ಜಗಳೂರು: ಕ್ಷಣಾರ್ಧದಲ್ಲೇ ₹ 4.5 ಲಕ್ಷ ಎಗರಿಸಿದ ಕಳ್ಳರು: ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆ!

Suddivijaya
Suddivijaya November 15, 2022
Updated 2022/11/15 at 7:42 AM

ಸುದ್ದಿವಿಜಯ, ಜಗಳೂರು: ನೋಡ ನೋಡುತ್ತಿದ್ದಂತೆ ಹಾಡ ಹಗಲೇ ಬೈಕ್‍ನಲ್ಲಿದ್ದ 4..5 ಲಕ್ಷ ನಗದು ಹಣವನ್ನು ಕಳ್ಳರ ತಂಡ ಎಗರಿಸಿ ಮಿಂಚಿನಂತೆ ಮಾಯವಾಗಿದ್ದಾರೆ. ಈ ಘಟನೆ ನಡೆದಿರುವುದು ಸೋಮವಾರ ಪಟ್ಟಣದ ಕೆನರಾ ಬ್ಯಾಂಕ್ ಎದುರು. ಕಳ್ಳರು ಎಗರಿಸಿ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ತಾಲ್ಲೂಕಿನ ಹನುಮಂತಾಪುರ ಗ್ರಾಮದ ಕೊಟ್ರೇಶ್ ಎಂಬುವವರು ಸೋಮವಾರ ಮಧ್ಯಾಹ್ನ ತನ್ನ ಹೆಂಡತಿ ಹಾಗು ಕುಟುಂಬದ ಸದಸ್ಯರ ಬಂಗಾರದ ಒಡವೆಗಳನ್ನು ಪಟ್ಟಣದ ಡಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಅಡವಿಟ್ಟು ರೂ 4.5 ಲಕ್ಷ ಸಾಲ ಪಡೆದು, ಬ್ಯಾಂಕಿನಿಂದ ಹೊರಗೆ ಬಂದು ತನ್ನ ಬೈಕ್ ನ ಬ್ಯಾಗ್ ನಲ್ಲಿಟ್ಟುಕೊಂಡು ಕೇವಲ 100 ಮೀಟರ್ ಅಂತರದಲ್ಲಿರುವ ಕೆನರಾ ಬ್ಯಾಂಕ್ ಕಡೆಗೆ ತೆರಳುತ್ತಿದ್ದರು.

 ಜಗಳೂರು ಪಟ್ಟಣದ ಕೆನರಾ ಬ್ಯಾಂಕ್ ಎದರು ಸೋಮವಾರ 4.5 ಲಕ್ಷ ರೂ ಹಣ ಎಗರಿಸಿ ಪರಾರಿಯಾದ ಚಾಲಾಕಿ ಕಳ್ಳರು.
 ಜಗಳೂರು ಪಟ್ಟಣದ ಕೆನರಾ ಬ್ಯಾಂಕ್ ಎದರು ಸೋಮವಾರ 4.5 ಲಕ್ಷ ರೂ ಹಣ ಎಗರಿಸಿ ಪರಾರಿಯಾದ ಚಾಲಾಕಿ ಕಳ್ಳರು.

ಅಡವಿಟ್ಟು ಸಾಲ ಪಡೆದಿದ್ದ ಹಣವನ್ನು ಕೆನರಾಬ್ಯಾಂಕ್ ನಲ್ಲಿರುವ ತನ್ನ ಸಾಲವನ್ನು ತೀರುವಳಿ ಮಾಡುವ ಉದ್ದೇಶದಿಂದ ಬೈಕ್ ನಲ್ಲಿಹಣದ ಗಂಟನ್ನು ಇಟ್ಟುಕೊಂಡು ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಬೈಕ್ ಗೆ ಅಡ್ಡ ಬಂದಂತೆ ಮಾಡಿ ಬೈಕ್ ಸವಾರನ ಗಮನವನ್ನು ಬೇರೆಡೆಗೆ ಸೆಳೆದು ಬೈಕ್ ನಲ್ಲಿದ್ದ ರೂ 4.5 ಲಕ್ಷ ನಗದು ಹಣವನ್ನು ಮಿಂಚಿನಂತೆ ಅಪಹರಿಸಿ ಮಾಯವಾಗಿದ್ದಾರೆ.

ಕೆನರಾ ಬ್ಯಾಂಕ್ ಹತ್ತಿರ ಬಂದು ನಗದು ಹಣವನ್ನು ತೆಗೆದುಕೊಳ್ಳಲು ಹೋದಾಗ ಹಣ ಕಳುವಾಗಿರುವುದು ಕೊಟ್ರೇಶ್ ಅವರಿಗೆ ಗಮನಕ್ಕೆ ಬಂದಿದೆ. ಈ ಪ್ರಕರಣ ಸಂಬಂಧ ಕೊಟ್ರೇಶ್ ಅವರು ಜಗಳೂರು ಪೆÇಲೀಸರಿಗೆ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ಧಾವಿಸಿದ ಪೆÇಲೀಸರು ಸಿಸಿ ಟಿವಿಯನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಇದೇ ಬ್ಯಾಂಕ್‍ನ ಮುಂದೆ ವ್ಯಕ್ತಿಯೊಬ್ಬನಿಗೆ ಅಡ್ಡಗಟ್ಟಿ ಗಮನ ಬೇರೆಡೆ ಸೆಳೆದು 1 ಲಕ್ಷ ಹಣವನ್ನು ಕಳ್ಳರು ಎಗರಿಸಿದ್ದರು. ಆದರೇ ಪದೇ ಪದೇ ಈ ಬ್ಯಾಂಕಿನ ಎದುರೇ ಈ ರೀತಿ ಘಟನೆ ನಡೆಯುತ್ತಿರುವುದು ಪಟ್ಟಣದ ಜನರನ್ನು ಭಯಭೀತರನ್ನಾಗಿಸಿದೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!