ಸುದ್ದಿವಿಜಯ, ಜಗಳೂರು: ಇದೇ ನ.28ಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಜಗಳೂರು ತಾಲೂಕು ಸಮಿತಿ ವತಿಯಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಕೆಆರ್ಎಸ್ ಪಕ್ಷದ ಜಿಲ್ಲಾಧ್ಯಕ್ಷ ಸರೇಶ್ ಸಂಗಾಹಳ್ಳಿ ತಿಳಿಸಿದರು.
ಶುಕ್ರವಾರ ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರುವ ಸೋಮವಾರ ನುಡಿ ಹಬ್ಬವನ್ನು ಬೆಳಿಗ್ಗೆ 12.30ಕ್ಕೆ ಆಚರಿಸಲಾಗುವುದು. ಕಾರ್ಯಕ್ರಮಕ್ಕೆ ಪಕ್ಷದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷರಾದ ರವಿಕೃಷ್ಣಾರೆಡ್ಡಿ, ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಹಾತ್ಮ ಗಾಂಧಿ ಬಸ್ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಐತಿಹಾಸಿಕ ಹಾಗೂ ಸಾಂಸ್ಕøತಿಕ ಸ್ಥಳಗಳು, ನಾಡು,ನುಡಿ ಹಾಗೂ ಕನ್ನಡದ ನೆಲ, ಜಲ, ಗಡಿ ಮತ್ತು ಭಾಷೆಯ ವಿಚಾರವಾಗಿ ಸವಿಸ್ತಾರವಾಗಿ ವಿಷಯವನ್ನು ರವಿಕೃಷ್ಣಾರೆಡ್ಡಿ ಅವರು ಮಂಡಿಸಲಿದ್ದಾರೆ. ತಾಲೂಕಿನ ಕೆಆರ್ಎಸ್ ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಬೈಕ್ ರ್ಯಾಲಿಯ ಮೂಲಕ ಕನ್ನಡದ ನೆಲ ಜಲ, ಭಾಷಯ ಕುರಿತು ಜನಸಾಮಾನ್ಯರಿಗೆ ತಿಳಿಸುವ ಕಾರ್ಯಕ್ರಮ ಇದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿಜನರು ಆಗಮಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಸಿದ್ದಾಂತಕ್ಕೆ ವಾಲುತ್ತಿರುವ ಯುವಕರು: ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಪಕ್ಷದ ಸಿದ್ಧಾಂತವಾಗಿದೆ. ಎಲ್ಲಿ ಶ್ರೀ ಸಾಮಾನ್ಯರಿಗೆ ಅನ್ಯಾಯವಾಗುತ್ತದೋ ಅದನ್ನು ನಾವು ಖಂಡಿಸುತ್ತೇವೆ. ಸೋಷಿಯಲ್ ಮೀಡಿಯಾಗಳಲ್ಲಿ ಯುವಪಡೆ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಆನೈನ್ ಮೂಲಕ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಜನ ಹೆಸರು ನೋಂದಾಯಿಸಿಕೊಂಡು ಸೇನೆಯ ಸೈನಿಕರಂತೆ ಬೆಂಬ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಈ ವೇಳೆ ಸಂಘಟನಾ ಕಾರ್ಯದರ್ಶಿ ಕೆ.ಎಸ್.ವೀರಭದ್ರಪ್ಪ, ತಾಲೂಕು ಘಟಕದ ಅಧ್ಯಕ್ಷ ಇಮಾಮ್ ಸಾಬ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೃಥ್ವಿರಾಜ್, ಅಂಜಿನಪ್ಪ, ಲಿಂಗರಾಜು, ಡಿ.ಸಿ. ಲಿಂಗರಾಜು ಸೇರಿದಂತೆ ಅನೇಕರು ಇದ್ದರು.