ ರಾಮಚಂದ್ರ ಹೇಳಿದರು.
ಜಗಳೂರು ವಿಧಾನ ಸಭಾ ಕ್ಷೇತ್ರದ ಹುಚ್ಚಂಗಿದುರ್ಗದಲ್ಲಿ ಮಂಗಳವಾರ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನ ಉದ್ಘಾಟಿಸಿ ಅತನಾಡಿದರು.
ಜಗಳೂರು ತಾಲೂಕಿನಲ್ಲಿ ಧಾರ್ಮಿಕ ಪುಣ್ಯ ಕ್ಷೇತ್ರಗಳಿವೆ, ವಿಶೇಷವಾಗಿ ಕೆಳಗೋಟೆ ಸಮೀಪದಲ್ಲಿ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ಅಪರೂಪದ ಪ್ರಾಣಿ ಕೊಂಡುಕುರಿ ಹೊಂದಿದೆ. ಜತೆಗೆ ಅನೇಕ ಜಾತಿ ಪ್ರಾಣಿ, ಪಕ್ಷಿಗಳಿಂದ ಕೂಡಿದೆ.ಇಲ್ಲಿನ ಔಷಧ ಗಿಡಮೂಲಿಕೆಗಳು ಕಂಡು ಬಂದಿವೆ. ಇಂತಹ ಸ್ಥಳವನ್ನು ನೋಡಬೇಕು, ಬೆಳೆಸಬೇಕು ಎಂದರು.
ದೇವಸ್ಥಾನ ನಿರ್ಮಾಣಕ್ಕೆ ಪಟ್ಟ ಶ್ರಮದಂತೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಬದುಕಿನ ದಾರಿ ತೋರಿಸಬೇಕು. ಸಮಾಜದಲ್ಲಿಎಷ್ಟೆ ಆಸ್ತಿ, ಅಂತಸ್ತು ಗಳಿಸಿದರು ಶಿಕ್ಷದ ಮುಂದೆ ಎಲ್ಲವು ಶೂನ್ಯ, ಹಣ ಇಂದು ಇದ್ದು, ನಾಳೆ ಇಲ್ಲವಾಗಬಹದು ಆದರೆ ಅಕ್ಷರ ಜ್ಞಾನ ದೇಹದಲ್ಲಿ ಉಸಿರು ಇರುವವರೆಗೂ ಉಳಿದಿರುತ್ತದೆ ಹಾಗಾಗಿ ಪ್ರತಿ ಕುಟುಂಬದಲ್ಲೂ ಶಿಕ್ಷಣ ಮಹತ್ವ ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಮಾಸ್ಟರ್ , ಎಸ್ ಹನುಮಂತಪ್ಪ , ಶಿವಕುಮಾರ ಸ್ವಾಮಿ , ಕಾಟದ ಕರಿಬಸಪ್ಪ , ಭರಮಣ್ಣ , ಕೆಂಚಪ್ಪ , ಯುವರಾಜ್, ವಿರೇಶ್, ಸಿದ್ದೇಶ್ ಹಡಪದ, ಸೇರಿದಂತೆ ಹಲವರು ಉಪಸ್ಥಿರಿದ್ದರು.