ಬೇಸಿಗೆ ರಾಗಿ ಬಿತ್ತನೆ ಮಾಡುವ ರೈತರೇ ಈ ಸುದ್ದಿ ಗಮನಿಸಿ, ಕೆವಿಕೆ ವಿಜ್ಞಾನಿಗಳ ಸಲಹೆ ಪಡೆದು ಅಧಿಕ ಇಳುವರಿ ಪಡೆಯಿರಿ!

Suddivijaya
Suddivijaya December 3, 2022
Updated 2022/12/03 at 12:57 PM

ಸುದ್ದಿವಿಜಯ,ಜಗಳೂರು: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು ಅನೇಕ ರೈತರ ಫಸಲು ಅಧಿಕ ಮಳೆಯಿಂದ ಇಳುವರಿ ಕುಂಠಿತವಾಗಿತ್ತು. ಆದರೆ ಬೇಸಿಗೆಯಲ್ಲಿ ರಾಗಿ ಬೆಳೆಗೆ ಅತ್ಯುತ್ತಮ ವಾತಾವರಣವಿದ್ದು ಇಳುವರಿಗೆ ಬೇಗಾಗುವ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ರೈತರಿಗೆ ಸಲಹೆ ನೀಡಿದರು.

ತಾಲೂಕಿನ ಹಿರೇ ಅರಕೆರೆ ಗ್ರಾಮದಲ್ಲಿ ರಾಗಿ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಮುಂಚೂಣೆ ಪ್ರಾತ್ಯಕ್ಷಿತೆಯನ್ನು ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿ ಹಿರೇ ಅರಕೆರೆ ಗ್ರಾಮದ 25ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಬಿತ್ತನೆ ರಾಗಿ ಬೀಜಗಳನ್ನು ನೀಡಿ ರಾಗಿ ಬೆಳೆಯ ವಿಧಾನದ ಬಗ್ಗೆ ಪ್ರಾತ್ಯಕ್ಷತೆ ನೀಡಿದರು.

 ಜಗಳೂರು ತಾಲೂಕಿನ ಹಿರೇ ಅರಕೆರೆ ಗ್ರಾಮದಲ್ಲಿ ಕೆವಿಕೆ ವತಿಯಿಂದ 25ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ರಾಗಿ ಬಿತ್ತನೆ ಬೀಜಗಳನ್ನು ನೀಡಲಾಯಿತು.
 ಜಗಳೂರು ತಾಲೂಕಿನ ಹಿರೇ ಅರಕೆರೆ ಗ್ರಾಮದಲ್ಲಿ ಕೆವಿಕೆ ವತಿಯಿಂದ 25ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ರಾಗಿ ಬಿತ್ತನೆ ಬೀಜಗಳನ್ನು ನೀಡಲಾಯಿತು.

ಹಿಂಗಾರಿ ಮತ್ತು ಬೇಸಿಗೆಯಲ್ಲಿ ರಾಗಿ ಅಧಿಕ ಇಳುವರಿ ಕೊಡುವ ತಳಿಗಳಾದ ಎಂಎಲ್ 365, ಜಿಪಿಯು 28 ಬೆಳೆಯುವುದು ಸೂಕ್ತ. ಜೈವಿಕ ಗೊಬ್ಬರಗಳಾದ AZOSPRILLIUM ಮತ್ತು ರಂಜಕ ಕರಗಿಸುವ ಗೊಬ್ಬರ ಸುಮಾರು 500 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಬಿಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ರಾಸಾಯನಿಕ ಗೊಬ್ಬರದ ಪ್ರಮಾಣವನ್ನು ಶೇಕಡ 10 ರಿಂದ 15 ಪಸೆರ್ಂಟ್ ಕಡಿಮೆ ಮಾಡಬಹುದು ಎಂದು ರೈತರಿಗೆ ಸಲಹೆ ನೀಡಿದರು.

ಒಳ ಸುರಿವುಗಳಾದ ರಾಗಿ ಬೀಜ 5 ಕೆಜಿ, ಜೈವಿಕ ಗೊಬ್ಬರ 2 ಕೆಜಿ ಹಾಗೂ ಲಘು ಪೆÇೀಷಕಾಂಶಗಳ ಮಿಶ್ರಣ 5 ಕೆಜಿ ಉಚಿತವಾಗಿ ರೈತರಿಗೆ ನೀಡಿದರು.
ಇದೇ ವೇಳೆ ಬಿದರಿಕೆರೆ ತರಳಬಾಳು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಮಂಜುನಾಥ್ ಮಾತನಾಡಿ, ಕೃಷಿ ವಿಜ್ಞಾನಿಗಳು ಹೇಳುವ ರೀತಿಯಲ್ಲಿ ನಾವು ತಂತ್ರಜ್ಞಾನವನ್ನು ಬಳಕೆ ಮಾಡಿದರೆ ಇಳುವರಿಯನ್ನು ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ಹಿರೇ ಅರಕೆರೆಯ ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು. ಕೆವಿಕೆ ವಿಜ್ಞಾನಿಗಳಾ ಪವನ್ ಪಾಟೀಲ್, ಎಫ್‍ಪಿಒ ನಿರ್ದೇಶಕರಾರ ಗುತ್ತಿದುರ್ಗ ಗ್ರಾಮದ ಬಸವನಗೌಡ್ರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!