ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಆಸ್ತಿ ವಿವರವನ್ನು ನಾಮಪತ್ರ ಸಲ್ಲಿಸುವಾಗ ಘೋಷಿಸಿಕೊಂಡಿದ್ದಾರೆ.
ಅವರ ಕೈಯಲ್ಲಿ 4.90 ಲಕ್ಷ ರೂ ಹಣವಿದೆ. ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದಲ್ಲಿ 52,102 ರೂ, ಒಂದು ದ್ವಿಚಕ್ರವಾಹನವಿದೆ. 100 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ, ಒಟ್ಟು 10,72,102 ಮೌಲ್ಯದಾಗಿದೆ.
ಚಿಕ್ಕಮ್ಮಹಟ್ಟಿ ಗ್ರಾಮದಲ್ಲಿ ಬಳಿ ಇರುವ ರಂಗಾಪುರಗ್ರಾಮದಲ್ಲಿ 17 ಎಕರೆ ಪಿತ್ರಾರ್ಜಿತ ಜಮೀನು ಹೊಂದಿದ್ದಾರೆ. ಜಗಳೂರು ಪಟ್ಟಣದಲ್ಲಿ ಎರಡು ಖಾಲಿ ನಿವೇಶನಗಳಿವೆ.
ದೇವೇಂದ್ರಪ್ಪ ಅವರಿಗಿಂತ ಪತ್ನಿ ಶ್ರೀಮಂತರು!
ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರ ಪತ್ನಿ ದೇವೇಂದ್ರಪ್ಪ ಅವರಿಗಿಂತ ಹೆಚ್ಚು ಹಣ, ಬೆಳ್ಳಿ, ಬಂಗಾರ ಹೊಂದಿದ್ದಾರೆ. ಜಗಳೂರಿನ ಎಸ್ಬಿಐ ಬ್ಯಾಂಕ್ನಲ್ಲಿ 30, 785 ರೂ ಉಳಿತಾಯ ಖಾತೆಯಲ್ಲಿ ಹಣವಿದೆ.
ಆಕ್ಸಿಸ್ ಬ್ಯಾಂಕ್ನಲ್ಲಿ 16,51,794 ಡೆಪಾಸಿಟ್ ಹೊಂದಿದ್ದಾರೆ. 30 ಲಕ್ಷ ರೂ ಮೌಲ್ಯದ 600 ಗ್ರಾಂ ಬಂಗಾರದ ಆಭರಣಗಳು, ಒಂದು ಲಕ್ಷ ರೂ ಮೌಲ್ಯದ 1 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ಹೊಂದಿದ್ದು ಅವರ ಒಟ್ಟು 50,82,579 ರೂ ಮೌಲ್ಯದ್ದಾಗಿದೆ ಎಂದು ಅಫಿಡವಿಟ್ನಲ್ಲಿ ನಮೂದಿಸಿದ್ದಾರೆ.