ಸುದ್ದಿವಿಜಯ ಜಗಳೂರು.ತಾಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಗೋಡೆ ಶಿವಗಂಗಮ್ಮ ಬಸವರಾಜ್ ಅವಿರೋಧವಾಗಿ ಗುರುವಾರ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಗಾಯಿತ್ರಮ್ಮ ನೀಡಿದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರು ೧೧, ಪುರುಷರು ೧೧ ಸದಸ್ಯರು ಸೇರಿದಂತೆ ಒಟ್ಟು ೨೨ ಸದಸ್ಯರ ಸಂಖ್ಯಾ ಬಲ ಹೊಂದಿದೆ.
ಅಧ್ಯಕ್ಷ ಸ್ಥಾನ ಎಸ್ಟಿ ಸಮುದಾಯಕ್ಕೆ ಮೀಸಲಾಗಿದ್ದು, ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಗಂಗಮ್ಮ ಬಸವರಾಜ್ ಒಬ್ಬರೆ ಉಮೇದುವಾರಿಕೆ ಸಲ್ಲಿಸಿದರು. ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸಲಿಲ್ಲ. ಹಾಗಾಗಿ ಚುನಾವಣಾಧಿಕಾರಿಯಾಗಿದ್ದ ಕೃಷಿ ಸಹಾಯಕ ನಿರ್ದೇಶಕ ಮಿಥುನ್ ಕಿಮಾವತ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಮಂಜಮ್ಮ ಪ್ರಕಾಶ್, ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಪಿಡಿಒ ಚನ್ನಬಸಪ್ಪ, ಕಾರ್ಯದರ್ಶಿ ಭರಮಪ್ಪಗೌಡ, ಸದಸ್ಯರಾದ ವೀರೇಶ್, ವಿರೂಪಾಕ್ಷಿ,ಬಿದ್ದಪ್ಪ, ಬಸವರಾಜ್, ಸಿದ್ದಪ್ಪ, ಕಲ್ಲೇಶ್, ನಾಗರಾಜ್, ಮುರಗೇಶ್, ಶೇಖರಪ್ಪ, ರೇಣುಕಮ್ಮ, ಹನುಮಕ್ಕ, ರಮ್ಜೀನ್ ಭಾನು, ದಿವ್ಯ ಸೇರಿದಂತೆ ಮತ್ತಿತರಿದ್ದರು.