ಸುದ್ದಿವಿಜಯ,ಹರಪನಹಳ್ಳಿ /ಜಗಳೂರು: ತಾಲೂಕಿನ ಮಾದಿಹಳ್ಳಿ,ಅಣಜಿಗೆರೆ,ಹೊಸಕೋಟೆ,ಕಮ್ಮತ್ತಹಳ್ಳಿ,ಗ್ರಾಮಗಳಲ್ಲಿ ರಾಮನವಮಿ ದಿನದಂದು ಅದ್ದೂರಿಯಾಗಿ ಸಂಜೆ 5 ಗಂಟೆಗೆ ಆಂಜನೇಯ ರಥೋತ್ಸವ ಜರುಗಿದವು.
ರಥೋತ್ಸವಕ್ಕೂ ಮುನ್ನ ಹೊಂಬಾಳೆ, ಪಟ, ಹೂವಿನಹಾರ ಹರಾಜು ಪ್ರಕ್ರಿಯೆ ನಡೆದವು. ಭಕ್ತಸಮೂಹ ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ,ಉತ್ತತ್ತಿ, ಸಮರ್ಪಿಸಿ ಭಕ್ತಿ ಪರ್ವಮೆರೆದರು.ರಥೋತ್ಸವ ಮೆರವಣಿಗೆಯಲ್ಲಿ ನಂದಿಕೋಲು ಕುಣಿತ,ಡೊಳ್ಳು,ಸಮಾಳ,ಕಹಳೆ,ವಾದ್ಯ ವೃಂದಗಳ ನಾದ ಮೊಳಗಿದವು.
ರಥೋತ್ಸವದ ಹಿನ್ನೆಲೆ ಗ್ರಾಮದ ಪ್ರಮುಖ ಬೀದಿ ಹಾಗೂ ದೇವಸ್ಥಾನದಲ್ಲಿ ವಿದ್ಯುತ್ ದೀಪ ಅಳವಡಿಕೆ, ಬಾಳೆಕಂಬ,ಮಾವಿನ ತಳಿರು ತೋರಣಗಳು ಕಂಗೊಳಿಸುತ್ತಿದ್ದವು.ರಥೋತ್ಸವಕ್ಕೆ ಗ್ರಾಮಗಳಾದ ಗಡಿಗುಡಾಳ್,ಬೂದಿಹಾಳ್,ಸೇರಿದಂತೆ ನೆರೆಹೊರೆಯ ಗ್ರಾಮಗಳಿಂದ ಭಕ್ತರು ಭಾಗವಹಿಸಿದ್ದರು.
ಕಮ್ಮತ್ತಹಳ್ಳಿ ಗ್ರಾಮದಲ್ಲಿ ಶ್ರೀನಿವಾಸ ನಾಯಕ ಅವರಿಗೆ ₹1,00001,ಮಾದಿಹಳ್ಳಿ ಗ್ರಾಮದಲ್ಲಿ ₹1,20001ಗಳಿಗೆ ಪಟ ಹರಾಜು ನಡೆದವು.
ಆಂಜನೇಯ ರಥೋತ್ಸವ ವೇಳೆ ನೆಚ್ಚಿನ ನಾಯಕ ನಟ ಪುನಿತ್ ರಾಜ್ ಕುಮಾರ್ ಭಾವಚಿತ್ರಗಳು ಕೈಯಲ್ಲಿ ರಾರಾಜಿಸುತ್ತಿದ್ದವು.
ರಥೋತ್ಸವ ಇಂದು:ಜಂಗಂತುಂಬಿಗೆರೆ ಗ್ರಾಮದಲ್ಲಿ ಶ್ರೀ ಭೋಗೇಶ್ವರ ರಥೋತ್ಸವ ಪ್ರಥಮಬಾರಿಗೆ ನಡೆಯಲಿದೆ.