ಸುದ್ದಿವಿಜಯ ಜಗಳೂರು.ಪಟ್ಟಣದ ದೇವೆಗೌಡ ಬಡಾವಣೆ – ಅಶ್ವಿನಿ ಲೇಔಟ್ ಸಂಪರ್ಕ ರಸ್ತೆಯ ಸೇತುವೆ ಕುಸಿದು ಬಾಯ್ದೆರೆದುಕೊಂಡಿದ್ದು, ಅಪಾಯದ ಹೊಸ್ತಿಲಲ್ಲಿದೆ.
ಮೂರ್ನಾಲ್ಕು ವರ್ಷಗಳಿಂದ ತಲೆ ಎತ್ತಿರುವ ಅಶ್ವಿನಿ ಲೇಔಟ್ನಲ್ಲಿ ಬಹಳಷ್ಟು ಮನೆಗಳು ನಿರ್ಮಾಣವಾಗುತ್ತಿವೆ. ಕಟ್ಟಡಕ್ಕೆ ಅಗತ್ಯ ಸಾಮಾಗ್ರಿಗಳಾದ ಸಿಮೆಂಟ್, ಮರಳು, ಇಟ್ಟಿಗೆ, ನೀರಿನ ಟ್ಯಾಂಕರ್ನAತಹ ವಾಹನಗಳು ಇದೇ ಸೇತುವೆ ಮೇಲೆ ನಿತ್ಯ ಓಡಾಡುತ್ತಿವೆ. ಆದರೆ ಸೇತುವೆಯ ಸಿಮೆಂಟ್ ಅಕ್ಕಳಿಕೆ ಕಿತ್ತು, ಕಬ್ಬಿಣದ ರಾಡುಗಳು ಹೊರ ಚಾಚಿವೆ, ಇಷ್ಟೊಂದು ದುಸ್ಥಿತಿಯಲ್ಲಿರುವ ಸೇತುವೆ ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸಾದ್ಯತೆ.
ಇನ್ನು ಬೈಕ್, ಕಾರು ಸವಾರರು ಮೈಯಲ್ಲಾ ಎಚ್ಚರಿಕೆ ವಹಿಸಿಕೊಂಡು ಚಲಿಸಬೇಕು, ಒಂದು ಕ್ಷಣ ಯಾಮಾರಿದರೂ ಅನಾಹುತ ತಪ್ಪಿದ್ದಲ್ಲಾ. ಸಂಬAಧಿಸಿದ ಅಧಿಕಾರಿಗಳು ಕೂಡಲೇ ಸೇತುವೆ ದುಸ್ಥಿತಿಪಡಿಸುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
“ ಸೇತುವೆ ಕಾಮಗಾರಿ ಗುಣಮಟ್ಟ ಕಳೆದುಕೊಂಡ ಹಿನ್ನೆಲೆ ಬಹು ವರ್ಷ ಬಾಳಿಕೆ ಬಾರದೇ ಕೆಲವೇ ವರ್ಷಗಳಲ್ಲಿ ಹಾಳಾಗಿದೆ. ಅಧಿಕಾರಿ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿತನವೇ ಮೂಲ ಕಾರಣವಾಗಿದೆ. ಇವರ ನಿರ್ಲಕ್ಷದಿಂದ ಜನರ ಜೀವನಕ್ಕೆ ಕುತ್ತು ತಂದಿದೆ. ಆದಷ್ಟು ಬೇಗ ದುರಸ್ಥಿಸಬೇಕು.
– ಸಿದ್ದೇಶ್. ಸ್ಥಳೀಯ.
“ಸೇತವೆ ನಿರ್ಮಾಣಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ. ಈ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿ ಯಾವುದಾದರೂ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು, ಅಲ್ಲಿಯವರೆಗೂ ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡಬೇಕು”
–
– ಲೋಕ್ಯನಾಯ್ಕ. ಮುಖ್ಯಾಧಿಕಾರಿ ಪ.ಪಂ