ಸುದ್ದಿವಿಜಯ ಜಗಳೂರು.ಕಾರು ಅಪಘಾತದಲ್ಲಿ ಪ್ರಾಧ್ಯಾಪಕ ಸಾವು, ಮೂರು ಜನ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಬಸಪ್ಪನಹಟ್ಟಿಯ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಎಸ್ ವಾಸುದೇವನ್(57) ಮೃತರು.
ಪುತ್ರ ಶ್ರೇಯಸ್ ಎಂಬಿಬಿಎಸ್ ವಿದ್ಯಾರ್ಥಿ, ಪಿಎಚ್ ಡಿ ವಿದ್ಯಾರ್ಥಿನಿಯರಾದ ನಿರ್ಮಲ ಸಿ.ವಿ, ರಾಜೇಶ್ವರಿ ಕಡ್ಲಿಬುಡ್ಡಿ ಗಂಭೀರ ಗಾಯಗೊಂಡಿದ್ದಾರೆ.
ಹೊರನಾಡಿನ ಇತಿಹಾಸ ಅಕಾಡೆಮಿಯ ಕಾರ್ಯಕ್ರಮ ಮುಗಿಸಿಕೊಂಡು ಹಂಪಿಗೆ ಹೋಗುವಾಗ ಜಗಳೂರು ತಾಲೂಕು ಬಸಪ್ಪನಹಟ್ಟಿ ಗ್ರಾಮದ ಬಳಿ ಕಾರು ಲಾರಿಗೆ ಡಿಕ್ಕಿಯಾಗಿ ಅಪಘಾತವಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.
ಸ್ದಳದಲ್ಲಿ ಪ್ರಾಧ್ಯಾಪಕ ಸಾವನ್ನಪ್ಪಿದ್ದು,ಗಾಯಗೊಂಡವರನ್ನು ಜಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.