ಸುದ್ದಿವಿಜಯ ಜಗಳೂರು.ಸಂಸ್ಕಾರಯುತ ಕುಟುಂಬದಲ್ಲಿ ಶ್ರದ್ದೆ ,ಭಯ, ಭಕ್ತಿ ತುಂಬಿರುತ್ತದೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ತಾಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಭಾನುವಾರ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಭೂಮಿಯ ಮೇಲೆ ಹುಟ್ಟಿದ ಪ್ರತಿ ಮನುಷ್ಯನಿಗೂ ಕಷ್ಟ, ಸುಖಗಳಿವೆ, ದೇವಾನು ದೇವತೆಗಳಿಗೆ ಸಂಕಷ್ಟ ತಪ್ಪಿಲ್ಲಾ, ಮನುಷ್ಯ ಪ್ರಾಣಿಯಾದ ನಮಗೆ ತಪ್ಪುವುದೇ? ಆದರೆ ಇದರ ನಡುವೆ ಭಗವಂತನ ನಾಮಸ್ಮರಣೆಯಿಂದ ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ ಎಂದರು.
ಭಾರತ ಸಾಧು ಸಂತರು ಬಾಳಿ ಬದುಕಿದ ನೆಲ. ಹಾಗಾಗಿ ಮಾನವರು ಬದುಕಿರುವಾಗ ಸದ್ಗುಣ ಬೆಳೆಸಿಕೊಂಡು ಸಂಸ್ಕಾರದ ಜೀವನ ನಡೆಸುತ್ತಾ ದಾನ ಧರ್ಮ ಪುಣ್ಯದ ಕಾರ್ಯ ಮಾಡಿದರೆ ಮಾತ್ರ ಜನ್ಮ ಸಾರ್ಥಕವಾಗಲಿದೆ ಎಂದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಜಗಳೂರು ತಾಲೂಕಿ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿದ ಪುಣ್ಯಭೂಮಿಯಾಗಿದೆ. ನೂರಾರು ವರ್ಷಗಳಿಂದಲೂ ಕಣ್ವಕುಪ್ಪೆ ಗವಿಮಠದಲ್ಲಿ ಭಕ್ತಿ ಪರಂಪರೆ ನಡೆದುಕೊಂಡು ಬಂದಿದೆ. ಈಗಿರುವ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಶ್ರೀಗಳು ಕೇದಾರನಾಥನ ಸಾನಿದ್ಯದಲ್ಲಿ ವಿಶೇಷ ಪೂಜೆಗಳಲ್ಲಿ ಸಲ್ಲಿಸಿ ಜಗಳೂರನ್ನು ದೇಶಕ್ಕೆ ಪರಿಚಿಯಿಸಿದ್ದಾರೆ ಇಂತಹ ಪುಣ್ಯ ಕ್ಷೇತ್ರದಲ್ಲಿ ಹುಟ್ಟಿದ ನಾವೆಲ್ಲರೂ ಧನ್ಯರು ಎಂದರು.
ಕ್ಷೇತ್ರದ ಅಭಿವೃದ್ದಿಗೆ ಎಲ್ಲರು ಒತ್ತು ನೀಡಬೇಕಾಗಿದೆ. ಪ್ರತಿ ನಿತ್ಯ ನೂರಾರು ಭಕ್ತರು ಶ್ರಿಗಳ ದರ್ಶನ ಬರುತ್ತಾರೆ. ಅಗತ್ಯ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕಾಗಿದೆ. ಮಂಜುನಾಥ್ ಪ್ರಸಾದ್ ಸುಮಾರು 6 ಕೋಟಿ ಅನುದಾನವನ್ನು ನೀಡಿರುವುದು ಶ್ಲಾಘನೀಯ ಎಂದರು.
ಜಿ.ಪಂ ಸದಸ್ಯ ಲಿಂಗಣ್ಣ ಪೂಜಾರ್, ಮಾಜಿ ಸದಸ್ಯ ಮಂಜುನಾಥ್, ದಾವಣಗೆರೆ – ಹರಿಹರದ ಹರ್ಬನ್ ಬ್ಯಾಂಕ್ ಅಧ್ಯಕ್ಣ ಮುರುಗೇಂದ್ರಯ್ಯ ಮಾತನಾಡಿದರು.
ಈ ಸಂಧರ್ಭದಲ್ಲಿ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ , ಲೋಕೊಪಾಯೊಗಿಬಿಲಾಖೆಯ ಎ ಇ ಇ. ರುದ್ರಪ್ಪ, ಕೆಚ್ಚೆನಹಳ್ಳಿ ಗ್ರಮಾ ಪಂಚಾಯಿತಿ ಅಧ್ಯಕ್ಷೆ ಸುಲೋಚನಮ್ಮ ಹನುಮಂತಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.