ಸುದ್ದಿವಿಜಯ, ಜಗಳೂರು: ಜಗತ್ತನ್ನು ಪ್ರೀತಿಸುವವನೇ ನಿಜವಾದ ಕವಿ. ಕವಿ ಯಾದವನು ಜಾತಿ, ಮತ ಮತ್ತು ಪಂತಗಳನ್ನು ಮೀರಿ ಬೆಳೆಯಬೇಕು ಎಂದು ನಿವೃತ್ತ ಉಪನ್ಯಾಸಕ ಡಿ.ಸಿ.ಮಲ್ಲಿಕಾರ್ಜುನ ಯುವ ಕವಿಗಳಿಗೆ ಮಾರ್ಗದರ್ಶನ ನೀಡಿದರು.
ಪಟ್ಟಣದ ಪಪಂ ಸಭಾಂಗಣದಲ್ಲಿ ಶನಿವಾರ ಕೇಂದ್ರ ಕನ್ನಡ ಸಾಹಿತ್ಯವೇದಿಕೆ ಬೆಂಗಳೂರು, ಜಗಳೂರು ತಾ. ಘಟಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕವಿ ಗೋಷ್ಠಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.
ಜ್ಞಾನಪೀಠ ಪುರಸ್ಕøತ ವರಕವಿ ದ.ರಾ.ಬೇಂದ್ರೆಯವರು ಧಾರವಾಡ ಸಾಧನ ಕೇರಿಯಲ್ಲಿ ಬಿಸಿಲಿನಲ್ಲಿ ನಡೆದೇ ಹೋಗುತ್ತಿದ್ದರು. ಹೋಗುವಾಗ ಚಪ್ಪಲಿಯ ಉಂಗುಸ್ಟ ಕಿತ್ತು ಹೋಗುತ್ತದೆ. ರಸ್ತೆಯ ಬದಿಯಲ್ಲಿ ಕುಳಿತಿದ್ದ ಚಮ್ಮಾರನ ಬಳಿ ಹೋಗಿ ಒಂದು ಕಾಲಿನ ಚಪ್ಪಲಿಯ ಉಂಗುಸ್ಟ ಕಿತ್ತು ಹೋಗಿದೆ ಹೊಲೆದು ಕೊಡಪ್ಪಾ ಎಂದರಂತೆ.
ಚಮ್ಮಾರ ‘ಬುದ್ಧಿ ಬಹಳ ಬಿಸಿಲದಾ ನಿಮ್ಮ ಚಪ್ಪಲಿ ಹೊಲಿಯುವ ವರೆಗೂ ನನ್ನ ಚಪ್ಪಲಿ ಹಾಕಿಕೊಳ್ಳಿ’ ಎಂದರಂತೆ ಆಗ ಬೇಂದ್ರೆ ಅವರು ಔದಾರ್ಯ ಚಮ್ಮಾರನಿಗಿಂತ ದೊಡ್ಡದು. ತಮ್ಮ ಬಳಿ ಇದ್ದ ಕೊಡೆಯನ್ನು ಅರಳಿಸಿ ಬಿಸಿಲಿನಲ್ಲಿ ಕುಳಿತ ಚಮ್ಮಾರನಿಗೆ ನೆರವಾದರಂತೆ’; ಹಾಗೆ ಕವಿಯಾದವರು ಜಗತ್ತನ್ನು ಪ್ರೀತಿಸುವ ಗುಣ ಬೆಳಸಿಕೊಳ್ಳಬೇಕು.
ಇತ್ತೀಚಗೆ ಜಗತ್ತಿನಲ್ಲಿ ಸಾಮರಸ್ಯದ ಕೊರತೆಯಿಂದ ಯುದ್ಧಗಳಾಗುತ್ತಿವೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ಪದ್ಯಗಳನ್ನು ರಚಿಸುವಾಗ ಅರ್ಥಗಳ ಜೊತೆ ಅನುರಣವಾಗಬೇಕು. ಬೇಂದ್ರೆ ಅವರ ನಾಕು ತಂತಿ ಅರ್ಥಮಾಡಿಕೊಳ್ಳಬೇಕಾದರೆ ಕನಿಷ್ಟ 10 ವರ್ಷವಾದರೂ ಅಧ್ಯಯನ ಮಾಡಬೇಕು.
ಅದರ ಆಳ ಅಗಲ ಅರ್ಥಮಾಡಿಕೊಂಡ ಕುವೆಂಪು ಅವರು ಬೇಂದ್ರೆಯವರನ್ನು ಜಗದ ಕವಿ ಯುಗದ ಕವಿ ಎಂದು ಕರೆದರು. ಇಳಿವಯಸ್ಸಿನಲ್ಲಿ ಸಾಹಿತ್ಯದಲ್ಲಿ ತಪಸ್ವಿಯಂತೆ ಕುಳಿತು ರಚಿಸಿದ ಕಾವ್ಯ, ಸಾಹಿತ್ಯ ಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವದಲ್ಲಿದೆ. ವಯಸ್ಸಾದ ಮೇಲೆ ಅರಳ ಬೇಕು ಮತ್ತು ಮರಳಬೇಕು ಎಂಬುದು ಅದರ ಅರ್ಥ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ಮಾತನಾಡಿ, ಯುವ ಜನತೆ ಸಾಹಿತ್ಯ ಕೃಷಿಯಲ್ಲಿ ಔದಾರ್ಯತೆಯನ್ನು ಹುಡುಕುವ ಕೆಲಸ ಮಾಡಬೇಕು. ಜತ್ತಿನಲ್ಲಿ ಸಾಹಿತ್ಯ ಇಲ್ಲದಿದ್ದರೆ ಅಂತರಾಳದ ತುಮುಲವನ್ನು ಹೊರ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಜ್ಞಾನದ ಮೌಲ್ಯ ಎಂದರೆ ಕವಿತೆ ಮತ್ತು ಕಾವ್ಯಗಳು ಹಾಗೂ ಸಾಹಿತ್ಯ ಎಂದರು.
ಕಾರ್ಯಕ್ರಮದಲ್ಲಿ ಕೇ.ಕ.ಸಾ.ವೇ ಗೌರವಾಧ್ಯಕ್ಷ ಇನಾಯತ್ ಪಾಷಾ, ತಾ.ಕ.ಸಾ.ಪ ಅಧ್ಯಕ್ಷರಾದ ಕೆ.ಸುಜಾತಮ್ಮ, ಸಾಹಿತ್ಯ ವೇದಕೆಯ ಕೆ.ಜಿ.ಹಾಲೇಶ್, ಹಿರಿಯ ಸಾಹಿತಿ ಎನ್.ಎಂ.ರವಿಕುಮಾರ್, ಪ್ರಾಚಾರ್ಯ ಲೋಕರಾಜ್ ದೊಡ್ಡಮನಿ ಮಾತನಾಡಿದರು. ಜೆ.ಎಂ.ಇಮಾಂ ಶಾಲೆಯ ಸಂಸ್ಥಾಪಕ ಹಾಗೂ ಜಿಲ್ಲಾಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಜೆ.ಕೆ.ಹುಸೇನ್ ಮಿಯಾ ಸಾಬ್ ಅವರಿಗೆ ಸನ್ಮಾನಿಸಲಾಯಿತು. ಇಂದಿರಮ್ಮ, ಎಚ್.ಚಂದ್ರಶೇಖರ್ ಇದ್ದರು. 20ಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗನ್ನು ಮಂಡಿಸಿದರು.