ಸುದ್ದಿವಿಜಯ, ಉತ್ತರ ಪ್ರದೇಶ: ಚಾಲಕ ಗಂಟೆಗೆ 100 ಅಥವಾ 150 ಕಿ.ಮೀ ಚಾಲನೆ ಮಾಡಿರೋದನ್ನು ನೀವು ನೋಡಿರಬಹುದು. ಅದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಧ್ಯವಾಗಬುದೇನೋ. ಬಟ್ ಉತ್ತರ ಪ್ರದೇಶದ ಲಖನೌನ ಪೂರ್ವಾಂಚಲದ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಗಾಳಿಗಿಂತ ವೇಗ ಅಂದರೆ ಗಂಟೆಗೆ 300 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದ ಕಾರ್ ಕ್ಷಣಾರ್ಧದಲ್ಲಿ ಛಿದ್ರ ಛಿದ್ರವಾಗಿ ಹೋಗಿರುವ ಘಟನೆ ನಡೆದಿದ್ದು, ಕಾರಿನಲ್ಲಿದ್ದ ನಾಲ್ಕವರು ಫೀಸ್ ಪೀಸ್ ಆಗಿದ್ದು ಎದೆ ಛಲ್ ಎನ್ನುವಂತಹ ದೃಶ್ಯ ಇಡೀ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ.
300 ಕಿ.ಮೀ ಮಿಂಚಿನ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದು ಸ್ಫೋಟಗೊಂಡಿದ್ದು ನಾಲ್ವರು ಯಮಪುರಿ ಸೇರಿದ್ದಾರೆ.
ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೈವೆಯಲ್ಲಿ ನಿನ್ನೆ ಬೆಳಿಗ್ಗೆ ಈ ಘೋರ ಅಪಘಾತ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು ದಿಲ್ಲಿ ಮೂಲದ ವೈದ್ಯ ಡಾ.ಪ್ರಕಾಶ್, ಬಿಹಾರ ಮೂಲದ ಎಂಜಿನಿಯರ್‌ಗಳಾದ ಅಖಿಲೇಶ್ ಸಿಂಗ್, ದೀಪಕ್ ಕುಮಾರ್ ಮತ್ತು ಉದ್ಯಮಿ ಮುಖೇಶ್ ಎಂದು ಗುರುತಿಸಲಾಗಿದೆ.
ಫೇಸ್‌ಬುಕ್‌ನಲ್ಲಿ ಲೈವ್ ಮಾಡುತ್ತಲೇ ಮಟ್ಯಾಷ್:
ಅದು ವಿಶ್ವ ದರ್ಜೆಯ ಬಿಎಂಡಬ್ಲ್ಯೂ ಕಾರು. ಎಕ್ಸ್‌ಲೇಟರ್ ಮೇಲೆ ಕಾಲಿಟ್ಟರೆ ಕಾರು ಹೋಗುವ ವೇಗ ಗಾಳಿಗೂ ಮಿಗಿಲು. ಅಂತಹ ಕಾರನ್ನು 300 ಕಿ.ಮೀ ವೇಗವಾಗಿ ಚಾಲನೆ ಮಾಡಿದರೆ ಏನಾಗಬಹುದು ಯೋಚಿಸಿ. ಅಂತಹ ಯಮವೇಗದಲ್ಲಿ ಕಾರನ್ನು ಓಡಿಸು ನೋಡಿಯೇ ಬಿಡೋಣ ಎಂದು ದುಸ್ಸಾಹಸಕ್ಕೆ ಕೈ ಹಾಕಿದ ಯುವಕರು ಪೀಸ್ ಪೀಸ್ ಆಗಿ ಗುರುತು ಸಿಗದಂತೆ ಹೆಣವಾಗಿದ್ದಾರೆ.
ಪೂರ್ವಾಂಚಲದ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಸುಲ್ತಾನ್ ಪುರದಿಂದ ದಿಲ್ಲಿಯ ನಾಲ್ವರು ಯುವಕರ ತಂಡ ಜಾಲಿ ರೈಡ್ ಹೊರಟಿತ್ತು. ಡಾ.ಆನಂದ್ ಪ್ರಕಾಶ್ ಕಾರು ಚಾಲನೆ ಮಾಡುತ್ತಿದ್ದರು. ಆತಮ ಸ್ನೇಹಿತ ಅಖಿಲೇಶ್ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದರು. ದೀಪಕ್, ಮುಖೇಶ್ ಹಿಂಬದಿ ಸೀಟಿನಲ್ಲಿದ್ದರು.
ವಿಮಾನ ಇಳಿಸುವ ರನ್‌ವೇಗೆ ಸಮನಾಗಿ ಹೆದ್ದಾರಿಯಲ್ಲಿ ಹೆಚ್ಚುವೇಗ. ಹಿಂಬದಿ ಕುಳಿತವರು 300 ಕಿ.ಮೀ ವೇಗ ದಾಟಲು ಪುಸಲಾಯಿಸುತ್ತಿದ್ದರು ʼ ಅಷ್ಟು ವೇಗವಾಗಿ ಓಡಿಸಿದರೆ ನಾವೆಲ್ಲ ಯಮನ ಪಾದ ಸೇರುತ್ತೇವೆ ಎಂದು ಪ್ರಕಾಶ್ ಎಚ್ಚರಿಸಿದ್ದಾರೆ. ಆದರೂ ಸ್ನೇಹಿತರ ಒತ್ತಾಯಕ್ಕೆ ಮಣಿದ ಚಾಲಕನ ಸೀಟಿನಲ್ಲಿದ್ದ ಪ್ರಕಾಶ್ ಎಕ್ಸಲೇಟರ್ ಮೇಲೆ ಕಾಲು ಒತ್ತಿದ್ದಾರೆ. ಕಾರು ವಿಮಾನದ ವೇಗ ಪಡೆಯುತ್ತದೆ. ಅದೇ ವೇಳೆ ಎದುರಿಗೆ ಬಂದ ಲಾರಿ ಯಮನ ರೂಪ ತಳೆಯುತ್ತದೆ. ಮಿಂಚಿನ ವೇಗದ ಕಾರು ಲಾರಿಗೆ ಅಪ್ಪಳಿಸಿದೆ. ಕ್ಷಣಾರ್ಧದಲ್ಲೇ ಎಲ್ಲರೂ ಬೂದಿಯಾಗುತ್ತಾರೆ. ಫೇಸ್ ಬುಕ್ ಲೈವ್‌ನಲ್ಲಿ ಕಾರ್‌ನ ಸ್ಪೀಡೋ ಮೀಟರ್ ವೇಗದ ವಿಡಿಯೋ ಹೋಗುತ್ತಿದ್ದಂತೆ ಎಲ್ಲರೂ ಛಿದ್ರ ಛಿದ್ರವಾಗಿದ್ದಾರೆ.
ಅತಿವೇಗ ತಿಥಿ ಬೇಗ ಎಂಬ ಮಾತು ಸತ್ಯ. ದಯಮಾಡಿ ವಾಹನ ಸವಾರರು ಮಿಂಚಿನ ಓಟ ಬಿಟ್ಟು ನಿಯಮಿತವಾಗಿ ಚಾಲನೆ ಮಾಡಿ. ಇದು ಸುದ್ದಿವಿಜಯ ವೆಬ್ ನ್ಯೂಸ್ ಕಳಕಳಿ.