ನೀವು ಟಾಯ್ಲೆಟ್‍ನಲ್ಲಿ ಮೊಬೈಲ್ ಬಳಕೆ ಮಾಡ್ತೀರಾ ಹಾಗಾದ್ರೆ ಈ ಅಪಾಯ ಗ್ಯಾರಂಟಿ!

Suddivijaya
Suddivijaya January 27, 2023
Updated 2023/01/27 at 1:17 PM

ಸುದ್ದಿವಿಜಯ, ಜಗಳೂರು: (ವಿಶೇಷ)ನೀವು ಟಾಯ್ಲೆಟ್ ರೂಂ ನಲ್ಲೂ ಮೊಬೈಲ್ ಬಳಕೆ ಮಾಡ್ತೀರಾ ಹಾಗದೇ ಇಂದೆ ಆ ಅಭ್ಯಾಸವನ್ನು ನಿಲ್ಲಿಸಿಬಿಡಿ. ಏಕೆ ಅಂದ್ರೆ ಅದರಿಂದ ಏನೂನು ಅಪಾಯವಾಗುತ್ತೆ ಅಂತ ಈ ಸುದ್ದಿ ಸ್ಪೆಷಲ್ ಓದಿ.

ಫೆÇೀನ್ ನಮಗೆ ಬೆಳಗಿನಿಂದ ರಾತ್ರಿಯವರೆಗೆ ಬೇಕಾಗಿರುವ ಅತ್ಯಗತ್ಯ ವಸ್ತುವಾಗಿದೆ. ಊಟ ಮಾಡುವಾಗ ಸಹ, ಅನೇಕ ಜನರು ತಮ್ಮ ಫೆÇೀನ್ ಅನ್ನು ಪಕ್ಕಕ್ಕೆ ಇಟ್ಟುಕೊಂಡು ಆಹಾರ ಸೇವನೆ ಮಾಡುತ್ತಾರೆ. ಆದರೆ ಇತ್ತೀಚಿನ ಸಮೀಕ್ಷೆಯೊಂದು ಹಲವಾರು ವಿಚಾರಗಳನ್ನು ಬಹಿರಂಗಪಡಿಸಿದೆ. ಸಂಶೋಧನೆಯ ಪ್ರಕಾರ 90 ಪ್ರತಿಶತ ಜನರು ಫೆÇೀನ್ ಅನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದು ಸಾಬೀತಾಗಿದೆ. ಅದು ಹೆಚ್ಚು ಅಪಾಯಕಾರಿ.

ಶೌಚಾಲಯದ ಸ್ಥಳವನ್ನು ಅವಲಂಬಿಸಿ ಮಾಲಿನ್ಯದ ಮಟ್ಟಗಳು ಬದಲಾಗುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ಸಣ್ಣ ಆಫೀಸ್ ಹೆಚ್ಚು ಸಮಸ್ಯೆ ಮಾಡದೇ ಇರಬಹುದು ಆದರೆ, ಆದರೆ ಆಸ್ಪತ್ರೆ ಸೇರಿದಂತೆ ಹೆಚ್ಚು ಜನರು ಇರುವ ಸ್ಥಳಗಳಲ್ಲಿ ಅಪಾಯ ಹೆಚ್ಚಿರುತ್ತದೆ.

ನಿಮಗೆ ನೆನಪಿರಲಿ, ಮನೆಯ ಟಾಯ್ಲೆಟ್ ಅಥವಾ ಬಾತ್‍ರೂಮ್ ಅನ್ನು ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡಿದ್ದರೂ ಕೂಡ, ಅಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದೇ ಇರುತ್ತದೆ. ತಮ್ಮ ವಾಸಸ್ಥಾನವಾದ ನಲ್ಲಿ, ಹ್ಯಾಂಡ್ ಡ್ರೈಯರ್ , ಬಾಗಿಲ ಚಿಲಕ ಸೇರಿದಂತೆ ಎಲ್ಲದರ ಮೇಲೂ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಸೇರಿಕೊಂಡಿರುತ್ತವೆ.

ಈ ಸಂದರ್ಭದಲ್ಲಿ, ನೀವು ಟಾಯ್ಲೆಟ್‍ನಲ್ಲಿ ಫೆÇೀನ್ ಬಳಸಿದಾಗ ಆ ಫೆÇೀನ್ ಕೂಡ ಮಲ ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುತ್ತದೆ. ನೀವು ಅಲ್ಲಿಂದ ಸ್ವಚ್ಛ ಮಾಡಿಕೊಂಡು ಹೊರ ಬರುವಾಗ ಫ್ಲಶ್ ಹ್ಯಾಂಡಲ್ ಅಥವಾ ಡೋರ್ ಲಾಕ್ ಹೀಗೆ ಎಲ್ಲವನ್ನೂ ಸ್ಪರ್ಶಿಸಿರುತ್ತೀರಿ. ನಂತರ ಫೆÇೀನ್ ಅನ್ನು ಸ್ಪರ್ಶಿಸಿದಾಗ ಬ್ಯಾಕ್ಟೀರಿಯಾ ಸುಲಭವಾಗಿ ಫೆÇೀನಿನ ಸಂಪರ್ಕಕ್ಕೆ ಬರುತ್ತದೆ.

ಟಾಯ್ಲೆಟ್ ಬಳಸಿದ ನಂತರ, ನಾವೆಲ್ಲಾ ಸೋಪ್ ಬಳಸಿ ಕೈಗಳನ್ನು ತೊಳೆಯುತ್ತೇವೆ. ಆದರೆ ನಾವು ಫೆÇೀನ್‍ಗಳನ್ನು ಸ್ವಚ್ಛಗೊಳಿಸುವುದಿಲ್ಲ. ಹಾಗಾಗಿ ಮೊಬೈಲ್ ನಲ್ಲಿ ಅಂಟಿ ಕೊಂಡಿರುವ ಸೂಕ್ಷ್ಮ ಜೀವಿಗಳು ಹಾಗೂ ಕೆಲವೊಂದು ಬ್ಯಾಕ್ಟೀರಿಯಾಗಳು, ಅನಾರೋಗ್ಯ ಸಮಸ್ಯೆ ಉಂಟು ಮಾಡಬಹುದು

ನೆನಪಿರಲಿ, ಈ ಸಮಸ್ಯೆಗಳು ಸಾರ್ವಜನಿಕ ಶೌಚಾಲಯ, ಕಚೇರಿಗಳಲ್ಲಿ ಅಥವಾ ಹೋಟೆಲ್‍ಗಳಲ್ಲಿ ಇದರ ಅಪಾಯವು ಹೆಚ್ಚಾಗಿರುತ್ತದೆ. ಯಾಕೆಂದರೆ ಇಂತಹ ಶೌಚಾಲಯವನ್ನು ಹಲವಾರು ಮಂದಿ ಬಳಸಿರುವರು. ಹೀಗಾಗಿ ಕಚೇರಿ, ರೆಸ್ಟೋರೆಂಟ್ ಅಥವಾ ಹೋಟೆಲ್‍ಗಳ ಶೌಚಾಲಯಕ್ಕೆ ಮೊಬೈಲ್ ತೆಗೆದುಕೊಂಡು ಹೋಗಬೇಡಿ.

ಮೂಲವ್ಯಾಧಿ ಸಮಸ್ಯೆ!
ಟಾಯ್ಲೆಟ್‍ನಲ್ಲಿ ಫೆÇೀನ್ ಬಳಸುವವರು ಎದುರಿಸುವ ಮತ್ತೊಂದು ಅಪಾಯಕಾರಿ ಕಾಯಿಲೆ ಎಂದರೆ ಮೂಲವ್ಯಾಧಿ ಸಮಸ್ಯೆ! ಮೊಬೈಲ್ ಫೆÇೀನ್‍ನನ್ನು ಟಾಯ್ಲೆಟ್ ರೂಂಗೆ ತೆಗೆದುಕೊಂಡು ಹೋಗುವ ಜನರು, ಅಲ್ಲಿ ಸರಾಸರಿ ಸಮಯಕ್ಕಿಂತಲೂ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಶೌಚಾಲಯದ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿ ಸಮಸ್ಯೆಗಳೂ ಉಂಟಾಗಬಹುದೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಅಪಾಯ ಕಟ್ಟಿಟ್ಟ ಬುತ್ತಿ!
ನೆನೆಪಿರಲಿ, ಶೌಚಾಲಯದಿಂದ ಬರುವ ರೋಗಗಳಿಗೆ ಹಿರಿಯರು ಮತ್ತು ರೋಗನಿರೋಧಕ ಶಕ್ತಿಕಡಿಮೆ ಇರುವವರು ಬಹುಬೇಗ ಇಂತಹ ಸೋಂಕಿಗೆ ಒಳಾಗುವ ಅಪಾಯವನ್ನು ಹೊಂದಿರುತ್ತಾರೆ.
ಒಂದು ವೇಳೆ, ನೀವೂ ಕೂಡ ಟಾಯ್ಲೆಟ್ ಗೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದರೆ, ಇಂದೇ ನಿಲ್ಲಿಸಿ. ಇನ್ನು ದಿನಕ್ಕೆ ಒಮ್ಮೆ ಆದರೂ 70 ರಷ್ಟು ಆಲ್ಕೊಹಾಲ್ ಆಧಾರಿತ ಸ್ಯಾನಿಟೈಸರ್‍ನಿಂದ ಮೊಬೈಲ್ ನ್ನು ಸ್ವಚ್ಛಗೊಳಿಸಿ.

ಟಾಯ್ಲೆಟ್ ರೂಮ್ ನಲ್ಲಿ ಕನಿಷ್ಠ ಹತ್ತು ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಕಳೆಯಬಾರದು ಎಂದು ತಜ್ಞರೇ ಶಿಫಾರಸು ಮಾಡುತ್ತಾರೆ. ನೆನಪಿಡಿ ಮೊಬೈಲ್ ಜೊತೆಗೆ ಶೌಚಾಲಯವು ಸ್ವಚ್ಛವಾಗಿರದಿದ್ದರೆ ಅತಿಸಾರ, ಭೇದಿ ಮುಂತಾದ ಕಾಯಿಲೆಗಳು ಹರಡುತ್ತವೆ. ಎಚ್ಚರವಿರಲಿ!

 

Share this Article
Leave a comment

Leave a Reply

Your email address will not be published. Required fields are marked *

error: Content is protected !!