ಸುದ್ದಿವಿಜಯ ಜಗಳೂರು. ದಾವಣಗೆರೆಯ ಸಪ್ತಗಿರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಬಿಳಿಚೋಡು ಎಂ. ವರುಣ್ ಕುಮಾರ್ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗುಂಡು ಎಸೆತ ಮತ್ತು ಜಾವಲಿನ್ ಎಸೆತದಲ್ಲಿ ಎರಡೂ ವಿಭಾಗದಲ್ಲೂ ಗೆಲುವು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ದಾವಣಗೆರೆಯಲ್ಲಿ ಸೆ.14ರಂದು ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕಾಲೇಜಿನ ಪ್ರತಿನಿದಿಯಾಗಿ ಸ್ಪರ್ಧಿಸಿ ವಿಜಯಮಾಲೆ ಧರಿಸಿದ್ದಾನೆ.
ಈ ವಿದ್ಯಾರ್ಥಿ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದ ತಾಯಿ ಎ.ಬಿ ಅನೀತ
ತಂದೆ ಎಂ. ರಮೇಶ್ ಇವರ ಪುತ್ರನಾಗಿದ್ದು, ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮಗನ ಸಾಧನೆಗೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಭಾರತಿ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಸಂಬಂಧಿಸಿಕರು ಮೆಚ್ಚುಗೆ ವ್ಯಕ್ತಪಡಿಸಿ ಶುಭಾಶಯವನ್ನು ಕೋರಿದ್ದಾರೆ.
ಈ ವಿದ್ಯಾರ್ಥಿಯು ರಾಜ್ಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ಕೊಟ್ಟು ನಮ್ಮ ತಾಲ್ಲೂಕು, ಜಿಲ್ಲೆ, ಹಾಗು ರಾಜ್ಯಕ್ಕೆ ಹಾಗೂ ಕಾಲೇಜಿಗೆ ಕೀರ್ತಿ ತರಲೆಂದು ಪೋಷಕರೊಂದಿಗೆ ನಾವು ನೀವುಗಳೆಲ್ಲ ಶುಭಾಶಯವನ್ನು ತಿಳಿಸಿ ಹಾರೈಸೋಣ.