ಸುದ್ದಿವಿಜಯ,ಜಗಳೂರು: ಪಕ್ಷ ಕೈ ಬಿಟ್ಟರು ನನ್ನ ಕ್ಷೇತ್ರದ ಮತದಾರರು ಕೈ ಬಿಡಲ್ಲ ಎಂಬ ವಿಶ್ವಾಸದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಇದೇ ಮೇ 10 ರಂದು ನೆಡೆಯುವ ಚುನಾವಣೆಯಲ್ಲಿ ತೆಂಗಿನ ತೋಟದ ಗುರುತಿಗೆ ಮತ ನೀಡಿ ನನಗಾದ ಮೋಸಕ್ಕೆ ನ್ಯಾಯ ಕೊಡಿ ಎಂದು ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಮತದಾರರಿಗೆ ಮನವಿ ಮಾಡಿದರು.
ಜಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉಚ್ವಂಗಿದುರ್ಗ ಗ್ರಾಮದಲ್ಲಿ ಅರಸೀಕೆರೆ ಹೋಬಳಿ ವ್ಯಾಪ್ತಿಯ ಏಳು ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರನ್ನು ಉದ್ದೇಶಿಸಿ ಚುನಾವಣೆ ಪ್ರಚಾರದಲ್ಲಿ ಶನಿವಾರ ಮಾತನಾಡಿದರು.
ಕೊರೋನಾ ಖಾಯಿಲೆಗೆ ತುತ್ತಾದಾಗ ನನಗೆ ವಿದೇಶದಿಂದ ಲಸಿಕೆ ತರಿಸಿ ನನ್ನ ಜೀವ ಉಳಿಸಲು ಕಾರಣೀಭೂತರಾದ ತರಳುಬಾಳು ಶ್ರೀಗಳು ಹಾಗು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಇಂದು ನೆನೆಯ ಬೇಕಿದೆ. ಅಂದಿನ ಸಂಧರ್ಭಗಳಲ್ಲಿ ಕ್ಷೇತ್ರದಾಧ್ಯಂತ ಕಾರ್ಯಕರ್ತರು ಅಭಿಮಾನಿಗಳು ಬೇಗ ಗುಣಮುಖರಾಗಿ ಬರುವಂತೆ ಹಾರೈಸಿದ್ದಕ್ಕೆ ಇಂದು ಮತ್ತೊಮ್ಮೆ ಮರು ಜನ್ಮ ಪಡೆದು ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಆಶೀರ್ವಾದ ಇರೋವರಿಗೆ ನಾನು ಕ್ಷೇತ್ರದ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಗೆಲುವಿಗೆ ಸಹಕರಿಸಿದ್ದೆ. ರಾಜೇಶ್ ಎಂದರೆ ಕಾಂಗ್ರೆಸ್ ಎನ್ನುವ ವಾತವರಣ ಇತ್ತು. ಎಲ್ಲಾ ಪಕ್ಷದವರು ಹಾಗು ಕ್ಷೇತ್ರದ ಮತದಾರರ ಮನಸಲ್ಲಿ ಈ ಬಾರಿ 40 ಸಾವಿರಕ್ಕೂ ಅಧಿಕ ಮತಗಳಿಂದ ಗೆಲವು ಸಾದಿಸುತ್ತಾರೆ ಎಂಬ ಸಮೀಕ್ಷೆ ಮಾಹಿತಿ ಇದ್ದರೂ ಸಹ ವರಿಷ್ಠರು ಯಾವುದೋ ಒತ್ತಡಕ್ಕೆ ಮಣಿದು ಕ್ಷೇತ್ರದ ಕಾರ್ಯಕರ್ತರ ಬಾಯಿಗೆ ವಿಷ ಹಾಕುವ ಕೆಲಸ ಮಾಡಿದ್ದಾರೆ.
ಇದೇ ಸ್ವಾಭಿಮಾನಕ್ಕಾಗಿ ನಾನು ಹಿತ ಕಾಯಲು ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ದಿಸಿದ್ದೇನೆ. ಒಂದು ಅವಕಾಶ ಕೊಟ್ಟರೆ ನನ್ನ ಶಕ್ತಿ ರಾಜ್ಯ ನಾಯಕರಿಗೆ ತೋರಿಸುತ್ತೇನೆ ಎಂದು ತಿಳಿಸಿದರು.
ಶಾಸಕರ ಕೊಡುಗೆ ಏನು?
ಶಾಸಕ ರಾಮಚಂದ್ರ ಮೂರು ಬಾರಿ ಶಾಸಕರಾದರೂ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ. ನಾನು ಒಂದು ಬಾರಿ ಶಾಸಕರಾಗಿ ಅರಸೀಕೆರೆ ಹೋಬಳಿ ವ್ಯಾಪ್ತಿಯ ಏಳು ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಸಿ.ಸಿ.ರಸ್ತೆ , ಶುದ್ದಕುಡಿಯುವ ನೀರಿನ ಘಟಕ, ಕೆರೆ ನೀರು ತುಂಬಿಸುವ ಯೋಜನೆ, ಹಲವಾರು ವಸತಿಗಳು ಸೇರಿದಂತೆ ರೈತರಿಗೆ ಹಲವಾರು ಸೌಲಭ್ಯ ಕಲ್ಪಿಸಿರುವು ಕಣ್ಣಿಗೆ ಕಾಣುತ್ತಿದೆ.
ನಾನು ಅಭಿವೃದ್ಧಿ ಪಡಿಸಿದ ರಸ್ತೆಗಳ ಮೇಲೆ ಇಂದಿನ ಬಿಜೆಪಿ ,ಕಾಂಗ್ರೆಸ್ ಅಭ್ಯರ್ಥಿಗಳು ಮತ ಕೇಳಲು ಬರುತ್ತಿದ್ದಾರೆ ಮತದಾರರೇ ಅದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಹರಿಹಾಯ್ದರು
ಉಚ್ಚಂಗಿದುರ್ಗ ದಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರಿಂದ ತೆರದ ವಾಹನದಲ್ಲಿ ರೋಡ್ ಶೋ ನೆಡೆಸಿದರು. ಇದಕ್ಕು ಮುನ್ನ ಪಟಾಕಿ ಸಿಡಿಸಿ ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿಯಾಗಿ ರಾಜೇಶ್ ಅವರನ್ನು ಬರಮಾಡಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಯಶವಂತ ಗೌಡ್ರು, ಗಡಿಗುಡಾಳ್ ಸುರೇಶ್ ,ಚಟ್ನಳ್ಳಿರಾಜಣ್ಣ, ಕುಮಾರ್, ತಳವಾರ ಮಂಜಣ್ಣ, ಡಗ್ಗಿ ಬಸಾಪುರ ಹನುಮಂತಪ್ಪ , ಅಶೋಕ್, ಅರಸೀಕೆರೆ ಸಲಾಂಸಾಬ್, ಮಹಾಂತೇಶ್ ಬೇವಿನಹಳ್ಳಿ ರಾಜಶೇಖರ ಗೌಡ್ರು, ಮಹಾಂತೇಶ್ ನಾಯ್ಕ್, ತೌಡೂರು ರುದ್ರೇಶ್, ನಿಬಗೂರು ಬಸವರಾಜ್, ಬಸಾಪುರ ರವಿಚಂದ್ರ, ಪುರೋತ್ತಮ ನಾಯ್ಕ, ಸುರೇಶ್ ನಾಯ್ಕ, ಧನ್ಯಕುಮಾರ್ ಸೇರಿದಂತೆ ಹಲವು ಹಿರಿಯ ಮುಖಂಡರು ಕಾರ್ಯಕರ್ತರು