ಸುದ್ದಿವಿಜಯ, ಜಗಳೂರು: ನ್ಯಾಯವಾದಿಗಳ ಸಂಕ್ಷಣಾ ಮಸೂದೆ 2021ರ ಕಾಯ್ದೆಯನ್ನು ಸರಕಾರ ಜಾರಿಗೊಳಿಸಬೇಕು ಎಂದು ತಾಲೂಕು ವಕೀಲರ ಸಂಘದ ಹಿರಿಯ, ಕಿರಿಯ ವಕೀಲರು ಪಟ್ಟಣದ ತಾಲೂಕು ಕಚೇರಿಯ ಮುಂದೆ ಪ್ರತಿಭಟಿಸಿ ತಹಶೀಲ್ದಾರ್ ಗ್ರೇಡ್-2 ಮಂಜಾನಂದ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಓಂಕಾರೇಶ್ವರಪ್ಪ ಮಾತನಾಡಿ,ವಕೀಲರ ಮೇಲೆ ಸಾರ್ವಜನಿಕ ವಲಯದಲ್ಲಿ ನಿರಂತರ ದಬ್ಬಾಳಿಕೆ, ಹಲ್ಲೆ, ಪ್ರಕರಣಗಳು ನಡೆಯುತ್ತಿದ್ದು, ಇದರಿಂದ ವಕೀಲರಿಗೆ ಸೂಕ್ತ ರಕ್ಷಣೆಯಿಲ್ಲದಂತಾಗಿದೆ.
ವೈದ್ಯರ ರಕ್ಷಣಾ ಕಾಯ್ದೆಯನ್ವಯ ವಕೀಲರಿಗೆ ರಕ್ಷಣಾ ಕಾಯ್ದೆಯನ್ನು ವಿಧಾನಸಭೆಯಲ್ಲಿ ಅನುಮೋದಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂರಕ್ಷಣಾ ಕಾಯ್ದೆ ಕರಡು ಕಾನೂನು ಇಲಾಖೆಯಲ್ಲಿದ್ದು ವಕೀಲರ ಮೇಲಿನ ದೌರ್ಜನ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ವಕೀಲರ ಸಂರಕ್ಷಣಾ ಮಸೂದೆ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಕೆ.ಎಂ.ಪರಮೇಶ್ವರಪ್ಪ, ಡಿ.ವಿ. ನಾಗಪ್ಪ, ಎಚ್.ಕರಿಬಸಪ್ಪ, ವೈ.ಹನುಮಂತಪ್ಪ, ಆರ್.ಓಬಳೇಶ್, ಉಮಾಪತಿ, ಎಸ್.ಐ.ಕುಂಬಾರ್, ಈ.ನಾಗಪ್ಪ, ನಾಗೇಶ್, ಅಂಜಿನಪ್ಪ, ಬಸವರಾಜ್,ವಿಕಾಸ್, ಅಶೋಕ, ತಿಪ್ಪೇಸ್ವಾಮಿ, ಡಿ.ಶ್ರೀನಿವಾಸ್, ರಂಗನಾಥ್ ಸೇರಿದಂತೆ ಅನೇಕ ವಕೀಲರು ಭಾಗವಹಿಸಿದ್ದರು.