ಜಗಳೂರು ತಾಲೂಕಿನ ಗ್ರಾಮೀಣ ರಂಗ ಕಲಾವಿದನಿಗೆ‌ ಬಯಲಾಟ ಅಕಾಡೆಮಿ ಪ್ರಶಸ್ತಿ

Suddivijaya
Suddivijaya September 17, 2022
Updated 2022/09/17 at 1:54 PM
ಸುದ್ದಿವಿಜಯ ಜಗಳೂರು.ವೃತ್ತಿಯಲ್ಲಿ ಯಶಸ್ವಿ ಕೃಷಿಕರಾಗಿ ಬದುಕಿನುದ್ದಕ್ಕೂ ಸಂಗೀತ ಮತ್ತು ರಂಗ ಕಲೆ ಮೈಗೂಡಿಸಿಕೊಂಡಿರುವ  ತಾಲೂಕಿನ  ಹಿರಿಯ ಜೀವಿ ದೊಣೆಹಳ್ಳಿ ಚಂದ್ರಪ್ಪ  ಅವರಿಗೆ ಕರ್ನಾಟಕ ಬಯಲಾಟ ಅಕಾಡೆಯಿಯಿಂದ ಕೊಡಮಾಡುವ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಂದಿದೆ.
 ಕೃಷಿ  ಬೆಳೆ ಬೆಳೆದು ಉತ್ತಮ ರೈತರೆನಿಸಿಕೊಂಡಿರುವ ಚಂದ್ರಪ್ಪ ಕಲೆಯ ಅಭಿರುಚಿ ಬೆಳೆಸಿಕೊಂಡಿದ್ದಾರೆ. ಗ್ರಾಮದಲ್ಲಿ ನಡೆಯುತ್ತಿದ್ದ ದೊಡ್ಡಾಟ ಪ್ರಯೋಗ ವೀಕ್ಷಿಸುತ್ತಿದ್ದ ಅವರಲ್ಲೂ ನಟನೆ ಮಾಡಬೇಕೆಂಬ ಆಸಕ್ತಿ ಬೆಳೆಯಿತು. ದಾವಣಗೆರೆಯ ಹಿರಿಯ ರಂಗ ಕಲಾವಿದ ಎನ್.ಎಸ್ ರಾಜು ಅವರ ನೇತೃತ್ವದಲ್ಲಿ   ದೊಡ್ಡಾಡ ಪಡೆಯಲ್ಲಿ ಅಭಿನಯಿಸುತ್ತ ಬಂದರು. ಗ್ರಾಮ ಮಾತ್ರವಲ್ಲ ಜಿಲ್ಲಾ ಕೇಂದ್ರ ಚಿತ್ರದುರ್ಗ, ದಾವಣಗೆರೆಯ ವಿವಿಧ ತಾಲೂಕುಗಳಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಪ್ರದರ್ಶನಗಳಲ್ಲಿ ನಟಿಸಿದ್ದಾರೆ.
 ದೊಡ್ಡಾಟದಲ್ಲಿ ವಿಶೇಷವಾಗಿ “ಮಹಾಭಾರತ ’ ನಾಟಕದಲ್ಲಿ ಧರ್ಮರಾಯ ಮತ್ತು ದೇವಿಮಹಾತ್ಮೆಯಲ್ಲಿ ಸುಗ್ರೀವಾ   ಪಾತ್ರ ನಿರ್ವಹಿಸಿದ್ದಾರೆ.
ಈ ದೊಡ್ಡಾಟ ಆಡುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ಸುಮಾರು 15ಕ್ಕೂ ಹೆಚ್ಚು  ಕಲಾವಿದರ ತಂಡ, ಎರಡ್ಮೂರು  ತಿಂಗಳ ಸಿದ್ಧತೆ ಬೇಕು. ಮುಖ್ಯವಾಗಿ ದೊಡ್ಡಾಟದಲ್ಲಿ ಡೈಲಾಗ್‌ ಗಟ್ಟಿ ಧ್ವನಿಯಲ್ಲಿ ಹೇಳಬೇಕು. ಅಷ್ಟು ದಿನ ಕಾಲ ಧ್ವನಿ ಕೆಡದಂತೆ ಎಣ್ಣೆ ಮತ್ತಿರ ಆಹಾರ ಸೇವನೆ ಬಿಡಬೇಕಾಗುತ್ತದೆ. ಯಕ್ಷಗಾನದ ಪ್ರತಿರೂಪದಂತಿರುವ ದೊಡ್ಡಾಟ ಇಂದು ಸಾಗರದಾಚೆ ತನ್ನ ಪ್ರಯೋಗ ಮಾಡಬೇಕಿತ್ತು. ಆದರೆ, ಪ್ರೋತ್ಸಾಹದ ಕೊರತೆಯಿಂದ ಕಲೆ ಸಂಪೂರ್ಣ ನಶಿಸಿ ಹೋಗಿದೆ. ದೊಡ್ಡಾಟ ಆಡಿಸುವವರು, ಆಡುವವರು ಇಲ್ಲದಂತಾಗಿದೆ. ಯಕ್ಷಗಾನದಂತೆ ರಂಗ ಕಲೆ ಸಾಂಸ್ಕೃತಿಕ ಪ್ರತೀಕವಾಗಿರುವ ದೊಡ್ಡಾಟ ಸಹ ಜೀವಂತವಾಗಿ ಇಡಬೇಕಿದೆ. ನಾಟಕ ಆಡಿಸುವವರಿಗೆ ಮತ್ತು ನಟರಿಗೆ ಅಗತ್ಯ ತರಬೇತಿ ಜತೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ, ಅಕಾಡೆಮಿಗಳು ನೀಡಲು ಮುಂದಾಗಬೇಕಿದೆ.
ಕೃಷಿ ಕಾಯಕ ಮಾಡಿಕೊಂಡಿರುವ ನಾನು ಕಿರಿಯ ವಯಸ್ಸಿನಿಂದಲೂ ರಂಗ ಕಲೆ ಮತ್ತು ಸಂಗೀತದ ಅಭಿರುಚಿ ಬೆಳೆಸಿಕೊಂಡಿದ್ದೇನೆ. ಗ್ರಾಮದಲ್ಲಿ ದೊಡ್ಡಾಟ ಆಡಿಸುತ್ತಿದ್ದ ಹಿರಿಯ ಕಲಾವಿದರಿಂದ  ಪ್ರಭಾವಿತನಾಗಿ “ಧರ್ಮರಾಯನಾಗಿ ’ ದೊಡ್ಡಾಟದಲ್ಲಿ ಪ್ರದರ್ಶಿಸುತ್ತ ಬಂದಿದ್ದೇನೆ. ಜಾತ್ರೆ, ಮಹೋತ್ಸವ ಮತ್ತು ಸಪ್ತಾಹಗಳಲ್ಲಿ ಜಾನಪದ, ಭಜನೆ ಗಾಯನ ಜತೆಗೆ ತಬಲಾ ವಾದನ ಮಾಡುತ್ತೇನೆ. ಕೋಲಾಟದ ಪದ ಹಾಡುಗಾರಿಕೆಯೂ ಕರಗತ ಮಾಡಿಕೊಂಡಿದ್ದೇನೆ. ನನ್ನ ಕಲಾ ಸೇವೆ ಗುರುತಿಸಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸದ ತಂದಿದೆ”. 
 –   ಚಂದ್ರಪ್ಪ. ಪ್ರಶಸ್ತಿ ಪುರಸ್ಕೃತ ದೊಣೆಹಳ್ಳಿ
Share this Article
Leave a comment

Leave a Reply

Your email address will not be published. Required fields are marked *

error: Content is protected !!