ಸುದ್ದಿವಿಜಯ ಜಗಳೂರು.
ಶೈಕ್ಷಣಿಕ ಕಾರ್ಯಾಗಾರ ಮತ್ತು ೨೦೨೧-೨೨ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ವಿಷಯವಾರು ಫಲಿತಾಂಶ ಪಡೆದ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಸೆ.೨೯ರಂದು ಗುರುವಾರ ಬೆಳಗ್ಗೆ ಗುರುಭವನದಲ್ಲಿ ನಡೆಯಲಿದೆ ಎಂದು ಸ.ನೌ.ಸಂ ಅಧ್ಯಕ್ಷ ಬಿ.ಆರ್ ಚಂದ್ರಪ್ಪ ತಿಳಿಸಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಮನ್ವಯಾಧಿಕಾರಿಗಳ ಕಚೇರಿ, ಕ.ರಾ.ಸ.ನೌ.ಸಂಘ, ಪ್ರೌ.ಶಾ.ಮು.ಶಿ. ಸಂಘ, ಕ.ರಾ.ಪ್ರೌ.ಶಾ.ಸ ಶಿ.ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸಮಾರಂಭ ನಡೆಯಲಿದೆ. ಶಾಸಕ ಎಸ್.ವಿ ರಾಮಚಂದ್ರ ಉದ್ಘಾಟಿಸುವರು, ಕ.ರಾ.ಪ್ರೌ.ಸ.ಶಿ ಸಂಘದ ಅಧ್ಯಕ್ಷ ಸಿ. ಮಹಾಂತೇಶ್, ದಾವಣಗೆರೆ ಡಯಟ್ ಉಪನ್ಯಾಸಕ ಹೆಚ್.ವಿ ಗೋವಿಂದರಾಜ ಶೆಟ್ಟಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕ.ರಾ.ಪ್ರೌ.ಶಾ.ಸ.ಶಿ ಸಂಘದ ಉಪಾಧ್ಯಕ್ಷ ಜಿ. ವೆಂಕಟೇಶ್, ಸ. ಕಾರ್ಯದರ್ಶಿ ಎ.ಎಸ್ ಕಲ್ಲಿನಾಥ್, ಕಾರ್ಯದರ್ಶಿ ಎಸ್.ಜೆ ಮಧು, ಕೋಶಾಧ್ಯಕ್ಷ ಎಚ್. ಹನುಮಂತಪ್ಪ, ರಾಜ್ಯ ಪರಿಷತ್ ಸದಸ್ಯ ಕೆ.ಟಿ ಚಿಕ್ಕಣ್ಣ, ಸ.ಕಾರ್ಯದರ್ಶಿ ಎಚ್. ಬಸವರಾಜ್, ಗೋದವಿಂದಪ್ಪ, ವಿಶ್ವನಾಥ್ ಜಂಬಗಿ ಇದ್ದರು.