ಜಗಳೂರು: ಮುಸಲ್ಮಾನರು ಮರ್ಯಾದೆಯಿಂದ ಬದುಕಬೇಕಾದರೆ ಜೆ.ಎಂ.ಇಮಾಂರ ಚಿಂತನೆಗಳನ್ನು ಅನುಸರಿಸಿ!

Suddivijaya
Suddivijaya February 15, 2023
Updated 2023/02/15 at 12:03 PM

ಸುದ್ದಿವಿಜಯ, ಜಗಳೂರು: ಇದು ಬಹುತ್ವದ ದೇಶ. ಮುಸಲ್ಮಾನರು ಈ ದೇಶದಲ್ಲಿ ಮರ್ಯಾದೆಯಿಂದ ಬದುಕಬೇಕಾದರೆ ಜಗಳೂರು ಜೆ. ಇಮಾಂ ಸಾಹೇಬರ ಚಿಂತನೆಗಳನ್ನು ಅನುಸರಿಸಿದರೆ ಮಾತ್ರ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಬದುಕಲು ಸಾಧ್ಯ ಎಂದು ಚಿಂತಕ, ಪ್ರಗತಿಪರ ಲೇಖಕ ರಂಜಾನ್ ದರ್ಗಾ ಸೂಚ್ಯವಾಗಿ ನುಡಿದರು.

ಪಟ್ಟಣದ ಜೆಎಂ ಇಮಾಂ ಶಾಲಾ ಆವರಣದಲ್ಲಿ ಬುಧವಾರ ಜಗಳೂರು ಮಹಮದ್ ಇಮಾಂ ರವರ 125ನೇ ಜನ್ಮದಿನಾಚರಣೆ ಅಂಗವಾಗಿ ಜೆ.ಎಂ.ಇಮಾಂ ಟ್ರಸ್ಟ್ ನೀಡಿದ ‘ಜೆ.ಎಂ.ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ’ ಸ್ವೀಕರಿಸಿದ ನಂತರ ಮಾತನಾಡಿದರು.

ನಾನು ಅವರ ಹಾದಿಯಲ್ಲಿ ಸಾಗಿದ್ದರಿಂದಲೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಅವರೇ ನನ್ನ ಜೀವನಕ್ಕೆ ಆದರ್ಶ. ಈ ದೇಶ ಉಳಿಯಬೇಕಾದರೆ ಮುಸಲ್ಮಾನರು, ಹಿಂದುಳು ಇಮಾಂ ಸಂಸ್ಕøತಿಯನ್ನು ಪಾಲಿಸಬೇಕು. ಇಮಾಂ ಸಂಸ್ಕøತಿಯಲ್ಲಿ ಭಾರತದ ಸಂಸ್ಕøತಿ ಇದೆ.

ಅವರು ಜಾತ್ಯಾತೀತ ತತ್ವದ ಮತ್ತು ಮಾನವ ಕುಲದ ಸಂಕೇತ. ಈ ಮಾತನನ್ನು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರೇ ಹೇಳಿದ್ದಾರೆ ಎಂದು ಸ್ಮರಿಸಿದರು.

ನನ್ನ ಸಾಕ್ಷಿ ಪ್ರಜ್ಞೆಯಾಗಿ ಇಮಾಂ ಸಾಹೇಬರ ಆದರ್ಶಗಳನ್ನು ಮಾರ್ಗದರ್ಶನವನ್ನಾಗಿ ಇಟ್ಟುಕೊಂಡಿದ್ದೇನೆ. ಈ ದೇಶದ ಸಂಸ್ಕøತಿ ಯಾವುದು ಎಂದು ಕೇಳಿದರೆ ನಾನು ಹೇಳುವುದು ಜಗಳೂರು ಇಮಾಂ ಸಂಸ್ಕøತಿ ಎಂದು.

ಈ ದೇಶ ಏನಾದರೂ ಉಳಿಯಬೇಕಾದರೆ ಇಮಾಂ ಸಾಹೇಬರ ಸಂಸ್ಕøತಿಯಾಗಿದೆ. ಅವರು ಬರೆದ ‘ಮೈಸೂರು ಆಗ ಮತ್ತು ಈಗ’ ಪುಸ್ತಕ ಈ ದೇಶದ ಶಾಸಕರಿಗೆ, ಮಂತ್ರಿಗಳಿಗೆ ಪಠ್ಯಪುಸ್ತಕವಾದ ಮಾತ್ರ ಆಡಳಿತ ವ್ಯವಸ್ಥೆಯಲ್ಲಿ ಅದ್ವಿತೀಯ ಬದಲಾವಣೆ ಆಗಲು ಸಾಧ್ಯ.

ದಿ ಗೈಡ್ ಆಫ್‍ದ ನೇಷನ್ ಎಂಬ ಬಿರುದನ್ನು ಇಮಾಂ ಸಾಹೇಬರಿಗೆ ನೀಡಲಾಯಿತು. ಕಾರಣ ಈ ರಾಜ್ಯಕ್ಕೆ ಅವರು ಕೊಟ್ಟ ಪಂಚವಾರ್ಷಿಕ ಯೋಜನೆ ರೂಪ ರೇಷೆಗಳನ್ನು ಎಣೆದವರು ಇಮಾಂ ಸಾಹೇಬರಾಗಿದ್ದಾರೆ.

ಅವರ ದೂರ ದೃಷ್ಟಿಯ ಬಗ್ಗೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಪ್ರಶಂಸಿಸಿದ್ದಾರೆ. ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರು ಇಮಾಂ ಸಾಹೇಬರ ಜಗಳೂರು ಮನೆಯಲ್ಲಿ ತಂಗಿ ಹೋಗಿದ್ದರು ಎಂದರೆ ಅವರ ವ್ಯಕ್ತಿತ್ವ ಹೇಗಿತ್ತು ಎಂದು ಅರ್ಥಮಾಡಿಕೊಳ್ಳಿ ಎಂದರು.

  ಖ್ಯಾತ ಬರಹಗಾರ ರಂಜಾನ್ ದರ್ಗಾ ಅವರಿಗೆ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  ಖ್ಯಾತ ಬರಹಗಾರ ರಂಜಾನ್ ದರ್ಗಾ ಅವರಿಗೆ ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಡೋಜಾ ಡಾ.ಗೋ.ರು.ಚನ್ನಬಸಪ್ಪ ಮಾತನಾಡಿ, ಇಮಾಂ ಅವರು ಸ್ವಾತಂತ್ರ್ಯ ಪೂರ್ವ, ನಂತರದ ಈದೇಶದ ಸ್ಥಿತಿಗತಿಗಳನ್ನು ಕಂಡವರು. ಸಂವಿಧಾನಕ್ಕೆ ಬದ್ಧರಾಗಿ ನಡೆ ಶುದ್ಧಿ, ಭಾವ ಶುದ್ಧಿ, ಅಂತಕರಣ ಶುದ್ಧಿ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ವ್ಯಕ್ತಿ ಅವರು. ಇಮಾಂ ಸ್ಮಾರಕ ರಾಜ್ಯ ಪ್ರಶಸ್ತಿಗೆ ರಂಜಾನ್ ದರ್ಗಾ ಅವರಿಗೆ ಸಲ್ಲಿಕೆಯಾಗಿರುವುದು ಪ್ರಶಸ್ತಿಗೆ ಹೆಚ್ಚಿನ ಗೌರವ ಬಂದಿದೆ.

12ನೇ ಶತಮಾನದ ಬಸವಣ್ಣನವರ, ಶರಣರ ಸಾಹಿತ್ಯ ಸಂಸ್ಕøತಿಯನ್ನು ಪಾಲಿಸಿಕೊಂಡು ಬಂದವರು. ಅವರು ಯಾವುದೇ ಧರ್ಮವನ್ನು ವಿರೋಧಿಸುವುದಿಲ್ಲ. ಆದರೆ ಧರ್ಮದ ಅಸಹಿಷ್ಣುತೆಯನ್ನು ಟೀಕಿಸುವುದನ್ನು ಬಿಟ್ಟಿಲ್ಲ.

ಎಲ್ಲ ಕಾಲಕ್ಕೂ ಸಲ್ಲುವ ಬಸವ ಸಿದ್ಧಾಂತವನ್ನು ಹಾಸಿ ಹೊದ್ದುಕೊಂಡು ಬಂದವರು. ಬಸವಪ್ರಶಸ್ತಿ ಸ್ವೀಕರಿಸಿದ್ದರೂ ಸಹ ಅವರಿಗೆ ಇಂದು ಕೊಟ್ಟಿರುವ ಇಮಾಂ ಸ್ಮಾರಕ ಪ್ರಶಸ್ತಿ ಅವರ ಘನತೆಯನ್ನು ಹೆಚ್ಚಿಸಿದೆ. ರಹಮತ್ ತರೀಕೆರೆ ಮತ್ತು ರಂಜಾನ್ ದರ್ಗಾ ಅವರು ಅಂಶೋಧನೆ, ಜಾತ್ಯತೀತವಾಗಿ, ಸಾಹಿತಿಕವಾಗಿ ಅಪಾರ ಸಾಧನೆ ಮಾಡಿದರು. ಈ ರಾಜ್ಯದ ಪ್ರಗತಿಪರ ಚಿಂತರಕ ಕಣ್ಮಣಿಗಳು ಎಂದು ಬಣ್ಣಿಸಿದರು.

ಖ್ಯಾತ ಸಾಹಿತಿ ಡಾ.ರಹಮತ್ ತರೀಕೆರೆ ಅಭಿನಂದನಾ ನುಡಿಗಳನ್ನಾಡಿ, ಪ್ರಸ್ತುತ ರಾಜಕಾರಣಿಗಳಿಗೆ ರಾಜಕಾರಣ ಮಾಡುವುದು ಗೊತ್ತಿದೆ. ಆದರೆ ಸಾಂಸ್ಕøತಿಕ ವ್ಯಕ್ತಿತ್ವ ಕಡಿಮೆಯಾಗಿದೆ. ಆದರೆ ಇಮಾಂ ಅವರು ಕನ್ನಡದ ಮನಸ್ಸು. ನೂರ್ ಜಹಾನ್ ಕಾದಂಬರಿ ಬರೆದಿದ್ದಾರೆ. ಅದಕ್ಕೆ ಡಿ.ವಿ. ಗುಂಡಪ್ಪ ಅವರು ಮುನ್ನುಡಿ ಬರೆದಿರುವುದು ವಿಶೇಷ. ಆದರೆ ಈಗಿನ ರಾಜಕಾರಣಿಗಳಿಗೆ ಸಾಂಸ್ಕøತಿಕ ಪ್ರಜ್ಞೆ ಕಡಿಮೆ.

ನಾಡನ್ನು ಕಟ್ಟುವ ಕೆಲಸದಲ್ಲಿ ಅನೇಕ ರಾಣಿಯವರು, ಮಹಿಳೆಯರು ಅದ್ವಿತೀಯವಾಗಿ ಕೆಲಸ ಮಾಡಿದ್ದಾರೆ. ರಾಜಕೀಯದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಸಿಗದೇ ಹೋದರೆ ಈ ಸಮಾಜ ಬಹಳ ದೂರ ಸಾಗಲು ಸಾಧ್ಯವಿಲ್ಲ ಎಂದರು.

ಓದು ಬರಹ ಕಾಲವಿಲ್ಲದ ರಾಜಕಾರಣಿಗಳ ಕಾಲದಲ್ಲಿ ಅವರ ಸಮಾನತೆಯ ಸಮಾಜದ ದೃಷ್ಟಿ ನಿಜಕ್ಕೂ ಸೆಕ್ಯೂಲರ್‍ವಾದಿಗೆ ಇಮಾಂ ಸಾಹೇಬರು ಸಾಕ್ಷಿ. ನೆಹರೂ ಕಾಲದಲ್ಲಿ ಸಂಸದರಾಗಿದ್ದ ಇಮಾಂ ಅವರು ಅರ್ಥಶಾಸ್ತ್ರದ ಅಧ್ಯಯನ ನಿಜಕ್ಕೂ ಶ್ಲಾಘನೀಯ.

ಸಾರ್ವಜನಿಕರ ಹಣ ದುರುಪಯೋಗವಾಗಬಾರು ಎಂದು ಆಲೋಚಿಸುತ್ತಿದ್ದರು. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಅವರ ಪಾತ್ರ ಅಗಣಿತ. ಮೈಸೂರು ಸಂಸ್ಥಾನದ ಬಗ್ಗೆ ಅವರಿಗೆ ಅಪಾರ ಪ್ರೀತಿ, ಗೌರವ ಹೊಂದಿದ್ದರು. ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಕುವೆಂಪು, ನಿಜಲಿಂಗಪ್ಪ ಜೊತೆ ಇಮಾಂ ಸಾಹೇಬರು ಇದ್ದರು ಎಂಬುದು ಅಗ್ಗಳಿಕೆ.

ಇಮಾಂ ಸಾಹೇಬರ ಕುರಿತ ಅನೇಕ ಹಿರಿಯರನ್ನು ಮಾತನಾಡಿಸಿ ಇಮಾಂ ಸಾಹೇಬರ ಅಭಿನಂದನಾ ಗ್ರಂಥಗಳನ್ನು ಮಾಡಬೇಕಿತ್ತು. ‘ಇಮಾಂ ಸಾಹೇಬರ ಕಂಡಂತೆ’ ಗ್ರಂಥ ಈಗಲಾದರೂ ಟ್ರಸ್ಟ್‍ನವರು ಮಾಡಬೇಕು. ಅವರ ಹೆಸರಿನಲ್ಲಿ ಕೊಡಮಾಡಿದ ರಾಜ್ಯ ಪ್ರಶಸ್ತಿ ರಂಜಾನ್ ದರ್ಗಾ ಅವರಿಗೆ ಸಲ್ಲಿರುವುದು ಜಾತ್ಯಾತೀತ ಮನೋ ಭಾವದ ವ್ಯಕ್ತಿಗೆ ಸಲ್ಲಿರುವುದು ಸಂತೋಷವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜೆ.ಎಂ.ಇಮಾಂ ಟ್ರಸ್ಟ್‍ನ ಹಾಜಿ. ಜೆ.ಕೆ.ಹುಸೇನ್ ಮಿಯ್ಯಾ ಸಾಬ್, ಶಿವಮೊಗ್ಗದ ಜಿಬಿಟಿ ಪಬ್ಲಿಕೇಷನ್‍ನ ಮೋಹನ್, ಜಲೀಲ್ ಸಾಬ್, ದಾದಾಖಲದರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಜಿ ಪರಮೇಶ್ವರಪ್ಪ, ಆಡಳಿತಾಧಿಕಾರಿ ಜೆ.ಕೆ.ಮಹಮದ್ ಹುಸೇನ್, ಸಲಹಾ ಸಮಿತಿ ಸದಸ್ಯ ಎನ್.ಟಿ.ಎರ್ರಿಸ್ವಾಮಿ, ಡಿ.ಸಿ.ಮಲ್ಲಿಕಾರ್ಜುನ್, ಡಾ.ದಾದಾಪೀರ್ ನವಿಲೇಹಾಳ್, ಡಾ.ಬಿ.ಎ.ರಾಜಪ್ಪ, ಜೆ.ಯಾದವರೆಡ್ಡಿ, ಬಿ.ಟಿ.ನಾಗರಾಜ್ ಸೇರಿದಂತೆ ಅನೇಕರು ಇದ್ದರು. ಈ ವೇಳೆ ಇಮಾಂ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!