ಸುದ್ದಿವಿಜಯ,ಜಗಳೂರು: ವಿಧಾನ ಸಭಾ ಕ್ಷೇತ್ರ ಚುನಾವಣೆ ಇನ್ನು ಎಂಟು ತಿಂಗಳು ಇರುವಾಗಲೇ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯ ಚುರುಕು ಗೊಂಡಿದೆ. ಜಗಳೂರು ವಿಧಾನ ಸಭಾ ಕ್ಷೇತ್ರದ ಅರಸೀಕೆರೆ ಹೋಬಳಿ ವ್ಯಾಪ್ತಿಯ ಚಟ್ನಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿ ಮುಖಂಡರು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ನೇತೃತ್ವದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ಧ್ವಜ ನೀಡಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಸ್ವಾಗತಿಸಿದರು. ನಂತರ ಮಾತನಾಡಿದ ಅವರು, ಕಳೆದ ಮೂರು ವರೆ ವರ್ಷ ಅಧಿಕಾರ ನೆಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಯಾವುದೇ ಅಬಿವೃದ್ಧಿ ಕೆಲಸಗಳಿಲ್ಲದೆ ಕೇವಲ ಹಣ ಲೂಟಿಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾ ತೀವ್ರ ಸಂಕಷ್ಟದಲ್ಲಿದ್ದಾರೆ ಇಂತಹ ಸರ್ಕಾರವನ್ನ ಕಿತ್ತೊಗಿಯಬೇಕಿದೆ ಎಂದರು. ಕ್ಷೇತ್ರದಲ್ಲಿ ಸಹ ಇಲ್ಲಿನ ಶಾಸಕರು ಯಾವುದೇ ಅಬಿವೃದ್ದಿ ಕೆಲಸ ಮಾಡದೆ ಬರೀ ಭ್ರಷ್ಟಾಚಾರ ದಲ್ಲಿ ತೊಡಗಿದ್ದಾರೆ ಬಿಜೆಪಿ ನಾಯಕರು ಹಾಗು ಕಾರ್ಯಕರ್ತರು ಅವರ ವರ್ತನೆಗೆ ಬೇಸತ್ತಿದ್ದಾರೆ ಅವರ ದುರಾಡಳಿತವನ್ನ ಅವರೇ ಬಯಲು ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಬಿಜೆಪಿ ತೊರೆದು ಸಾಕಷ್ಟು ಘಟಾನುಘಟಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ್ರು ಮಾತನಾಡಿ ಸುಳ್ಳಿನಮೇಲೆ ಮನೆ ಕಟ್ಟುತ್ತಿರುವ ಬಿಜೆಪಿ ಸರ್ಕಾರದ ಬಣ್ಣ ಬಯಲಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಅಧಿಕಾರಕ್ಕೆ ಬರುವುದು ಶತ ಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಚಟ್ನಹಳ್ಳಿ ಗ್ರಾಮದ ಬಿಜೆಪಿ ಮುಖಂಡರು ಜಗಳೂರು ವಿಧಾನ ಸಭಾ ಕ್ಷೇತ್ರದ ಹರಪನಹಳ್ಳಿ ತಾಲ್ಲೂಕು ಅರಸೀಕೆರೆ ಹೋಬಳಿ ಚಟ್ನಹಳ್ಳಿ ಗ್ರಾಮದ ಇಪ್ಪತ್ತಕ್ಕು ಹೆಚ್ಚು ಬಿಜೆಪಿ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ ಸೇರ್ಪಡೆಯಾದವರು:
ನಾಗರಾಜ್ , ಖಲೀಲ್ ಸಾಬ್ , ವೀರೇಶ್ ,ಶಶಿಕುಮಾರ್ ,ರಮೇಶ್ , ಪರುಸಪ್ಪ , ಬಸವರಾಜಪ್ಪ , ಜ್ಯೋತೆಪ್ಪ , ತಿಪ್ಪೇಸ್ವಾಮಿ , ಅಂಜಿನಪ್ಪ ,ರಮೇಶ್ , ರೇವಣಪ್ಪ , ರಾಜಣ್ಣ , ರಾಮಪ್ಪ ,ಕಲ್ಲೇಶಪ್ಪ ಸೇರಿದಂತೆ ಅನೇಕರು ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಷಂಷೀರ್ ಅಹಮದ್, ಎಸ್ಟಿ ಘಟಕ ಅಧ್ಯಕ್ಷ ಬಿ.ಲೋಕೇಶ್, ಮಾಜಿ ತಾ.ಪಂ.ಸದಸ್ಯರಾದ ಕುಬೇಂದ್ರಪ್ಪ, ಸುರೇಶ್ ನಾಯ್ಕ ಚಿತ್ತಪ್ಪ, ಪಟ್ಟಣ ಪಂಚಾಯತಿ ಸದಸ್ಯ ರವಿಕುಮಾರ್, ಕಾರ್ಮಿಕ ಘಟಕ ಅಧ್ಯಕ್ಷ ಪಿ.ರೇವಣ್ಣ, ಅಸಂಘಟಿತ ಕಾರ್ಮಿಕ ಅಧ್ಯಕ್ಷ ತಾನಾಜಿ, ಮಾಜಿ ಗ್ರಾ.ಪಂ ಸದಸ್ಯ ಮರೇನಹಳ್ಳಿ ಶೇಖರಣ್ಣ , ಮುಖಂಡರಾದ ಚಟ್ನಹಳ್ಳಿ ರಾಜಣ್ಣ , ಬುಳ್ಳಳ್ಳಿ ನಾಗರಾಜ್ ,ಸಿದ್ದಪ್ಪ , ಶಿವಮೂರ್ತಿ , ಯುವ ಕಾಂಗ್ರೆಸ್ ಅಧ್ಯಕ್ಷರು ತಿಪ್ಪೇಸ್ವಾಮಿ ,ವಿಜಯ್ ಕೆಂಚೋಳ್ ,ಸೇರಿದಂತೆ ಕಾರ್ಯಕರ್ತರು ಇದ್ದರು.