ಸುದ್ದಿವಿಜಯ, ಜಗಳೂರು: ದೇಶದ ಆಡಳಿತ ಸೇವೆಗಾಗಿ ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರಚನೆ ಆಯಿತು ಎಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದಿನಾಚರರಣೆಯಲ್ಲಿ ಹಿರಿಯ ಶ್ರೇಣಿಯ ನ್ಯಾಯಧೀಶರಾದ ಶಿವಪ್ಪ ಗಂಗಪ್ಪ ಸಲಗರೆ ಮಾತನಾಡಿದರು.
ತಾಲ್ಲೂಕಿನ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಡಾ. ಬಿ.ಆರ್.ಅಂಬೇಡ್ಕರ್ ಅವರಿಂದ ಸಂವಿಧಾನ ರಚನೆ ಆಯಿತು. ಈ ಸಂವಿಧಾನವು 1950 ನೇ ಜನವರಿ 26 ರಂದು ಜಾರಿಗೆ ತರಲಾಯಿತು.
ದೇಶದ ಪ್ರತಿಯೊಬ್ಬ ನಾಗರಿಕರು ಕಾನೂನಿನ ಮುಂದೆ ಸಮಾನರು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಸಿಗಬೇಕು ಎನ್ನುವುದು ಸಂವಿಧಾನದ ಆಶಯ ಎಂದರು.
ಜಗಳೂರು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆ ನಡೆಯಿತು.
1976ರಲ್ಲಿ ಅನುಚ್ಛೇದ 39(ಎ) ಪ್ರತಿಯೊಬ್ಬ ನಾಗರಿಕರಿಗೆ ನ್ಯಾಯ ಸಿಗಬೇಕು ಎನ್ನುವ ದೃಷ್ಟಿಯಿಂದ ಜಾರಿಗೆ ಬಂದಿತು. ಜಸ್ಟೀಸ್ ಪಿ.ಎನ್. ಭಗವತಿ ಯವರ ನೇತೃತ್ವದಲ್ಲಿ 1987ರಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ಬಂದಿತು. ಆದರೆ ನಮ್ಮ ರಾಜ್ಯದಲ್ಲಿ 1995ರಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸ್ಥಾಪನೆಯಾಯಿತು ಎಂದು ಕಾರ್ಯಕ್ರಮದ ಉದ್ದೇಶ ಮತ್ತು ಪ್ರಾಧಿಕಾರದ ಇತಿಹಾಸ ಮತ್ತು ರಚನೆಯನ್ನು ಸವಿವರವಾಗಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮಹಮ್ಮದ್ ಯೂನಿಸ್ ಅಥಣಿ, ವಕೀಲರ ಸಂಘದ ಅಧ್ಯಕ್ಷರಾದ ಓಂಕಾರೇಶ್ವರ, ಹಿರಿಯ ವಕೀಲರುಗಳಾದ ಶರಣಪ್ಪ, ಕಂಬಾರ, ಹನುಮಂತಪ್ಪ, ವಕೀಲರಾದ ಕರಿಬಸಪ್ಪ, ಕೆ.ವಿ.ರುದ್ರೇಶ್ ಸೇರಿದಂತೆ ಅನೇಕರು ಇದ್ದರು.