ಜಗಳೂರು: ತಾಲೂಕಿನಲ್ಲಿ ಎಣ್ಣೆಕಾಳು, ದ್ವಿದಳ ಧಾನ್ಯಗಳ ಬೆಳೆ ದ್ವಿಗುಣ!

Suddivijaya
Suddivijaya August 11, 2022
Updated 2022/08/11 at 4:47 AM

ಸುದ್ದಿವಿಜಯ,ಜಗಳೂರು(ವಿಶೇಷ ವರದಿ):ದಾವಣಗೆರೆ ಜಿಲ್ಲೆಯಲ್ಲಿಯೇ ಅತ್ಯಂತ ವೈವಿಧ್ಯಮಯ ಬೆಳೆ ಹಾಗೂ ಪ್ರಯೋಗಶೀಲ ಕೃಷಿಗೆ ಹೆಸರಾಗಿರುವ ತಾಲೂಕು ಎಂದರೆ ಅದು ಜಗಳೂರು. ಅತಿ ಮಳೆಯೂ ಬಾರದೇ ಸಮಸೀತೋಷ್ಣ ವಲಯವಾಗಿರುವ ಕಾರಣ ರೈತರಿಗೆ ಸರ್ವ ಬೆಳೆಗಳನ್ನು ಬೆಳೆಯಲು ಇಲ್ಲಿ ಪೂರಕವಾದ ವಾತಾವರಣವಿದೆ.

ತಾಲೂಕಿನಲ್ಲಿ ಪುರಾತನ ಬೆಳೆಗಳಾದ ರಾಗಿ, ಮೆಕ್ಕೆಜೋಳ, ಶೇಂಗಾ, ಹತ್ತಿ, ತರಕಾರಿ ಬೆಳೆಗಳಾದ ಮೆಣಸಿನಕಾಯಿ, ಈರುಳ್ಳಿ, ಬದನೇಕಾಯಿ ಹೀಗೆ ಅಲ್ಪಾವಯ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು, ರೋಗ ಭಾದೆ ಮಳೆಯ ಕೊರತೆ ಸೇರಿ ಹಾಕಿದ ಬಂಡವಾಳ ಬಾರದ ಕಾರಣ ಖರ್ಚು ಹೆಚ್ಚಾಗಿ ಋಣಭಾರದಿಂದ ಅದೆಷ್ಟೋ ರೈತರು ಬೇಸಾಯದಿಂದ ವಿಮುಖರಾಗಿ ಮಹಾನಗರಗಳತ್ತ ವಲಸೆ ಹೋಗುತ್ತಿದ್ದರು.

ಆದರೆ ಕಳೆದ ಮೂರು ವರ್ಷಗಳಿಂದ ಅತಿಯಾದ ಮಳೆಯ ಜೊತೆಗೆ 57 ಕೆರೆಗಳನ್ನು ತುಂಬಿಸುವ ತುಂಗಭದ್ರಾ ಏತ ನೀರಾವರಿ ಯೋಜನೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಪ್ರಯೋಗಾತ್ಮಕ ಬೆಳೆಗಳನ್ನು ಬೆಳೆಯುವಲ್ಲಿ ಮುಂದಾಗಿದ್ದಾರೆ.

ಅಡಕೆ, ಬಾಳೆ, ಪಪ್ಪಾಯ, ದಾಳಿಂಬೆ, ಸೀಬೆ ಹೀಗೆ ತೋಟಗಾರಿಕೆ ಬೆಳೆಗಳತ್ತ ವಾಲುತ್ತಿದ್ದರೂ ಸಹ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವತ್ತ ಚಿತ್ತ ಹರಿಸಿರುವುದು ಮಣ್ಣಿನ ಫಲವತ್ತತೆ ಜೊತೆಗೆ ಆರ್ಥಿಕ ಸಬಲೀಕರಣದ ಭರವಸೆ ಮೂಡಿದೆ.

ದ್ವಿದಳ ಧಾನ್ಯಗಳ ಬೆಳೆ ಲಾಭದಾಯಕ:
ದ್ವಿದಳ ಧಾನ್ಯಗಳಲ್ಲಿ ಪೌಷ್ಠಿಕಾಂಶಗಳು ಹೇರಳವಾಗಿವೆ. ಅನಾದಿ ಕಾಲದಿಂದಲೂ ಅವುಗಳು ಭಾರತೀಯರಲ್ಲಿ ರೂಢಿಯಲ್ಲಿದೆ. ಹೀಗಾಗಿ ದ್ವಿದಳ ಧಾನ್ಯಗಳು ನಮ್ಮ ಸಂಪ್ರದಾಯಯಿಕ ಬೆಳೆಗಳು. ಇತ್ತೀಚಿನ ವರ್ಷಗಳಲ್ಲಿ ‘ಸಿರಿಧಾನ್ಯ’ ಎಂಬ ಪಟ್ಟ ಬಂದ ಮೇಲೆ ಅವುಗಳ ಬೆಲೆ ಗಗನಕ್ಕೇರಿವಿವೆ.

ತಮಗೆ ಬೇಕಿರುವ ಸಾರಜನಕದ ಶೇ.90ರಷ್ಟನ್ನು ತನ್ನಿಂದಲೇ ಸ್ಥೀರಿಕರಿಸಿಕೊಂಡ ಸಾರಜನಕದಿಂದ ಪಡೆದುಕೊಳ್ಳುತ್ತವೆ. ದ್ವಿದಳ ಧಾನ್ಯಗಳ ಪೈರಿಗೆ ಬೇರುಗಳಲ್ಲಿ ಸಾಮಾನ್ಯವಾಗಿ ದುಂಡಾಣುಗಳಿರುತ್ತವೆ (ಸಣ್ಣ ಗಂಡು). ಇವುಗಳಿಂದ ವಾತಾವರಣದ ಸಾರಜನಕ ಸ್ಥೀರಿಕರಣಕ್ಕೆ ಸಹಾಯವಾಗುತ್ತದೆ ಎಂಬುದು ಕೃಷಿ ವಿಜ್ಞಾನಿಗಳ ಅಭಿಪ್ರಾಯ.

ಜಗಳೂರು ತಾಲೂಕಿನಾದ್ಯಂತ ಕಪ್ಪು, ಕೆಂಪು ಮಿಶ್ರಿತ ಭೂಮಿಯಾಗಿದ್ದು ಸರ್ವಋತುವಿನಲ್ಲೂ ಬೆಳೆಗಳನ್ನು ಬೆಳೆಯಲು ಇಲ್ಲಿ ಪೂರಕ ವಾತಾವರಣವಿದೆ. ಮುಂಗರಿನಲ್ಲಿ ಮೆಕ್ಕೇಜೋಳ, ಶೇಂಗಾ, ಹತ್ತಿ, ರಾಗಿ, ಜೊತೆಗೆ ದ್ವಿದಳ ಧಾನ್ಯಗಳ ಬೆಳೆಗಳು ಇಲ್ಲಿ ಪ್ರಧಾನ ಬೆಳೆಗಳು ವಿವಿಧ ಮಣ್ಣು ಮತ್ತು ವಾತಾವರಣಕ್ಕೆ ಹೊಂದಿಕೊಂಡು ಅಲ್ಪಕಾಲದಲ್ಲೇ ಬೆಳೆಯುವುದರಿಂದ ಮಿಶ್ರ ಬೆಳೆ, ಬಹು ಬೆಳೆ, ಆವರ್ತ ಅಥವಾ ಸರದಿ ಬೆಳೆಗಳಾಗಿ ಉದ್ದು, ಹೆಸರು ಅಲಸಂದೆ, ತೊಗರಿ, ಸೋಯಾಬೀನ್, ಅವರೇ ಬೆಳೆಗಳನ್ನು ಈ ಭಾಗದಲ್ಲಿ ಎತೇಚ್ಛವಾಗಿ ಬೆಳೆಯಲಾಗುತ್ತದೆ.

ತಾಲೂಕಿನ ಸೊಕ್ಕೆ, ಕಲ್ಲೇದೇವರಪುರ, ದೊಣೆಹಳ್ಳಿ, ಬೆಣ್ಣೆಹಳ್ಳಿ, ಮುಸ್ಟೂರು, ಗಡಿಮಾಕುಂಟೆ, ಗೌರಿಪುರ, ಕಾನನಕಟ್ಟೆ, ಸಿದ್ದಮ್ಮನಹಳ್ಳಿ, ತೋರಣಗಟ್ಟೆ, ಕಸಬ ಹೋಬಳಿಯ ಬಹುತೇಕ ಗ್ರಾಮಗಳು, ಹೊಸಕೆರೆ ಭಾಗದ ಅನೇಕ ಹಳ್ಳಿಗಳಲ್ಲಿ ತೊಗರಿ, ಅಲಸಂದೆ, ಉದ್ದು, ನೆಲಗಡಲೆ, ಕಡಲೆ, ಉರುಳಿ, ಅವರೆ ಸೇರಿ ದ್ವಿದಳ ಧಾನ್ಯಗಳನ್ನು ರೈತರು ಬಿತ್ತನೆ ಮಾಡುತ್ತಾರೆ.

ಎರಡು ವರ್ಷಗಳ ಬಿತ್ತನೆ ಮಾಹಿತಿ
ಬೆಳೆ                    2021-22                             2022-23

ತೊಗರಿ-          656.68 ಹೆ.                              1085 ಹೆಕ್ಟೇರ್ ಪ್ರಗತಿ
ಶೇಂಗಾ-           5487.09 ಹೆ.                          4200 ಹೆಕ್ಟೇರ್ ಪ್ರಗತಿ
ಹುರುಳಿ-        11.25 ಹೆ.                                  40.25 ಹೆಕ್ಟೇರ್ ಪ್ರಗತಿ
ಸೂರ್ಯಕಾಂತಿ-877.98ಹೆ.                           120 ಹೆಕ್ಟೇರ್ ಪ್ರಗತಿ
ಅವರೆ-           90.06 ಹೆ.                                 125 ಹೆ. ಪ್ರಗತಿ
ಅಲಸಂದೆ-     2.24ಹೆ.                                    ಬಿತ್ತನೆ ಪ್ರಗತಿ

ಸಮ ಸೀತೋಷ್ಣವಲಯವಾಗಿರುವ ಜಗಳೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ವರದಿಯಲ್ಲಿ ರೆ`ತರು ನಮೂದಿಸಿರುವ ಫಸಲು ಉತ್ಕøಷ್ಟವಾಗಿ ಬೆಳೆದಿದೆ. ಪ್ರಸ್ತುತ ವರ್ಷ ಉತ್ತಮ ಮಳೆಯಿಂದ ಇಳುವರಿ ಹೆಚ್ಚಾಗುವ ನಿರೀಕ್ಷೆಯಿದೆ. ಅಡಕೆಯ ಮಧ್ಯೆ ತೊಗರಿ, ಸೋಯಾ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬೆಳೆದರೆ ಅಡಕೆ ಗಿಡಗಳಿಗೆ ಅತಿಯಾದ ನೀರಿನ ಅವಶ್ಯಕತೆಯಿರುವುದಿಲ್ಲ. ದ್ವಿದಳ ಧಾನ್ಯಗಳ ಬೆಳೆಗಳು ಸೃಷ್ಟಿಸುವ ಸಾರಜನಕದಿಂದಲೇ ಅಡಕೆ ಸೇರಿದಂತೆ ಎಲ್ಲ ತೋಟಗಾರಿಕಾ ಬೆಳೆಗಳಿಗೆ ನೆರವಾಗುತ್ತವೆ. ಜೊತೆಗೆ ಎಲೆ ಉದುರುವುದರಿಂದ ಸಾವಯವ ಗೊಬ್ಬರ ಸೃಷ್ಟಿಯಾಗುತ್ತದೆ. ರೈತರು ಹೆಚ್ಚು ದ್ವಿದಳ ಧಾನ್ಯಗಳ ಬೆಳೆಗಳನ್ನು ಬೆಳೆದರೆ ಖರ್ಚು ಕಡಿಮೆಯಾಗಿ ಆರ್ಥಿಕ ಲಾಭಗಳಿಸಬಹುದು.

-ಮಿಥುನ್ ಕೀಮಾವತ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ, ಜಗಳೂರು
-ಮಿಥುನ್ ಕೀಮಾವತ್, ತಾಲೂಕು ಸಹಾಯಕ ಕೃಷಿ ನಿರ್ದೇಶಕ, ಜಗಳೂರು

ಮೆಕ್ಕೆಜೋಳಕ್ಕೆ ಸೈನಿಕ ಹುಳುಬಾಧೆ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ. ಆದರೆ ಬಹುವಾರ್ಷಿಕ ಬೆಳೆಯಾದ ಅಡಕೆ ಮಧ್ಯೆ ಸೋಯಾಬಿನ್ ಅನ್ನು ನಾವು ಮೂರು ಎಕರೆಯಲ್ಲಿ ಬಿತ್ತನೆ ಮಾಡಿದ್ದೇವೆ. ಕೇವಲ 100 ದಿನಗಳಲ್ಲೇ ಕಟಾವಿಗೆ ಬರುವುದರಿಂದ ಹಾಕಿದ ಬಂಡವಾಳ ಬೇಗನೇ ಬರುವ ನಿರೀಕ್ಷೆಯಿದೆ. ದ್ವಿದಳ ಧಾನ್ಯಗಳು ನೇರವಾಗಿ ಆಹಾರವಾಗಿ ಸ್ವೀಕರಿಸುತ್ತೇವೆ ಹೀಗಾಗಿ ಬೇಡಿಕೆ ಹೆಚ್ಚಾಗಿದೆ. ರೈತರು ಒಂದೇ ರೀತಿಯ ಬೆಳೆ ಬೆಳೆಯುವ ಬದಲು ಮಿಶ್ರಬೆಳೆ ಬೆಳೆದರೆ ನಷ್ಟಕ್ಕೀಡಾಗುವುದು ತಪ್ಪುತ್ತದೆ.
ಬಸವನಗೌಡ, ಬಿದರಕೆರೆ, ರೈತ ಉತ್ಪಾದಕ ಕಂಪನಿ ನಿರ್ದೇಶಕರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!