ಬಡತನದಲ್ಲೇ ಅರಳಿದ ಹಳ್ಳಿ ಪ್ರತಿಭೆ, ಡಾ.ಟಿ.ಬಸವರಾಜ ಅವರಿಗೆ ಪಿಎಚ್‍ಡಿ ಪ್ರದಾನ!

Suddivijaya
Suddivijaya November 29, 2022
Updated 2022/11/29 at 12:39 PM

ಸುದ್ದಿವಿಜಯ,ಜಗಳೂರು: ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಟಿ.ಬಸವರಾಜ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪ್ರದಾನ ಮಾಡಲಾಗಿದೆ.

ಸಮಾಜ ಶಾಸ್ತ್ರ ಅಧ್ಯಯನ ವಿಭಾಗದಲ್ಲಿ ‘ಹೆಲ್ತ್ ಸ್ಟೇಟಸ್ ಆಫ್ ಮೈನಿಂಗ್ ಲೇಬರರ್ಸ್ ಇನ್ ಬಳ್ಳಾರಿ ಡಿಸ್ಟ್ರಿಕ್ಟ್: ಎ ಸೋಶಿಯಾಲಾಜಿಕಲ್ ಅನಾಲಿಸಿಸ್’ ಎಂಬ ಮಹಾ ಪ್ರಬಂಧವನ್ನು ಶ್ರೀ ಕೃಷ್ಣದೇವರಾಯ ವಿವಿ ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಡಾ.ಎನ್.ವೀರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ವಿವಿ ಡಾಕ್ಟರ್ ಆಫ್ ಫಿಲಾಸಪಿ ಪದವಿ ನೀಡಿ ಗೌರವಿಸಿದೆ.

ನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಡಾ.ಟಿ.ಬಸವರಾಜ, ಪಿಎಚ್‍ಡಿ  

ಬಡತನದಲ್ಲಿ ಅರಳಿದ ಪ್ರತಿಭೆ; ಕುಗ್ರಾಮವಾಗಿರುವ ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ತಿಪ್ಪೇಸ್ವಾಮಿ ಮತ್ತು ಶಿವರುದ್ರಮ್ಮನವರ ಮಗನಾದ ಬಸವರಾಜ್ ಅವರು ಇಡೀ ಗ್ರಾಮದಲ್ಲೇ ಮೊದಲನೇ ಬಾರಿಗೆ ಡಾಕ್ಟೇರ್ ಪಡೆದಿರುವ ಏಕೈಕ ವ್ಯಕ್ತಿ.

ಪ್ರಾಥಮಿಕ ಹಂತದಿಂದಲೇ ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರೈಸಿದ ಅವರು ಮನೆಯಲ್ಲಿ ಬಡತನವಿದ್ದರೂ ಸಹ ಅದನ್ನು ಮೆಟ್ಟಿ ನಿಂತು ವಿಶ್ವವಿದ್ಯಾಲಯದ ಆವರಣದಲ್ಲೇ ಅತಿಥಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಲೇ ಪಿಎಚ್‍ಡಿ ಪೂರೈಸಿದ್ದು ವಿಶೇಷ.
ಪಿಎಚ್‍ಡಿ ಪದವಿ ಪಡೆದಿರುವ ಡಾ.ಟಿ.ಬಸವರಾಜ ಅವರಿಗೆ ತಂದೆ-ತಾಯಿ ಹಾಗೂ ಸಂಬಂಧಿಕರು, ಸ್ನೇಹಿತರು, ಹಿತೈಶಿಗಳು ಶುಭಾಶಯ ಕೋರಿದ್ದಾರೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!