ಸುದ್ದಿವಿಜಯ, ಜಗಳೂರು: ಕ್ಷೇತ್ರದ ಅಭಿವೃದ್ಧಿಗೆ 2300 ಕೋಟಿಗೂ ಅಧಿಕ ಹಣ ಖರ್ಚು ಮಾಡಿ ನೀರಾವರಿ ಯೋಜನೆಗಳು ಸೇರಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ನಮ್ಮ ಪಕ್ಷದಲ್ಲಿ ಸುಳ್ಳು ಹೇಳುವವರಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ದಾವಣಗೆರೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ತಾಲೂಕಿನ ಸಂತೆ ಮುದ್ದಾಪುರ ಗ್ರಾಮದಲ್ಲಿ 482 ಕೋಟಿ ಕಾಮಗಾರಿ ಶಂಕುಸ್ಥಾಪನೆ ಮತ್ತು ಜಗಳೂರು ತಾಲೂಕಿನ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಜನ ಸಮುದಾಯಕ್ಕೆ ನೆರವಾಗಲಿದೆ. ಹೊನ್ನಾಳಿ, ಚನ್ನಗಿರಿ, ಹರಿಹರ, ಮಾಯಕೊಂಡ ನೀರಾವರಿ ಪ್ರದೇಶವಾಗಿದೆ.
ಆದರೆ ಜಗಳೂರು ಅತ್ಯಂತ ಹಿಂದುಳಿದ ಪ್ರದೇಶವಾಗಿತ್ತು. ಅಪ್ಪರ್ ಭದ್ರಾ ಮತ್ತು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕ್ಷೇತ್ರವನ್ನು ಹಚ್ಚ ಹಸಿರುನಾಡನ್ನಾಗಿ ಮಾಡಲಿವೆ.
ನೀರಿನ ಮಗ, ಭೂಮಿಯ ಮಗ ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ ನಿಮ್ಮ ಆಶೀರ್ವಾದ ಇರಲಿ. ಸಿಎಂ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.
25 ವರ್ಷಗಳ ನಂತರ ರಾಮಚಂದ್ರ ಅವರಂತಹ ಶಾಸಕರು ಜಗಳೂರಿಗೆ ಸಿಕ್ಕಿರುವುದು ಪುಣ್ಯ. ಕೆಲವರು ಬಾಯಿ ಚಪಲಕ್ಕೆ ಏನೇನೋ ಹೇಳ್ತಿದ್ದಾರೆ.
ಆಡು ಮುಟ್ಡದ ಸೊಪ್ಪಿಲ್ಲ ಎಂಬಂತೆ ರಾಮಚಂದ್ರ ಮಾಡದ ಕೆಲಸ ಇಲ್ಲ. ಮುಂದೆ ಬರುವ ದಿನಗಳಲ್ಲಿ ಸಾಕಣ್ಟು ಕೆಲಸ ಮಾಡಲಿದ್ದಾರೆ.
ನನ್ನ ಸ್ವಗ್ರಾಮ ಉಚ್ಚಂಗಿ ಪುರದಲ್ಲಿ 4.5 ಕೋಟಿ ವೆಚ್ಚದಲ್ಲಿ ಅತ್ಯಂತ ದೊಡ್ಡ ಶಾಲೆ ಕಟ್ಟಿಸಿದ್ದೇವೆ. ಅದು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಕಳೆದ 40 ವರ್ಷಗಳಿಂದ ಅಭಿವೃದ್ಧಿಯ ಜಪ ಮಾಡುತ್ತಾ ಕಾಲ ಕಳೆದರು.ಆದರೆ ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರಬೇಕಾಯಿತು.
ನನ್ನ ಕ್ಷೇತ್ರಕ್ಕೆ 5 ವರ್ಷಗಳ ಅವಧಿಯಲ್ಲಿ ಬಿಜೆಪಿ ಸರಕಾರ ಕೊಟ್ಟ ಮಾತಿಗೆ ತಪ್ಪಿಲ್ಲ.
ತುಂಗಾಭದ್ರಾ ನದಿಯಿಂದ ಮನೆ ಮನೆಗೆ ನೀರು, ರಂದಿದ್ದೇವೆ. ಬೆನ್ನು ತೋರಿಸು ನಾಯಕರಲ್ಲ. ಕ್ಷೇತ್ರಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಂಸದ ಸಿದ್ದೇಶ್ವರ ಕೊಡುಗೆ ಅಪಾರವಾಗಿದೆ.
ರಾಮಚಂದ್ರ ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಅನೇಕರು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಹೃದಯ ಸ್ತಂಭನವಾಗಿಲ್ಲ. ಕಿಡ್ನಿ ವೈಫಲ್ಯವಾಗಿಲ್ಲ. ಇನ್ನು ಎರಡು ಚುನಾವಣೆ ಮಾಡುವಷ್ಟು ಆರೋಗ್ಯವಾಗಿದ್ದೇನೆ.
ನಾವು ಸುಳ್ಳು ಹೇಳುವವರಲ್ಲ. ಕೆಲಸ ಮಾಡಿ ಮತ ಭಿಕ್ಷೆ ಕೇಳುತ್ತಿದ್ದೇನೆ. ಮತ್ತೆ ಮನೆ ಬಾಗಿಲಿಗೆ ಬಂದು ಮತ ಕೇಳುತ್ತೇನೆ ಎಂದರು.
ಈ ವೇಳೆ ಮಂಡಲ್ ಬಿಜೆಪಿ ಅಧ್ಯಕ್ಷ ಎಚ್.ಸಿ.ಮಹೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಭದ್ರಾ ಮೇಲ್ದಂಡೆ ಯೋಜನೆ ಹೋರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ, ತುಪ್ಪದಹಳ್ಳಿ ಸಿದ್ದಣ್ಣ,
ಎಇಇ ಸಾದಿಕ್ ಉಲ್ಲಾ, ಪಪಂ ಉಪಾಧ್ಯಕ್ಷ ನಿರ್ಮಲಾ ಕುಮಾರಿ ಹನುಮಂತಪ್ಪ, ಜಿಪಂ ಮಾಜಿ ಅಧ್ಯಕ್ಷ ಎಚ್. ನಾಗರಾಜ್, ಸಿದ್ದೇಶ್, ಮಂಜುನಾಥ, ಸಿದ್ದಣ್ಣ, ಮಂಜುನಾಥ್, ಜಿಪಂ ಎಇಇ ತಿಪ್ಪೇಶಪ್ಪ, ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.