ಸುದ್ದಿವಿಜಯ, ಜಗಳೂರು: ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಇರುವ ಇಂಡಿಕ್ಯಾಷ್ ಎಟಿಎಂನಲ್ಲಿ ಅನೈತಿಕ ಚಟುವಟಿಕೆಗಳ ಆಗರವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗ್ರಾಮದ ಭರಮಸಾಗರ ರಸ್ತೆಯಲ್ಲಿರುವ ಎಟಿಎಂ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ಎಟಿಎಂ ಮಷೀನ್ ಕೆಟ್ಟು ಅದೆಷ್ಟೋದಿನಗಳಾಗಿವೆ. ಅದಕ್ಕೆ ಸಂಬಂಧಿಸಿದ ಸಿಬ್ಬಂದಿಗಳಾಗಲಿ ಇತ್ತಕಡೆ ತಿರುಗಿ ನೋಡಿಲ್ಲ.
ಎಟಿಎಂ ಕೇಂದ್ರವಿದೆ ಎಂದು ಮಧ್ಯರಾತ್ರಿ ತುರ್ತು ಹಣ ಡ್ರಾಮಾಡಲು ಬಂದರೆ ಸಾರ್ವಜನಿಕರಿಗೆ ದರ್ಶನವಾಗುವುದು ಕೆಟ್ಟುನಿಂತ ಎಟಿಎಂ ಯಂತ್ರ. ಜೊತೆಗೆ ಕುಡಿದು ಬಿಸಾಕಿರುವ ಬಾಟಲ್ಗಳು, ಗುಟ್ಕಾ ಸ್ಯಾಚೆಟ್ಗಳು, ಕಸದ ರಾಶಿ, ಜಾಡುಕಟ್ಟಿರುವ ಗೋಡೆಗಳು ಮಾತ್ರ.
ತುರ್ತು ಹಣ ಬೇಕು ಎಂದು ಬಂದವರಿಗೆ ಈ ಕೇಂದ್ರಲ್ಲಿ ಸಿಗುವುದು ಬೇಡವಾದ ವಸ್ತು. ಈ ಗ್ರಾಮದಲ್ಲಿ ಇರುವುದು ಏಕೈಕ ಎಟಿಎಂ ಮಷೀನ್. ಅದನ್ನು ಹೊರತು ಪಡಿಸಿದರೆ ಮತ್ತೊಂದಿಲ್ಲ. ಗ್ರಾಹಕರು ಹಣಕ್ಕಾಗಿ ಜಗಳೂರು ಪಟ್ಟಣ ಇಲ್ಲವೇ ಭರಮಸಾಗರಕ್ಕೆ ಹೋಗಬೇಕು.
ಈ ಎಟಿಎಂ ಕೇಂದ್ರ ಅವ್ಯವಸ್ಥೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅಳವಡಸಲಾಗಿರುವ ಸಿಸಿಟಿವಿ ಕೆಟ್ಟು ಹೋಗಿದ್ದು ಸಂಬಂಧಪಟ್ಟ ಏಜೆನ್ಸಿ ಅಥವಾ ಬ್ಯಾಂಕ್ ಸಿಬ್ಬಂದಿ ಇತ್ತ ಕಡೆ ತಿರುಗಿ ನೋಡದೇ ಇರುವುದರಿಂದ ಈ ಎಟಿಎಂ ಕೇಂದ್ರ ಅನೈತಿಕ ಚಟುವಟಿಕೆ ತಾಣವಾಗಿದೆ. ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದರಿಂದ ಎಟಿಎಂ ಯಂತ್ರಕ್ಕೂ ಭದ್ರತೆಯಿಲ್ಲವಾಗಿದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.