ಜಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಸಂಸ್ಥಾಪನಾ ದಿನ ಹಾಗೂ ಸಂವಿಧಾನ ದಿನಾಚರಣೆ ಆಚರಿಸಲಾಯಿತು.

Suddivijaya
Suddivijaya November 26, 2022
Updated 2022/11/26 at 11:53 AM

ಸುದ್ದಿವಿಜಯ ಜಗಳೂರು.ದೆಹಲಿಯ ಕೇಜ್ರಿವಾಲ್ ಸರ್ಕಾರವು ಅಸಾಧಾರಣ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ದೇಶಾದ್ಯಂತ ಆಮ್‌ಆದ್ಮಿ ಪಕ್ಷ ವಿಸ್ತಾರಕ್ಕೆ ಭದ್ರ ಬುನಾದಿ ಹಾಕಿದೆ ಎಂದು ಎಎಪಿ ಜಿಲ್ಲಾ ಖಜಾಂಚಿ ಗೋವಿಂದರಾಜು ಹೇಳಿದರು.

ಇಲ್ಲಿನ ಹಳೇ ಮಹಾತ್ಮಗಾಂಧಿ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಮ್‌ಆದ್ಮಿ ಪಕ್ಷದ ೧೦ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಭಾರತ ಸಂವಿಧಾನ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಜನ ಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಸರ್ಕಾರವು ಬರಬೇಕೆಂಬುವುದು ದೇಶದ ಜನರ ಹಲವು ದಶಕಗಳ ಬಯಕೆಯಾಗಿತ್ತು. ಅದೀಗ ದೆಹಲಿಯಲ್ಲಿ ಆರಂಭವಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆ, ಆರೋಗ್ಯ, ಸಾರಿಗೆ, ಕ್ರೀಡೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಎಎಪಿ ಸರ್ಕಾರ ಉತ್ತಮ ಆಡಳಿತ ನೀಡಿದೆ ಎಂದು ತಿಳಿಸಿದರು.

ಎಎಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಲ್ಲೇಶ್ ಮಾತನಾಡಿ, ದೇಶವು ಸಂವಿಧಾನವನ್ನು ಅಳವಡಿಸಿಕೊಂಡ ದಿನದಂದೆ ಸ್ಥಾಪನೆಯಾಗಿರುವ ಎಎಪಿ ಸಂವಿಧಾನವನ್ನು ಗೌರವಿಸುವ ಪಕ್ಷವಾಗಿದೆ. ನಮ್ಮದು ಧರ್ಮನಿರಪೇಕ್ಷ ರಾಷ್ಟçವಾಗಿರುವುದರಿಂದ ಆಡಳಿತ ವಿಚಾರದಲ್ಲಿ ಜಾತಿ,ಧರ್ಮ ಇವನ್ನು ಸೇರಿಸುವುದು ಸರಿಯಲ್ಲಾ ಎಂದರು.

ಅಭಿವೃದ್ದಿಯ ಗುರಿ, ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿಯನ್ನೇ ರಾಜಕಾರಣ ಎಂದು ಕೊಂಡಿರುವ ಏಕೈಕ ಪಕ್ಷ ನಮ್ಮದು. ನಮ್ಮ ಕಾರ್ಯಕರ್ತರು ಸಂವಿಧಾನದಲ್ಲಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ತಿಳಿದುಕೊಂಡಿದ್ದಲ್ಲಿ ಜನರಿಗೆ ಹೆಚ್ಚು ಸಮರ್ಪಕವಾಗಿ ಸಹಾಯ ಮಾಡಬಹುದು ಎಂದರು.

 

ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಎಎಪಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಎಪಿ ಪದಾಧಿಕಾರಿಗಳಾದ ಎಚ್. ನಾಗರಾಜ್, ಇಬ್ರಾಹೀಂ, ದೇವಿಕೆರೆ ಸ್ವಾಮಿ, ಗೌರಿಪುರ ಮಂಜುನಾಥ್, ಗುರುಶಾಂತಮ್ಮ, ಸಲ್ಮಾಭಾನು ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!