ಜಗಳೂರು:ಕುರುಬ, ಛಲವಾದಿ ಸಮುದಾಯಭವನಗಳಿಗೆ ಶಾಸಕ ಎಸ್.ವಿ.ರಾಮಚಂದ್ರ ಅನುದಾನ ಭರವಸೆ ಎಷ್ಟು ಗೊತ್ತಾ?

Suddivijaya
Suddivijaya November 12, 2022
Updated 2022/11/12 at 1:10 AM

ಸುದ್ದಿವಿಜಯ,ಜಗಳೂರು: ರಾಜ್ಯದ ಮೂರನೇ ಅತಿ ದೊಡ್ಡ ಕುರುಬ ಸಮುದಾಯ ಹಾಗೂ ಅತ್ಯಂತ ತಳಸಮುದಾಯವಾದ ಛಲವಾದಿ ಸಮುದಾಯಗಳ ಜನರಿಗೆ ಬೃಹತ್ ಸಮುದಾಯ ಭವನಗಳ ನಿರ್ಮಾಣಕ್ಕೆ ತಲಾ 25 ಲಕ್ಷ ದಂತೆ 50 ಲಕ್ಷ ಅನುದಾನ ನೀಡುತ್ತೇನೆ ಎಂದು ಶಾಸಕ ಎಸ್.ವಿ.ರಾಮಚಂದ್ರ ವಾಗ್ದಾನ ನೀಡಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಆವರಣದಲ್ಲಿ ದಾಸ ಶ್ರೇಷ್ಠ ಕನಕದಾಸ ಮತ್ತು ವೀರ ಮಾತೆ ಒನಕೆ ಓಬವ್ವನವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಗಳೂರು ತಾಲೂಕು ಕಚೇರಿ ಆವರಣದಲ್ಲಿ ಕನಕ ದಾಸರ ಜಯಂತಿ ಮತ್ತು ಒನಕೆ ಓಬವ್ವನಗರ ಜಯಂತಿ ಆಚರಿಸಲಾಯಿತು.
ಜಗಳೂರು ತಾಲೂಕು ಕಚೇರಿ ಆವರಣದಲ್ಲಿ ಕನಕ ದಾಸರ ಜಯಂತಿ ಮತ್ತು ಒನಕೆ ಓಬವ್ವನಗರ ಜಯಂತಿ ಆಚರಿಸಲಾಯಿತು.

ಎರಡೂ ಸಮುದಾಯಗಳಿಗೆ ಈಗಾಗಲೇ ನಿವೇಶನಗಳನ್ನು ನೀಡಲಾಗಿದ್ದು ತಕ್ಷಣವೇ ಹಣ ಬಿಡುಗಡೆ ಮಾಡುತ್ತೇನೆ. ರಾಷ್ಟ್ರೀಯ ಹಬ್ಬಗಳಿಗೆ ಶಿಷ್ಠಾಚಾರ ಅಗತ್ಯವಿಲ್ಲ. ಎಲ್ಲ ಸಮುದಾಯಗಳ ರಾಜಕೀಯ ಮುಖಂಡರು, ನಾಯಕರು ವೇದಿಕೆ ಮೇಲೆ ಕುಳಿತರೆ ಅದುವೇ ಮಹಾನ್ ವ್ಯಕ್ತಿಗಳಿಗೆ ಸಲ್ಲುವ ಗೌರವ. ಛಲವಾದಿ ಮತ್ತು ಹಾಲುಮತಸ್ಥ ಸಮುದಾಯಗಳ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ.

ನಾನು ಸುಳ್ಳು ಹೇಳುವ ವ್ಯಕ್ತಿಯಲ್ಲ. ಎಲ್ಲ ಸಮುದಾಯದ ವ್ಯಕ್ತಿಗಳು ನನ್ನನ್ನು ಬೆಳೆಸಿದ್ದೀರಿ. ಮೂರು ಬಾರಿ ಶಾಸಕನನ್ನಾಗಿ ಮಾಡಿದ್ದೀರಿ. ನಿಮ್ಮ ಋಣ ತೀರಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದರು.

ಎಲ್ಲ ಸಮುದಾಯಗಳ ಅಭಿವೃದ್ಧಿಗೆ ನಿರೀಕ್ಷೆ ಮೀರಿ ಕೆಸಲ ಮಾಡಿದ್ದೇನೆ. 57 ಕೆರೆ ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನಾವೆಲ್ಲ ಅಭಿನಂದಿಸಲೇ ಬೇಕು. ಹೀಗಾಗಿ ನ.22 ರಂದು ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಯಲಿದೆ.

ಜಗಳೂರು ಭಾವೈಕ್ಯತೆಯ ಸಂಕೇತ. ಅದೇ ನಮ್ಮ ಸಂಸ್ಕøತಿ. ಜನರಲ್ಲಿ ಹೃದಯ ಶ್ರೀಮಂತಿಕೆಯಿದೆ. ಮಳೆಯಿಂದ ಬಡತನ ಕೊಚ್ಚಿಹೋಗುವ ಕಾಲ ಬಂದಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮತದಾರರೆ ನನ್ನ ಅಂಪೈರ್‍ಗಳು.

ಮುಂದಿನ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದರು.

ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ, ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’.. ಎಂದು ಹೇಳಿದ ಕನಕದಾಸ ಅವರು ಉಡುಪಿಯಲ್ಲಿ ಶ್ರೀ ಕೃಷ್ಣನನ್ನೇ ತನ್ನತ್ತ ತಿರುಗಿಸಿ ಕಿಂಡಿಯಿಂದ ದರುಶನ ನೀಡಿದಂತಹ ಮಹಾನ್ ಹರಿ ಭಕ್ತ ಅವರು.

ಅವರ ಕೀರ್ತನೆಗಳಲ್ಲಿ ರಾಮಧಾನ್ಯ ಚರಿತೆ ಶ್ರೇಷ್ಠವಾದುದು. ಅಂತೆ ಒನಕೆ ಓಬವ್ವ ಹೈದರ ಸೈನ್ಯ ನುಸುಳದಂತೆ ನೋಡಿಕೊಂಡು ಚಿತ್ರದುರ್ಗದ ಕೋಟೆ ರಕ್ಷಿಸಿದ ವೀರ ಮಾತೆ ಎಂದು ಬಣ್ಣಿಸಿದರು. ಶೋಷಿತರ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ಇಬ್ಬರೂ ಛಲವಾದಿ ಮತ್ತು ಕುರುಬ ಸಮುದಾಯದ ಮಹಾನ್ ವ್ಯಕ್ತಿಗಳು ಎಂದರು.

ನಿವೃತ್ತ ಉಪನ್ಯಾಸಕ ತಿಮ್ಮರಾಜು, ಶಿಕ್ಷಕಿ ರಾಣ ಮತ್ತು ತಿಪ್ಪೇಸ್ವಾಮಿ ಕನಕದಾಸರು ಮತ್ತು ಓಬವ್ವನವರ ಕುರಿತು ಉಪನ್ಯಾಸ ನೀಡಿದರು.

ಪ್ರೋಟೋ ಕಾಲ್ ಮಿರಿ ಒಂದಾದ ನಾಯಕರು
ಸರಕಾರಿ ಕಾರ್ಯಕ್ರಮವಾಗಿದ್ದರಿಂದ ಶಿಷ್ಠಾಚಾರ ಹಿನ್ನೆಲೆ ವೇದಿಕೆ ಕೆಳಗಿದ್ದ ಮಾಜಿ ಶಾಸಕ ಎಚ್.ಪಿ.ರಾಜೇಶ್, ದೇವೇಂದ್ರಪ್ಪ ಮತ್ತು ಪಾಲಯ್ಯ ಅವರನ್ನು ರಾಜಕೀಯ ಮರೆತು ಶಾಸಕ ಎಸ್.ವಿ.ರಾಮಚಂದ್ರ ಆತ್ಮೀಯವಾಗಿ ವೇದಿಕೆ ಮೇಲೆ ಬರಮಾಡಿಕೊಂಡರು.

ಇಂತಹ ಕಾರ್ಯಕ್ರಮಗಳಲ್ಲಿ ಶಿಷ್ಠಾಚಾರ ಅಗತ್ಯವಿಲ್ಲ. ಹೃದಯ ತುಂಬಿ ಆಹ್ವಾನಿಸುತ್ತೇನೆ. ವೇದಿಕೆಯ ಮೇಲೆ ಬನ್ನಿ ಎಂದು ಕರೆದರು. ಕನಕದಾಸರು ಮತ್ತು ಓಬವ್ವನವರ ಭಾವಚಿತ್ರಗಳಿಗೆ ಎಲ್ಲ ನಾಯಕರು ಪುಷ್ಪನಮನ ಸಲ್ಲಿಸಿದರು.

ಹಾಲಿ ಮತ್ತು ಮಾಜಿ ಶಾಸಕರು ಆಪ್ಯಾಯಮಾನವಾಗಿ ಮಾತನಾಡಿದ್ದಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೆ ಆಶ್ಚರ್ಯದ ಜೊತೆಗೆ ಸಂತೋಷವೂ ಆಯಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪಪಂ ಅಧ್ಯಕ್ಷರಾದ ವಿಶಾಲಾಕ್ಷಿ ಓಬಳೇಶ್, ಉಪಾಧ್ಯಕ್ಷೆ ನಿರ್ಮಲಾಕುಮಾರಿ ಹನುಮಂತಪ್ಪ, ಚೀಫ್ ಆಫೀಸರ್ ಲೋಕ್ಯಾನಾಯ್ಕ, ಕಾಂಗ್ರೆಸ್ ಮುಖಂಡ ಪಾಲಯ್ಯ,

ಇಒ ಚಂದ್ರಶೇಖರ್, ಸದಸ್ಯರಾದ ಸರೋಜಮ್ಮ, ಲಲಿತಾ ಶಿವಣ್ಣ, ಓಬಣ್ಣ, ಭೈರೇಶ್, ಕಲ್ಲೇರುದ್ರೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಎಂಎಲ್‍ಎ ತಿಪ್ಪೇಸ್ವಾಮಿ, ಕುರುಬಸಮುದಾಯದ ಮುಖಂಡ ನಾಗರಾಜ್, ನವೀನ್‍ಕುಮಾರ್, ಸಿದ್ದಪ್ಪ, ಪಾಪಲಿಂಗಪ್ಪ, ನಾಗಲಿಂಗಪ್ಪ ಸೇರಿದಂತೆ ಅನೇಕರು ಇದ್ದರು.

ಜಗಳೂರು ತಾಲೂಕು ಕಚೇರಿ ಆವರಣದಲ್ಲಿ ಕನಕ ದಾಸರ ಜಯಂತಿ ಮತ್ತು ಒನಕೆ ಓಬವ್ವನಗರ ಜಯಂತಿ ಆಚರಿಸಲಾಯಿತು.

Share this Article
Leave a comment

Leave a Reply

Your email address will not be published. Required fields are marked *

error: Content is protected !!