ಸುದ್ದಿವಿಜಯ,ಜಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ಪ್ರತಿ ಮನೆ, ಸರಕಾರಿ ಕಚೇರಿ ಸಂಘ ಸಂಸ್ಥೆಗಳ ಮೇಲೆ ಪ್ರತಿಯೊಬ್ಬರೂ ತ್ರಿವರ್ಣ ಧ್ವಜ ಹಾರಿಸಿ ಎಂದು ಅರಿವು ಮೂಡಿಸಲು ಶನಿವಾರ ಪಟ್ಟಣದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬೃಹತ್ ಜಾಥಾ ನಡೆಸಿದರು.
ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಜೆ.ಎಂ. ಇಮಾಂ ಮೆಮೋರಿಯಲ್ ಸ್ಕೂಲ್, ಆರ್ವಿಎಸ್ ಶಾಲೆ, ಎನ್ಎಂಕೆ ಶಾಲಾ ವಿದ್ಯಾರ್ಥಿಗಳು, ನಾಲಂದ ಪದವಿ ಪೂರ್ವಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೇಡರಕಣ್ಣಪ್ಪ ಶಾಲೆ, ಹನಿಬೀ ಸ್ಕೂಲ್, ಹೊರಕೆರೆ ಸರಕಾರಿ ಶಾಲೆ, ಸೌತ್ಕೆನರಾ ಶಾಲೆ ಸೇರಿ ಅಂದಾಜು 2000 ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಿರಂಗ ಧ್ವಜ ಹಿಡಿದು ಭಾರತ್ ಮಾತಾಕಿ ಜೈ ಎಂದು ಜಯಘೋಷ ಕೂಗಿದರು.
ಬೃಹತ್ ಜಾಥಾ ಗಾಂಧಿ ವೃತ್ತ, ಅಂಬೇಡ್ಕರ್ ವೃತ್ತ, ನೆರಹೂ ರಸ್ತೆ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಈ ಜಾಥಾದಲ್ಲಿ ತಾಲೂಕು ಶಿಕ್ಷಣ ಇಲಾಖೆ ಬಿಇಒ ಉಮಾದೇವಿ, ಕಚೇರಿ ಸಿಬ್ಬಂದಿಗಳು, ತಾಲೂಕು ಪಂಚಾಯಿತಿ ಸಿಬ್ಪಬಂದಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಕಂದಾಯ ನಿರೀಕ್ಷಕರಾದ ಕುಬೇರ್ನಾಯ್ಕ್, ಪಪಂ ನೂತನ ಅಧ್ಯಕ್ಷರಾದ ವಿಶಾಲಾಕ್ಷಿ, ಉಪಾಧ್ಯಕ್ಷರಾದ ನಿರ್ಮಲಕುಮಾರಿ, ಮಾಜಿ ಅಧ್ಯಕ್ಷ ಸಿದ್ದಪ್ಪ, ತಿಪ್ಪೇಸ್ವಾಮಿ, ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಆಯಾ ಶಾಲಾ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಭಾಗಿಯಾಗಿ. ರಾಷ್ಟ್ರಭಕ್ತಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.