ಸುದ್ದಿವಿಜಯ, ಜಗಳೂರು:ಜಗಳೂರು: ಸಮಸ್ಯೆಗಳನ್ನು ಹೊತ್ತು ತಹಶೀಲ್ದಾರ್ ಕಚೇರಿಗೆ ಅಲೆಯುವ ಜನ ಸಾಮಾನ್ಯರ ಮನೆ ಬಾಗಲಿಗೆ ದಾವಿಸಿ ಸಮಸ್ಯೆ ಆಲಿಸುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪೂರಕವಾಗಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಹೇಳಿದರು.
ತಾಲೂಕಿನ ತೋರಣಗಟ್ಟೆ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಸರಕಾರದ ಸೌಲಭ್ಯಗಳು ಸಾರ್ವಜಿನಿಕರ ಮನೆ ಬಾಗಿಲಿಗೆ ತಲುಪಿಸಲು ಎಲ್ಲ ಅಧಿಕಾರಿಗಳು ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ.
ಎಲ್ಲ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ ಅತಿ ಹಿಂದುಳಿದ ಗ್ರಾಮವಾದ ತೋರಣಗಟ್ಟೆ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು, ವಸತಿ ರಹಿತರಿಗೆ ನಿವೇಶನ, ಪಶುಸಂಗೋಪನಾ ಇಲಾಖೆ ಸಿಬ್ಬಂದಿಗಳ ನೇಮಕ ಮತ್ತು ಆರೋಗ್ಯ ಉಪಕೇಂದ್ರದಲ್ಲಿ ಸಿಬ್ಬಂದಿ ವ್ಯವಸ್ಥೆಗೆ ಸೇರಿದಂತೆ ಒಟ್ಟು 25 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದು ಇಲಾಖಾವರು ಅಧಿಕಾರಗಳು ಅವರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಒದಗಿಸಲಿದ್ದಾರೆ. ಸಾರ್ವಜನಿಕರ ಅರ್ಜಿಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡುತ್ತೇವೆ ಎಂದು ತಹಶೀಲ್ದಾರ್ ಹೇಳಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಿಥುನ್ ಕಿಮಾವತ್ ಮಾತನಾಡಿ, ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಮುಖ್ಯವಾಗಿ ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ, ಕೃಷಿ ಸಮ್ಮಾನ್, ರೈತ ಸಿರಿ, ಕೃಷಿ ಸಂಚಾಯಿ, ಕೃಷಿ ಪ್ರಶಸ್ತಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ತೋಗಟಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ ಮಾತನಾಡಿ, ರೈತರಿಗೆ ಇಲಾಖೆಯಿಂದ ಈರುಳ್ಳಿ ಸಂಸ್ಕರಣಾ ಘಟಕ, ಪ್ಯಾಕ್‍ಹೌಸ್, ಮಳೆನೀರು ಸಂಗ್ರಹಣಾ ಘಟಕ ಮಾಡಿಕೊಳ್ಳಲು ಅವಕಾಶವಿದೆ. ಎನ್‍ಆರ್‍ಇಜಿ ಯೋಜನೆಯಲ್ಲಿ ಅಡಕೆ ಹೊರತು ಪಡಿಸಿ ಎಲ್ಲ ಹಣ್ಣು ಮತ್ತು ಹೂಗಳನ್ನು ಬೆಳೆಯಲು ಅವಕಾಶಗಳಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಎಸ್‍ಎಸ್‍ಎಲ್‍ಸಿ ಮಕ್ಕಳು ಶೇ.60ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಇಲಾಖೆ ವತಿಯಂದ ಪ್ರೋತ್ಸಹ ಧನವಾಗಿ 15 ಸಾವಿರ ಮತ್ತು ಶೇ 80 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ 20 ಸಾವಿರ ಪ್ರೋತ್ಸಹ ಧನ ನೀಡುತ್ತಿದ್ದೇವೆ. ದೇವದಾಸಿ ಮಕ್ಕಳ ವಿವಾಹಕ್ಕೆ 5 ಲಕ್ಷ ಮತ್ತು ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ 3 ಲಕ್ಷ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಚಂದ್ರಶೇಖರ್, ಶಿಕ್ಷಣ ಇಲಾಖೆ ಬಿಇಒ ಉಮಾದೇವಿ, ಗ್ರಾಮೀಣ ನೈರ್ಮಲ್ಯ ಇಲಾಖೆ ಅಧಿಕಾರಿ ಸಾದಿಕ್ ಪಾಷಾ, ಗ್ರಾಪಂ ಅಧ್ಯಕ್ಷೆ ದುರುಗಮ್ಮ ವೆಂಕಟೇಶ್, ಉಪಾಧ್ಯಕ್ಷ ಓಬಳೇಶ್, ಆಸ್ಮಾಭಾನು, ಜಿ.ಎಸ್.ಚಿದಾನಂದ, ಸದಸ್ಯರಾದ ಭಾರತಿ ಮಂಜುನಾಥ್, ಸಿದ್ದಲಿಂಗಮ್ಮ ಬಾಲಪ್ಪ, ರೂಪಾ, ಮಂಜುಳಮ್ಮ, ಪಶುಸಂಗೋಪನಾ ಇಲಾಖೆ ಅಧಿಕಾರಿ ಮಹಾದೇವಪ್ಪ, ಪಿಡಿಒ ಮರುಳಸಿದ್ದಪ್ಪ, ರೇಷ್ಮೇ ಇಲಾಖೆ ಅಧಿಕಾರಿ ಕೊಟ್ರೇಶ್, ಕಂದಾಯ ಅಧಿಕಾರಿ ಕುಬೇರ್ ನಾಯ್ಕ, ಬಾಲಕೃಷ್ಣ ಮಂದಾಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.