ಸುದ್ದಿವಿಜಯ: ಜಗಳೂರು: ಪ್ರಸ್ತುತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ದಾವಣಗೆರೆ ಜಿಲ್ಲೆಯಲ್ಲೇ ಜಗಳೂರು ಈ ಬಾರಿಯೂ ಪ್ರಥಮ ಸ್ಥಾನಗಳಿಸುವ ಮೂಲಕ ಐದನೇ ಬಾರಿ ಜಿಲ್ಲೆಯಲ್ಲೇ ಮೊದಲ ಸ್ಥಾನಗಳಿಸುವಲ್ಲಿ ಯಶಸ್ವಿಯಾಗಿದೆ.
ಪರೀಕ್ಷೆ ಕುಳಿತಿದ್ದ 2242 ವಿದ್ಯಾರ್ಥಿಗಳಲ್ಲಿ 2163 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ 1067 ವಿದ್ಯಾರ್ಥಿಗಳು, 1096 ವಿದ್ಯಾರ್ಥಿನಿಯರು ಉತ್ತಮ ಅಂಕಗಳಿಸುವ ಮೂಲಕ ತೇರ್ಗಡೆ ಹೊಂದಿದ್ದಾರೆ ಎಂದು ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿ ಬಿ.ಉಮಾದೇವಿ ಮಾಹಿತಿ ನೀಡಿದ್ದಾರೆ.
ಜೆ.ಎಂ.ಇಮಾಂ ಶಾಲೆ ಟಾಪ್:
ಪಟ್ಟಣದ ಜೆ.ಎಂ.ಇಮಾಂ ಶಾಲೆಯ , ಮಂಜುನಾಥ್, ಸವಿತಾ ದಂಪತಿಯ ಪುತ್ರಿ ಎಂ.ಅನನ್ಯ 625ಕ್ಕೆ 621 (ಶೇ.99.36) ಅಂಕಗಳಿಸುವ ಮೂಲಕ ತಾಲೂಕಿಗೆ ಟಾಪ್ ವಿದ್ಯಾರ್ಥಿಯಾಗಿದ್ದಾರೆ.
ಇದೇ ಶಾಲೆಯ ಎಸ್.ತಾಹೀರ್(611), ಡಿ.ಎಸ್.ತರುಣ್(611), ಕೆ.ಸ್ಪೂರ್ತಿ(603), ಡಿ.ಆರ್.ನಶ್ರತಬಸ್ಸುಮ್(202), ಎಂ.ಮಲ್ಲೇಶ್(601), ಎನ್.ಪಲ್ಲವಿ (600) ಅಂಕಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 44 ವಿದ್ಯಾರ್ಥಿಗಳಲ್ಲಿ ಉತ್ತೀರ್ಣರಾಗಿದ್ದು ಈ ಶಾಲೆಗೆ ಶೇ.100 ಫಲಿತಾಂಶ ಬಂದಿದೆ. 28 ವಿದ್ಯಾರ್ಥಿಗಳು ಡಿಸ್ಟಿಂಷನ್, 16 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಜಗಳೂರು ಆರ್ ವಿಎಸ್, ಉದ್ದಗಟ್ಟ ಶಾಲೆ ದ್ವಿತೀಯ:
ಪಟ್ಟಣದ ಆರ್ ವಿಎಸ್ ಶಾಲೆಯ ವಿದ್ಯಾರ್ಥಿನಿ ಜೆ.ಎಸ್.ತಹಮಿನಾ ಕಾಟೂನ್ 620(99.2), ಉದ್ದಗಟ್ಟದ KRCRS ಶಾಲೆಯ ವಿದ್ಯಾರ್ಥಿನಿ ಎಸ್.ಸ್ನೇಹಾ (620) ಅಂಗಳನ್ನು ಗಳಿಸುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ.
ದ್ವಿತೀಯ ಫಲಿತಾಂಶ ಪಡೆದೆ ಶಾಲೆಗಳು:
ಸೊಕ್ಕೆ ಗ್ರಾಮದ KRCRS ಶಾಲೆಯ ಎ.ಸಿ.ಇಂಚರಾ (619), ಉದ್ದಗಟ್ಟದ KRCRS ವಿದ್ಯಾರ್ಥಿನಿ ಎಚ್.ಬಿಂದುಶ್ರೀ (618), ದಿದ್ದಿಗೆ ಗ್ರಾಮದ ರೂರಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಜಿ.ಆರ್.ಅರ್ಪಿತಾ (618), ಎಚ್.ಸುಹಾಸ್ (618), ಜಗಳೂರು ಪಟ್ಟಣದ ಎನ್ಎಂಕೆ ಶಾಲೆಯ ಎಸ್.ಸಿಂಚನಾ (616), ಯರಲಕಟ್ಟೆ ಸರಕಾರಿ ಶಾಲೆಯ ಎಲ್.ಎಚ್.ಪ್ರಿಯಾಂಕ (616), ಗುತ್ತಿದುರ್ಗ ಗ್ರಾಮದ ಸಿ.ಚಂದನಾ(615),
ಸೊಕ್ಕೆ ಗ್ರಾಮದ KRCRS ಶಾಲೆಯ ಎಲ್.ಆರ್.ಮೇಘಾ (615), ಮುಗ್ಗಿದರಾಗಿಹಳ್ಳಿ ಮೊರಾರ್ಜಿ ವಸತಿ ಶಾಲೆಯ ಭಾವನ ಎಸ್ ಕಳಿಮನಿ (608), ಬಾಲಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಇ.ಒ.ರಾಜೇಶ್ವರಿ (594) ಅಂಕಗಳನ್ನು ಗಳಿಸುವ ಮೂಲಕ ವಿದ್ಯಾರ್ಥಿನಿಯರೇ ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದು ಪೋಷಕರು, ಶಿಕ್ಷಕರು ಸಂತೋಷ ಮನೆ ಮಾಡಿದೆ.
ಈ ಬಾರಿಯ ಫಲಿತಂಶದಲ್ಲಿ ಜಗಳೂರು ತಾಲೂಕು ಜಿಲ್ಲೆಯಲ್ಲೇ ಪ್ರಥಮ ಸ್ಥಾನಗಳಿಸಿದ್ದು ಸಂತೋಷ ತಂದಿದೆ. ಇದಕ್ಕೆ ಕಾರಣ ಶಿಕ್ಷಕರು ಮತ್ತು ಪೋಷಕರು ಹಾಗೂ ನೋಡಲ್ ಅಧಿಕಾರಿಗಳ ಶ್ರಮ ಹೆಚ್ಚಿದೆ. ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಶಿಕ್ಷಕರಿಗೆ ದತ್ತು ಕೊಟ್ಟು ಅವರು ಹೆಚ್ಚಿನ ಅಂಕಗಳಿಸುವಂತೆ ಮಾಡಲಾಗಿತ್ತು. ಹೀಗಾಗಿ ಈ ಬಾರಿಯೂ ಉತ್ತಮ ಫಲಿತಾಂಶ ಬಂದಿದೆ. ಮುಂದಿನ ಬಾರಿಯೂ ಇದೇ ರೀತಿ ಫಲಿತಾಂಶ ತರುವ ನಿಟ್ಟಿನಲ್ಲಿ ಮತ್ತು ಗುಣಾತ್ಮಕ ಶಿಕ್ಷಣ ನೀಡಲು ಶ್ರಮಿಸುತ್ತೇವೆ.