ಸುದ್ದಿವಿಜಯ, ಜಗಳೂರು: ದಾವಣಗೆರೆ-ಜಗಳೂರು ಮುಖ್ಯರಸ್ತೆಯಲ್ಲಿರುವ ಅಲ್ಪಾಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕೀಯರ ವಸತಿ ಶಾಲೆಗೆ ಶುಕ್ರವಾರ ಜಿಲ್ಲಾ ಅಲ್ಪ ಸಂಖ್ಯಾತ ಇಲಾಖೆ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠದ್ ಭೇಟಿ ನೀಡಿ ಪರಿಶೀಲಿಸಿದರು.
ಸ್ವಂತ ಕಟ್ಟಡವಿಲ್ಲದೇ ಬಾಡಿಗೆಯಲ್ಲಿ ವಸತಿ ಶಾಲೆ ನಡೆಯುತ್ತಿದ್ದು, ಮೂಲ ಸೌಕರ್ಯ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಚಾರಿಸಿದರು. ಕೆಲ ಸಾರ್ವಜನಿಕರು ಪ್ರಾಂಶುಪಾಲರಾದ ಜಿ.ರೂಪಕಲಾ ಮೇಲೆ ಆರೋಪ ಮಾಡಿದ್ದರು. ಹೀಗಾಗಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಟ್ಟಣದ ಮೊರಾರ್ಜಿ ಬಾಲಕೀಯರ ವಸತಿ ಶಾಲೆ ಬಾಡಿಗೆ ಕಟ್ಟವಾಗಿದ್ದರೂ ಸಹ ಪ್ರಾಂಶುಪಾಲರಾದ ಜಿ.ರೂಪಕಲಾ ಅವರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದಾರೆ. 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಊಟ, ವಸತಿ, ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಹೈಟೆಕ್ ಶೌಚಾಲಯ, ಶುದ್ಧ ಕುಡಿಯುವ ನೀರು, ಶಾಖಾ ಆಹಾರ ವ್ಯವಸ್ಥೆ ಮಾಡಿದ್ದಾರೆ.
ಹೈಟೆಕ್ ವಸತಿನಿಲಯಂದಂತಿದೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇಲ್ಲ. ಕೆಲ ಸಾರ್ವಜನಿಕರು ಪ್ರಾಂಶುಪಾಲರಾದ ರೂಪಕಲಾ ಅವರ ಮೇಲೆ ಸುಳ್ಳು ಆರೋಪ ಮಾಡಿರಬಹುದು. ಆದರೆ ನಾನು ಸ್ಥಳ ಪರಿಶೀಲಿಸಿದಾಗ ಅಂತಹ ಗಂಭೀರ ಸಮಸ್ಯೆಗಳು ಕಂಡು ಬಂದಿಲ್ಲ. ವಿದ್ಯಾರ್ಥಿಗಳಿಗೆ ಇಲ್ಲಿ ಗೃಹ ವಾತಾವರಣವಿದೆ. ಭದ್ರತೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ.
ಅಂತಹ ಯಾವುದೇ ಲೋಪದೋಷಗಳು ಕಂಡು ಬಂದಿಲ್ಲ. ಮಧ್ಯಾಹ್ನಾನದ ಊಟ ಇಲ್ಲಿಯೇ ಮಾಡಿದ್ದೇನೆ. ಅಡುಗೆ ಸಿಬ್ಬಂದಿಗಳು ಗುಣಮಟ್ಟದ ಊಟ ಮಾಡಿದ್ದರು. ಅಷ್ಟೇ ಅಲ್ಲ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ನಾನೇ ಚರ್ಚಿಸಿದ್ದೇನೆ. ಪ್ರಾಂಶುಪಾಲರ ಮೇಲೆ ಬಂದಿರುವ ಆರೋಪಗಳು ನಿರಾಧಾರವಾಗಿವೆ ಎಂದರು.
ಈ ವೇಳೆ ಪ್ರಾಂಶುಪಾಲರಾದ ಜಿ. ರೂಪಕಲಾ, ಮೌಲಾನಾ ಅಜಾದ್ ಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರಪ್ಪ ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.
ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯ ವಿಶೇಷತೆ:
ಪಟ್ಟಣದಲ್ಲಿ 2017-18ನೇ ಸಾಲಿನಲ್ಲಿ ಆರಂಭವಾದ ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಶಾಲೆ ಬಾಡಿಗೆ ಕಟ್ಟಡಸಲ್ಲಿ ನಡೆಯುತ್ತಿದ್ದು ಈ ವೇಳೆ ಜಿಲ್ಲಾ ಅಲ್ಪ ಸಂಖ್ಯಾತ ಇಲಾಖೆ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠದ್ ಅವರು ಜಗಳೂರಿನ ಹೃದಯ ಭಾಗದಲ್ಲಿರುವ ನೆಹರೂ ರಸ್ತೆಯಲ್ಲಿರುವ ಹಳೇಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಭೇಟಿ ನೀಡಿದರು. ಮೌಲಾನ ಆಜಾದ್ ಶಾಲೆ ನಿರ್ಮಾಣಕ್ಕೆ ಇದು ಪ್ರಶಸ್ತ ಸ್ಥಳವಾಗಿದ್ದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಲ್ಲದೇ ಇನ್ನೆರಡು ಕಡೆ ಸ್ಥಳ ಪರಿಶೀಲನೆ ಮಾಡಿದ್ದೇವೆ. ಸರಕಾರದ ಉನ್ನತಾಧಿಕಾರಿಗಳು ಯಾವುದನ್ನು ಅಂತಿಮಗೊಳಿಸುತ್ತಾರೋ ಅಲ್ಲಿ ಶಾಲೆ ನಿರ್ಮಾಣ ಮಾಡುತ್ತೇವೆ ಎಂದರು.
ಶಾಲೆಯ ವಿಶೇಷತೆ: 6 ರಿಂದ 10ನೇ ತರಗತಿಯವರೆಗೆ ಸಿಖ್,ಭೌದ್ಧ, ಮುಸ್ಲಿಂ, ಪಾರಸಿ, ಕ್ರೈಸ್ತ ಅಲ್ಪಸಂಖ್ಯಾತ ಧರ್ಮಗಳ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಅವಕಾಶ ನೀಡಲಾಗಿದೆ. ಉಳಿದ ಶೇ.25ರಷ್ಟು ಎಲ್ಲ ಧರ್ಮ, ಜಾತಿಯ ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶವಿದೆ. ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ದೊರೆಯಲಿದ್ದು, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ ಸೇರಿದಂತೆ ಎಲ್ಲ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ ಎಂದು ಮಲ್ಲಿಕಾರ್ಜುನ ಮಠದ್ ತಿಳಿಸಿದರು.