ಸುದ್ದಿವಿಜಯ,ಜಗಳೂರು: ತಾಲೂಕಿನ ಕಲ್ಲೇದೇವರ ಗ್ರಾಮದ ಸಮೀಪ ಹೊಸದಾಗಿ ನಿರ್ಮಿಸಿದ್ದ ಚೆಕ್ ಡ್ಯಾಂನಲ್ಲಿ ಮುಳುಗಿ ಯುವನೊಬ್ಬ ನಾಪತ್ತೆಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದಿದ್ದು ಎರಡು ದಿನಗಳಾದರೂ ಯುವಕ ಮೃತದೇಹ ಪತ್ತೆಯಾಗಿಲ್ಲ.
ಕಲ್ಲೇದೇವರ ಗ್ರಾಮದ ವಿನಯ್(26) ನಾಪತ್ತೆಯಾಗಿರುವ ಯುವಕ. ಮೂರು ಜನ ಸ್ನೇಹಿತರೊಂದಿಗೆ ಮಧ್ಯಾಹ್ನ ಚೆಕ್ ಡ್ಯಾಂನಲ್ಲಿ ಈಜಾಡಲು ಇಳಿದಿದ್ದಾರೆ. ಇದರಲ್ಲಿ ವಿನಯ್ ಡೈ ಹೊಡದಿದ್ದಾನೆ. ಆದರೆ ಅರ್ಧಗಂಟೆಯಾದರು ಮೇಲೇಳಲೇ ಇಲ್ಲ. ಇನ್ನಿಬ್ಬರು ಸ್ನೇಹಿತರು ಹುಡುಕಾಡಿದ್ದಾರೆ ಆದರೆ ಸಿಕ್ಕಿಲ್ಲ.
ತಕ್ಷಣವೇ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಐಪಿಎಸ್ ಅಧಿಕಾರಿ ಕನ್ನಿಕ ಸಕ್ರಿವಾಲ್, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಪಿಎಸ್‍ಐ ಮಹೇಶ್ ಹೊಸಪೇಟ, ಆರ್ ಐ ಕುಬೇರ್ ನಾಯ್ಕ ಭೇಟಿ ಮಾಡಿ ಪರಿಶೀಲಿಸಿದರು. ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟರೂ ಮೃತ ದೇಹ ಪತ್ತೆಯಾಗಲಿಲ್ಲ. ತಕ್ಷಣ ಚಿತ್ರದುರ್ಗದಿಂದ ಜ್ಯೋತಿರಾಜ್ ಅಲಿಯಾಸ್ ಕೋತಿಕಾಜ್ ಅವರನ್ನು ಕರೆತಂದು ಪೊಲೀಸರು ಕಾರ್ಯಾಚರಣೆ ನಡೆಸಿದರು.
ಆದರೂ ಮೃತದೇಹ ಪತ್ತೆಯಾಗಲ್ಲ. ಪೊಲೀಸರು ಮತ್ತು ಮುಳುಗುತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಪತ್ತೆಗೆ ಸಂಜೆಯವರೆಗೂ ಕಾರ್ಯಚರಣೆ ಮುಂದುವರೆಸಿದರು ಆದರೆ ಯುವಕನ ಮೃತದೇಹ ಪತ್ತೆಯಾಗದ ಹಿನ್ನೆಲೆ ಶನಿವಾರಕ್ಕೆ ಶೋಧ ಕಾರ್ಯ ಮುಂದುವರೆಸಲು ನಿರ್ಧಾರ ಮಾಡಲಾಯಿತು.