ಜನರೇ ಎಚ್ಚರ ರೀಲ್ಸ್ ಮಾಡುವ ಮುನ್ನ ಈ ಸುದ್ದಿ! ಹೈದರಾಬಾದ್ ನಲ್ಲಿ ಏನಾಯ್ತು ಗೊತ್ತಾ?

Suddivijaya
Suddivijaya September 5, 2022
Updated 2022/09/05 at 6:24 AM

ಸುದ್ದಿವಿಜಯಹೈದರಾಬಾದ್ : ರೈಲ್ವೆ ಹಳಿ ಬಳಿ ರೀಲ್ಸ್ ಮಾಡಲು ಹೋಗಿ ಯುವಕನಿಗೆ ರೈಲು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಜಿಪೇಟ್‌ನಲ್ಲಿ ನಡೆದಿದೆ.

ಈಗಿನ ಯುವಕರು ಟಿಕ್ ಟಾಕ್, ರೀಲ್ಸ್ ಮಾಡುವುದರಲ್ಲೇ ಹೆಚ್ಚು ಸಮಯ ವ್ಯರ್ಥಮಾಡುತ್ತಿದ್ದಾರೆ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳದ್ದೇ ಕಾರುಬಾರು ಹಾಗಾಗಿ ಒಂದಲ್ಲಾ ಒಂದು ರೀತಿಯಲ್ಲಿ ಯುವಕರು ತಮ್ಮ ಮೊಬೈಲ್ ಗಳಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದು ಜಾಯಮಾನವಾಗಿದೆ, ಅಲ್ಲದೆ ಈ ರೀತಿಯ ವಿಡಿಯೋ ಮಾಡಲು ಯುವಕರು ಯಾವ ರೀತಿಯ ಅಪಾಯ ಎದುರಿಸಲೂ ಸಿದ್ದ. ಅಂತದ್ದೇ ಒಂದು ಅಪಾಯವೊಂದನ್ನು ತೆಲಂಗಾಣದ ಯುವಕನೊಬ್ಬ ಎದುರುಹಾಕಿ ಈವಾಗ ಆಸ್ಪತ್ರೆಗೆ ದಾಖಲಾಗಿದ್ದಾನೆ.

ತೆಲಂಗಾಣದ ಅಕ್ಷಯ್ ರಾಜ್ ಎಂಬ ಯುವಕ ತನ್ನ ಸ್ನೇಹಿತನ ಜೊತೆ ರೈಲ್ವೆ ಹಳಿ ಬಂದು ರೀಲ್ಸ್ ಮಾಡಲು ಬಂದಿದ್ದಾನೆ ರೈಲು ಹಳಿ ಬಳಿ ರೈಲು ಬರುತ್ತಿರುವ ವೇಳೆ ಹಳಿಯ ಬದಿಯಲ್ಲಿ ನಡೆದುಕೊಂಡು ಬರುವ ವಿಡಿಯೋ ಮಾಡುತ್ತಿದ್ದ ವೇಳೆ ಯುವಕನ ಭುಜಕ್ಕೆ ರೈಲು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಸದ್ಯ ಯುವಕನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆರೀಲ್ಸವಮಾಡುವಾಗ

ರೈಲ್ವೇ ಹಳಿಗಳ ಬಳಿ ಸಂಚರಿಸಬೇಡಿ, ಇದು ಮಾರಣಾಂತಿಕ ಅಪಘಾತಗಳಿಗೆ ಕಾರಣವಾಗಬಹುದು ಎಂದು ರೈಲ್ವೆ ಪೊಲೀಸರು ಪದೇ ಪದೇ ಎಚ್ಚರಿಸುತ್ತಿದ್ದರೂ ಯುವಕರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಹಾಗಾಗಿ ಅಪಘಾತಗಳು ಹೆಚ್ಚುತ್ತಿವೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!