ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರ ಗೆಲುವಿಗೆ ಅಭಿಮಾನಿಗಳು ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ರಾಜೇಶ್ ಅವರ 60ಕ್ಕೂ ಹೆಚ್ಚು ಅಭಿಮಾನಿಗಳು ತಿಮ್ಮಪ್ಪನಿಗೆ ಕಾಣಿಕೆ ಅರ್ಪಿಸಿ ರಾಜೇಶ್ ಗೆಲ್ಲಲಿ ಎಂದು ಉರುಳು ಸೇವೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅವರನ್ನು ನಡು ನೀರಿನಲ್ಲಿ ಕೈ ಬಿಟ್ಟಿದೆ.
ತಿಮ್ಮಪ್ಪ ನಂಬಿದವರನ್ನು ಕೈ ಬಿಡಲ್ಲ ಎಂದು ಪ್ರಾರ್ಥಿಸಿ ರಾಜೇಶ್ ಅಭಿಮಾನಿಗಳಾದ ಮಾರನಾಯಕ, ಕಾಮಗೇತನಹಳ್ಳಿ ಪ್ರಭು, ಪಾಲನಾಯಕನಕೋಟೆ ರಮೇಶ್, ವಕೀಲರಾದ ಕರಿಬಸಪ್ಪ, ಎನ್.ಎಲ್.ಮಾರುತಿ ಸೇರಿದಂತೆ ಅನೇಕರು ಮುಡಿಕೊಟ್ಟು, ರಾಜೇಶ್ ಫೋಟೋ ಹಿಡಿದು ತಿಪ್ಪಪ್ಪನಿಗೆ ಪೂಜೆ ನೆರವೇರಿಸಿದರು.