ಸುದ್ದಿವಿಜಯ, ಜಗಳೂರು: ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರು ಶಾಸಕರಾಗುವ ಮುನ್ನ ಹೇಗೆ ಜನಸಾಮಾನ್ಯರಿಗೆ ಸ್ಪಂದಿಸುತ್ತಿದ್ದರೋ ಅದೇ ಪ್ರೀತಿ ಅದೇ ವಿಶ್ವಾಸವನ್ನು ಶಾಸಕರಾದ ಮೇಲೂ ತಮ್ಮ ವ್ಯಕ್ತಿತ್ವ ಬದಲಿಸಿಕೊಳ್ಳದೇ ಸಾಮಾನ್ಯರ ರೀತಿ ಪಟ್ಟಣದ ಹೋಟೆಲ್‍ನಲ್ಲಿ ಶುಕ್ರವಾರ ಮಧ್ಯಾಹ್ನ ಕಾರ್ಯಕರ್ತರೊಂದಿಗೆ ಲಘು ಉಪಹಾರ ಸೇವಿಸಿದರು.
ಊಟದ ವೇಳೆ ಬಾಟಲ್ ನೀರು ಕುಡಿಯದೇ ಜನಸಾಮಾನ್ಯರ ರೀತಿ ಹೋಟೆಲ್ ನೀರು ಕುಡಿದು ತಾವು ಜನನಾಯಕ ಅಲ್ಲ ಜನ ಸೇವಕ ಎಂಬುದನ್ನು ತೋರಿಸಿಕೊಟ್ಟರು.
ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಬೆಂಗಳೂರಿಗೆ ಬಂದ ಅವರು ಬೆಳಗಿನ ಉಪಹಾರವನ್ನು ಬೆಂಗಳೂರಿನಲ್ಲಿ ಸೇವಿಸಿ ನಂತರ ನೇರವಾಗಿ ಜಗಳೂರು ಪಟ್ಟಣಕ್ಕೆ ಬಂದರು.
ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ ನಂತರ ಮಧ್ಯಾಹ್ನದ ಊಟಕ್ಕೆ ನೇರವಾಗಿ ಪಟ್ಟಣದ ಹೋಟೆಲ್‍ಗೆ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ತೆರಳಿ ಪಕೋಡ, ಮೊಸರನ್ನ ಸೇವಿಸಿ ನಂತರ ಹೋಟೆಲ್‍ಗೆ ಬಂದಿದ್ದ ಜನರೊಂದಿಗೆ ಮಾತುಕತೆ ನಡೆಸಿ ಕಷ್ಟ ಸುಖ ವಿಚಾರಿಸಿದರು.
ಅಲ್ಲಿಂದ ನೇರವಾಗಿ ನಡೆದು ದಾರಿಯಲ್ಲಿ ಸಿಕ್ಕ ಜನರಿಗೆ ಕೃತಜ್ಞತೆ ಅರ್ಪಿಸಿ ನಂತರ ಪ್ರವಾಸಿ ಮಂದಿರಕ್ಕೆ ತೆರಳಿ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.
ಈ ವೇಳೆ ಕೆಪಿಸಿಸಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಜಗಳೂರು ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮ್ಮದ್, ಕೆಪಿಸಿಸಿ ಕಾರ್ಮಿಕರ ಘಟಕದ ಜಂಟಿ ಕಾರ್ಯದರ್ಶಿ ಟಿ.ರುದ್ರೇಶ್, ಕೆಪಿಸಿಸಿ ಎಸ್ಸಿ ಘಟಕದ ಸದಸ್ಯರಾದ ಸಿ.ತಿಪ್ಪೇಸ್ವಾಮಿ, ಮೈನಾರಿಟಿ ಅಧ್ಯಕ್ಷ ಅಹ್ಮದ್ ಅಲಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ ಕೆಂಚೋಳು, ಮಹಿಳಾ ಕಾಂಗ್ರೆಸ್ ಮುಖಂಡರಾದ ಸಾವಿತ್ರಮ್ಮ, ರಾಜೀವ್ ಗಾಂಧಿ ಪಂಚಾಯತ್ ರಾಜ್ ನ ತಾಲೂಕ್ ಅಧ್ಯಕ್ಷ ಎಂ.ಎಸ್ ನಜೀರ್ ಅಹ್ಮದ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.