ಸುದ್ದಿವಿಜಯ,ದಾವಣಗೆರೆ: ಎಲ್ಲಕಾಲಕ್ಕೂ ಬಿದಿರು ಅವಶ್ಯಕ.ತ್ರೇತಾಯುಗದಿಂದ ಕಲಿಯುಗದವರೆಗೆ ಬಿದಿರು ಹಾಸುಹೊಕ್ಕಾಗಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು.
ಇವರು ವಿಶ್ವ ಬಿದಿರು ದಿನಾಚರಣೆಯನ್ನು ಕೆವಿಕೆ ಆವರಣದಲ್ಲಿ ಭಾನುವಾರ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಈ ವರ್ಷದ ಈ ದಿನದ ಆಚರಣೆಯ ಮುಖ್ಯ ಉದ್ದೇಶ ಬಿದಿರಿನ ಉದ್ಯಮದ ಸಂರಕ್ಷಣೆ. ಬಿದಿರು ಹುಲ್ಲಿನ ಜಾತಿಗೆ ಸೇರಿದ ಸಸ್ಯ, ಬಿದಿರನ್ನು ,”Wonder Grass” ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಕಾಡುಗಳಲ್ಲಿ ನಾವು ಬಿದಿರು ಮರಗಳನ್ನು ನೋಡಿರುತ್ತೇವೆ. ಬಿದಿರು ನಮ್ಮ ಭಾರತ ದೇಶದಲ್ಲಿ ಸುಮಾರು15.69 m ha ಪ್ರದೇಶದಲ್ಲಿದೆ. ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚು ವಿಸ್ತರಣೆ ಹೊಂದಿರುವ ರಾಜ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಬಿದಿರಿನ ಸಸ್ಯವನ್ನು ಕಚೇರಿಗಳ, ಮನೆಯ ಹಾಗೂ ಹೋಟೆಲ್ ಗಳ ಅಂಗಳದಲ್ಲಿ ಶೃಂಗಾರಕ್ಕಾಗಿ ಬೆಳೆಯುತ್ತಿದ್ದಾರೆ. ಪ್ರಪ್ರಥಮ ಬಾರಿಗೆ ವಿಶ್ವ ಬಿದಿರು ದಿನಾಚರಣೆಯನ್ನು 2009 ನೇ ರ ಸೆಪ್ಟೆಂಬರ್ 18ರಂದು ಥೈಲ್ಯಾಂಡ್ ನಲ್ಲಿ ಆಚರಿಸಲಾಯಿತು.
ಪ್ರಪಂಚದಲ್ಲಿ ಬಿದಿರು ಬೆಳೆಯುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲನೆ ಸ್ಥಾನ ಚೀನಾವಾಗಿದೆ. ಪ್ರಪಂಚದಲ್ಲಿ ಬಿದಿರಿನ 550 ಪ್ರಭೇದಗಳಿವೆ. ಎಅವುಗಳಲ್ಲಿ ಭಾರತ ದೇಶದಲ್ಲಿ ಸುಮಾರು 126 ಪ್ರಭೇದಗಳನ್ನು ನಾವು ಕಾಣಬಹುದು. ಆದರೆ ಕೇವಲ 40 ಪ್ರಭೇದಗಳನ್ನು ಮಾತ್ರ ನಾವು ನೋಡಬಹುದು ಎಂದು ಬಿದಿರಿನ ಪ್ರಬೇಧಗಳು ಮತ್ತು ಉಪಯುಕ್ತ ಮಾಹಿತಿಯನ್ನು ನೀಡಿದರು.
ಈ ವೇಳೆ ಕೇಂದ್ರದ ಮುಖ್ಯಸ್ಥರಾದ ಡಾ. ಟಿಎನ್ ದೇವರಾಜ್ ರವರು ಮಾತನಾಡುತ್ತಾ ಬಿದರಿನ ಉಪ ಉತ್ಪನ್ನಗಳ ಬಗ್ಗೆ ಹೆಚ್ಚು ಮಹತ್ವ ಕೊಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ತಜ್ಞ ಎಂ.ಜಿ.ಬಸವನಗೌಡ, ಸಸ್ಯ ಸಂರಕ್ಷಣಾ ತಜ್ಞ ಡಾ. ಅವಿನಾಶ್, ಮಣ್ಣು ತಜ್ಞ ಸಣ್ಣ ಗೌಡರ್, ಗೃಹ ವಿಜ್ಞಾನಿ ಸುಪ್ರಿಯಾ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.