ಸುದ್ದಿವಿಜಯ, ಚನ್ನಗಿರಿ: ದ್ವಿದಳ ಧಾನ್ಯ ಬೆಳೆಯಾದ ತೊಗರಿ ಬೆಳೆಗೆ ಕಾಯಿ ಕೊರಕದ ಕೀಟದ ಹತೋಟಿಗೆ ಸಮಗ್ರ ಪೀಡೆ ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞರದ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಚನ್ನಗಿರಿ ತಾಲೂಕಿನ ದೊಡ್ಡ ಅಬ್ಬಿಗೆರೆ ಗ್ರಾಮದಲ್ಲಿ ಪಾಪ್ ಕಾರ್ನ್ + ತೊಗರಿಯ ಅಂತರ್ ಬೆಳೆಯ ಮುಂಚುಣಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.
ತೊಗರಿ ಬೆಳೆಯು ಹೂ ಆಡುವ ಹಂತದಲ್ಲಿದ್ದು ಈ ಸಮಯದಲ್ಲಿ ಕಾಯಿ ಕೊರಕದ ಕೀಟದ ನಿರ್ವಹಣೆಗೆ ಪ್ರತಿ ಎಕರೆಗೆ 4ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು.
ಕೀಟ ಬಾದೆ ನಿಯಂತ್ರಣಕ್ಕೆ Emmactin benzoate 0.4 ml ಪ್ರತಿ ಲೀಟರ್ ನೀರಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದು ಬೇಸಾಯ ತಜ್ಞ ಮಲ್ಲಿಕಾರ್ಜುನ ತಿಳಿಸಿದರು.
ಶೇ. 50 ಹೂ ಆಡುವ ಸಂದರ್ಭದಲ್ಲಿ ಪಲ್ಸ್ ಮ್ಯಾಜಿಕ್ , ಪೋಷಕಾಂಶಗಳ ಮಿಶ್ರಣವನ್ನು 10 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು ಮತ್ತು ಜೊತೆಗೆ ಸಸ್ಯ ಪ್ರಚೋದಕ 0.4ಮಿಲಿ ಪ್ರತಿ ಲೀಟರ್ ಅಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಮತ್ತು ಎರಡನೇ ಸಿಂಪರಣೆಯನ್ನು ಹದಿನೈದು ದಿವಸಗಳ ಅಂತರದಲ್ಲಿ ಮಾಡುವುದರಿಂದ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಮಣ್ಣು ವಿಜ್ಞಾನಿ ಎಚ್. ಎಂ. ಸಣ್ಣಗೌಡ್ರವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಸ್ತರಣ ತಜ್ಞರಾದ ರಘುರಾಜ್ ಅವರು ಮಾತನಾಡಿ, ರೈತ ಬಾಂಧವರು ಬೀಜೋದ್ಪಾದನೆ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದೊಡ್ಡಬಿಗೆರೆ ಗ್ರಾಮದ ಮುಂಚೂಣಿ ಪ್ರಾತ್ಯಕ್ಷಿಕೆಯ ಪ್ರಗತಿಪರ ರೈತರು ಭಾಗವಹಿಸಿದ್ದರು.