ಸುದ್ದಿವಿಜಯ ಜಗಳೂರು:ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬುಧವಾರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆ ಒಳಗೆ ಪ್ರವೇಶಿಸುತ್ತಿದ್ದಂತೆ ನೇರವಾಗಿ ಒಪಿಡಿ ಕೊಠಡಿಗೆ ತೆರಳಿ ರೋಗಿಗಳನ್ನು ಮಾತನಾಡಿಸಿದರು. ಔಷಧಿಗಳನ್ನು ಆಸ್ಪತ್ರೆ ಒಳಗೆ ಕೊಡುತ್ತಾರಾ ಅಥವಾ ಹೊರಗೆ ಬರೆಯುತ್ತಾರಾ ಎಂದು ಪ್ರಶ್ನಿಸಿದರು.
ಒಳಗೆ ಕೊಡುತ್ತಾರೆ ಕೆಲವು ಔಷಧಿಗಳನ್ನು ಹೊರಗೆ ಬರೆಯುತ್ತಾರೆ ಎಂದು ರೋಗಿ ತಿಳಿಸಿದರು.
ಯಾವುದೇ ಕಾರಣಕ್ಕೂ ಹೊರಗೆ ಔಷಧಿ ಬರೆಯುವಾಗಿಲ್ಲ, ಎಲ್ಲಾ ಬಡ ರೋಗಿಗಳು ಬರುತ್ತಾರೆ ಅವರಿಗೆ ಆರ್ಥಿಕ ಹೊರೆ ಹಾಕಬಾರದು, ಇನ್ನು ಮುಂದೆ ಈ ರೀತಿಯಾದರೆ ಸುಮ್ಮನಿರುವುದಿಲ್ಲವೆಂದು ಎಂದು ವೈದ್ಯರಿಗೆ ಎಚ್ಚರಿಕೆ ನೀಡಿದರು.
ಅಲ್ಲಿಂದ ರೋಗಿಗಳ ಮತ್ತು ಹೆರಿಗೆ ಆಪರೇಷನ್ ಕೊಠಡಿಗೆ ಹೋಗಿ ಸ್ವಚ್ಛತೆ ಪರಿಶೀಲಿಸಿದರು.
ಲ್ಯಾಬ್ ಸಿಬ್ಬಂದಿಗೆ ಎಚ್ಚರಿಕೆ:
ಸರ್ಕಾರಿ ಆಸ್ಪತ್ರೆಯಲ್ಲಿರುವ ತಾವುಗಳು ಖಾಸಗಿಯಾಗಿ ಲ್ಯಾಬ್ ಕೇಂದ್ರಗಳನ್ನು ತೆರೆದು ವ್ಯವಹಾರ ಮಾಡುವುದು ಕಾನೂನು ಬಾಹಿರ ಚಟುವಟಿಕೆಯಾಗಿದೆ. ಈಗ ಎಚ್ಚರಿಕೆ ನೀಡುತ್ತಿದ್ದೇನೆ. ಮುಂದುವರಿಸಿದರೆ ಮುಲಾಜಿಲ್ಲದೇ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಎಸಿ ದುರ್ಗಶ್ರೀ, ತಹಸೀಲ್ದಾರ್ ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಸೇರಿದಂತೆ ಮತ್ತಿತರಿದ್ದರು.
“ಸರ್ಕಾರಿ ಆಸ್ಪತ್ರೆಗಳಲ್ಲಿ ಸರ್ಕಾರ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದೆ, ಎಂಐ ಆರ್ ಸ್ಕ್ಯಾನ್ ಜಿಲ್ಲಾ ಆಸ್ಪತ್ರೆ ಯಲ್ಲಿಲ್ಲ, ಅದು ಹೊರತು ಎಲ್ಲಾ ವ್ಯವಸ್ಥೆ ಇದೆ, ರೋಗಿಗಳಿಗೆ ಸಾದ್ಯವಾದಷ್ಟು ಅಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಿ ಔಷಧಿ ನೀಡಲು ಸೂಚನೆ ನೀಡಿದೆ,”
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ.