ಸುದ್ದಿವಿಜಯ,ಜಗಳೂರು: ಮನುಷ್ಯ ಸ್ವಾರ್ಥ ಬಿಟ್ಟು ಸೇವೆಯ ಮನೋಬಾವನೆ ಬೆಳೆಸಿಕೊಳ್ಳಬೇಕೆಂದು ನಾಲಂದ ಪದವಿ ಪೂರ್ವಕಾಲೇಜು ಪ್ರಾಂಶಪಾಲರಾದ ಸಿ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ನಾಲಂದ ಪದವಿಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಯುವ ಸ್ಪಂದನಾ ಘಟಕ ಹಮ್ಮಿಕೊಂಡಿದ್ದ 2021-22 ನೇ ಸಾಲಿನ ವಾರ್ಷಿಕ ವಿಶೇಷ ಶಿಭಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಮುಂಚೂಣೆಯಲ್ಲಿರುವ ದೇಶಗಳು ಮುಂದುವರೆಯಬೇಕಾದರೆ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು.ಅದು ನಮ್ಮ ದ್ಯೇಯವಾಗಿರಬೇಕೆಂದರು.
ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ,ಯುವಕರ ಪಾತ್ರಬಹಳ ಮುಖ್ಯವಾಗಿದೆ. ಹಳ್ಳಿಗಳು ಉದ್ದಾರವಾದರೆ ದೇಶ ಉದ್ದಾರವಾಗುತ್ತದೆ ಎಂದು ಗಾಂಧೀಜಿ ಹೇಳಿದ್ದನ್ನು ಅವರು ಸ್ಮರಿಸಿದರು. ಗಾಂಧೀಜಿಯಯವರ ಜನ್ಮ ಶತಾಬ್ದಿ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆಯು 1969 ಸೆ24 ರಂದು ಜಾರಿಗೆ ಬಂದಿದ್ದು. ಅಲ್ಲಿಂದ ಇಲ್ಲಿಯವರೆಗೆ 4 ಲಕ್ಷ ವಿದ್ಯಾರ್ಥಿಗಳು ದೇಶಾಧ್ಯಂತ ಭಾಗಿಯಾಗುತ್ತಿದ್ದಾರೆ ಎಂದರು.
ದೊಣೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಜಾ ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಸದಸ್ಯರಾದ ದೇವೇಂದ್ರಪ್ಪ, ಹೆಚ್.ಜಯ್ಯಣ್ಣ, ಗ್ರಾಮದ ಮುಖಂಡರಾದ ಬಿ.ಡಿ.ಪಾಪನಾಯಕ, ಎಸ್.ಬಿ.ಓಬಣ್ಣ, ಪಾಪಯ್ಯ, ಸಣ್ಣಬೋರಯ್ಯ, ದೊಡ್ಡಬೋರಯ್ಯ, ಉಪನ್ಯಾಸಕರಾದ ಜಿ.ಟಿ.ಪರಮೇಶ್ವರಪ್ಪ, ಬಿ.ಎಂ.ಬಸವರಾಜಯ್ಯ, ಆರ್,ನಾಗೇಶ್, ಬಿ.ಎನ್.ಎಂ.ಸ್ವಾಮಿ, ಎ.ಪಿ.ನಿಂಗಪ್ಪ, ಜಿ.ಕವಿತ ಸೇರಿದಂತೆ ಶಿಭಿರಾರ್ಥಿಗಳು ಉಪಸ್ಥಿತರಿದ್ದರು.