ಸುದ್ದಿ ವಿಜಯ, ಜಗಳೂರು:ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಹತ್ತಿರ ಜಾಗೃತಿ ಮತದಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಭಾರತೀಯ ಚುನಾವಣೆ ಆಯೋಗ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತಿ ದಾವಣಗೆರೆ ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯ ವತಿಯಿಂದ ನೆರವೇರಿಸಲಾಯಿತು.
ಇದೇ ವೇಳೆ ಮಾತನಾಡಿದ ಚುನಾವಣಾಧಿಕಾರಿ ಆರ್.ಓ.ರವಿ ಅವರು 18 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರು ನಿಮ್ಮ ಅಮೂಲ್ಯವಾದ ಮತವನ್ನು ಹಾಕಿ.
ಯಾವುದೇ ರಾಜಕೀಯ ಪಕ್ಷದವರು ಕೊಡುವ ಆಸೆ ಆಮಿಷಗಳಿಗೆ ಬಲಿಯಾಗಬೇಡಿ, ಬೇಡಿಕೆಗಳನ್ನು ಅಥವಾ ಹಣವನ್ನು ಕೊಡುವುದಕ್ಕೆ ಬಂದರೆ ನಿರಾಕರಿಸಿ. ನಿಷ್ಪಕ್ಷಪಾತವಾಗಿ ತಮ್ಮ ಹಕ್ಕನ್ನು ಚಲಾಯಿಸಿ. ಉಡುಗೊರೆಗೆ ಬಲಿಯಾಗದಂತೆ ಮತಹಾಕಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ತಹಶೀಲ್ದಾರ್, ಪಪಂ ಮುಖ್ಯ ಅಧಿಕಾರಿ ಸೇರಿದಂತೆ ತರಕಾರಿ ಮಾರುಕಟ್ಟೆ ಮಹಿಳೆಯರು ಪುರುಷರು ಪಟ್ಟಣದ ಸಾರ್ವಜನಿಕರು ಮತದಾರರು ಭಾಗವಹಿಸಿದ್ದರು.