ಸುದ್ದಿವಿಜಯ, ಜಗಳೂರು: ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಮಣಿಪಾಲ ಆಸ್ಪತ್ರೆಗಳ ಸಮೂಹದಿಂದ ಸಾಮಾನ್ಯ ಜನರಿಗೆ ಆರೋಗ್ಯ ಕಾರ್ಡ್ ಒದಗಿಸುವ ವ್ಯವಸ್ಥೆ ಇದೇ ನ.30ಕ್ಕೆ ಅಂತ್ಯಗೊಳ್ಳಲಿದ್ದು ಸಾರ್ವಜನಿಕರು ತಕ್ಷಣವೇ ಕಾರ್ಡ್ ಪಡೆಯ ಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮತ್ತು ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡುಪಿಯ ಕಸ್ತೂರ ಬಾ ಆಸ್ಪತ್ರೆ, ಮಂಗಳೂರು, ಕರಾವಳಿ ಕರ್ನಾಟಕ, ಗೋವಾದ ಮಣಿಪಾಲ ಆಸ್ಪತ್ರೆಗಳ ಸಮೂಹದಲ್ಲಿ ಸಾಮಾನ್ಯ ಜನರಿಗೆ ಅತ್ಯುತ್ತಮ ವಾದ ಶೀಘ್ರ ಸೌಲಭ್ಯ ಒದಗಿಸಲುವ ಯೋಜನೆಗಳು ಇವೆ.
ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಮಣಿಪಾಲ ಆರೋಗ್ಯ ಕಾರ್ಡ್ ಜಾರಿಗೆ ತರಲಾಗಿದೆ. ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಜನರಿಗೆ ಕಾರ್ಡ್ ನೀಡುತ್ತಿದ್ದೇವೆ. ಎಲ್ಲಾ ಆರೋಗ್ಯ ಸೇವೆಗಳ ಮೇಲೆ ರಿಯಾಯಿತಿ ನೀಡಲಾಗಿದೆ. ಸಣ್ಣ ಮೊತ್ತ ಪಾವತಿಸುವ ಮೂಲಕ ಗುಣಮಟ್ಟದ ಸೇವೆ ಪಡೆಯಬಹುದು. ಯಾರು ಬೇಕಾದರೂ ಈ ಕಾರ್ಡ್ನ ಸೌಲಭ್ಯ ಪಡೆಯ ಬಹುದು ಎಂದರು.
ಮಣಿಪಾಲ ಆರೋಗ್ಯ ಕಾರ್ಡ್ನ 22ನೇ ವರ್ಷ ಮತ್ತು ಒಂದು ಹಾಗೂ ಎರಡು ವರ್ಷಗಳ ಯೋಜನೆ ಒಳಗೊಂಡಿದೆ. 1 ವರ್ಷದ ಯೋಜನೆಯಲ್ಲಿ ಕಾರ್ಡ್ನ ಸದಸ್ಯತ್ವವು ಒಬ್ಬರಿಗೆ 300 ರೂ, ಕೌಟುಂಬಿಕ ಕಾರ್ಡ್ ಅಂದರೆ ಕಾರ್ಡುದಾರರ ಪತ್ನಿ, 25 ವರ್ಷದೊಳಗಿನ ಮಕ್ಕಳಿಗೆ 600 ರೂ, ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡ್ದಾರರ ಪತ್ನಿ ಮಕ್ಕಳು, ಪೋಷಕರು, (ಅಪ್ಪ ಅಮ್ಮ, ಅತ್ತೆ, ಮಾವ)ರಿಗೆ 750 ರೂ ಪಡೆಯಬಹುದು.
ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ರೂ, ಕುಟುಂಬಕ್ಕೆ 800 ರೂ, ಮತ್ತು ಕುಟುಂಬಿಕ ಪ್ಲಸ್ ಯೋಜನೆಗೆ950ರೂ ನೀಡಿದರೆ ತ್ವರಿತ ಚಿಕಿತ್ಸೆಗೆ ಆರೋಗ್ಯ ಕಾರ್ಡ್ ನೆರವಾಗಲಿದೆ. ಕಸ್ತೂರ ಬಾ ಆಸ್ಪತ್ರ ಮಣಿಪಾಲದಲ್ಲಿ ವೈದ್ಯಕೀಯ ತಪಾಸಣೆ ರಿಯಾಯಿತಿ, ಔಷಧಗಳಿಗೆ ಶೇ.12ರಷ್ಟು ರಿಯಾಯಿತಿ, ವೈದ್ಯ ಸಮಾಲೋಚನೆಗೆ ಶೇ.50ಷ್ಟು, ಪ್ರಯೋಗಾಲಯ ಪರೀಕ್ಷೆಗೆ ಶೇ.30ರಷ್ಟು, ವಿವಿಧ ಸ್ಕಾö್ಯನಿಂಗಳಿಗೆ ಶೇ.20ರಷ್ಟು, ಸಾಮಾನ್ಯ ಒಳರೋಗಿಯಾದಲ್ಲಿ ಶೇ.25ರಷ್ಟು, ಕೋವಿಡ್ ರೋಗಿಗಳಿಗೆ ಶೇ.10ರಷ್ಟು ರಿಯಾಯಿತಿ ಈ ಆರೋಗ್ಯ ಕಾರ್ಡ್ ಹೊಂದಿದವರಿಗೆ ಲಭ್ಯವಾಗಲಿದೆ. ನವೆಂಬರ್ ಒಳಗೆ ನೊಂದಾಯಿಸಿದವರಿಗೆ ಈ ಸೌಲಭ್ಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ಪ್ರತಿನಿಧಿಗಳಾದ ಅನಿಲ್ ನಾಯ್ಕ, ಕೆಂಚನಗೌಡ ಕೆ.ಬಿ. ಉಪಸ್ಥಿತರಿದ್ದರು.
ಜಗಳೂರಿನ ಪತ್ರಿಕಾಭವನದಲ್ಲಿ ಮಣಿಪಾಲ ಆಸ್ಪತ್ರೆಯ ಆರೋಗ್ಯ ಕಾರ್ಡ್ ಸಂಬAಧ ಆಸ್ಪತ್ರೆಯ ಪ್ರತಿನಿಧಿಗಳು ಸುದ್ದಿಗೋಷ್ಠಿ ನಡೆಸಿದರು.