ಸುದ್ದಿವಿಜಯ, ಜಗಳೂರು: ಇಲ್ಲಿನ ಹೃದಯ ಭಾಗದಲ್ಲಿರುವ ಹಳೆ ಪಟ್ಟಣ ಪಂಚಾಯಿತಿ ಕಾರ್ಯಾಲಯವನ್ನು ನೂತನವಾಗಿ ನವೀಕರಿಸಿ ಶಾಸಕರ ಜನ ಸಂಪರ್ಕ ಕಚೇರಿಯನ್ನಾಗಿ ಮಾಡಲಾಗಿದ್ದು, ಶನಿವಾರ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಕಚೇರಿ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಬೆಳಗ್ಗೆ 11ಗಂಟೆಗೆ ಆಗಮಿಸಿದ ಶಾಸಕರು ವಿಶೇಷ ಪೂಜೆ ಸಲ್ಲಿಸಿ ಮೊದಲು ಬುದ್ದ, ಬಸವ, ಅಂಬೇಡ್ಕರ್ ಭಾವ ಚಿತ್ರಗಳಿಗೆ ಕೈ ಮುಗಿದು ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಕೊಠಡಿಯೊಂದರ ಟೇಪ್ ಕಟ್ ಮಾಡಿ ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದರು.
ನಂತರ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ಕ್ಷೇತ್ರದಲ್ಲಿ ಜನರ, ಕಷ್ಟ, ದುಃಖ ಕೇಳಲು, ಅವರ ಅಹವಾಲುಗಳನ್ನು ಸ್ವೀಕರಿಸಲು ಜನ ಸಂಪರ್ಕ ಕಚೇರಿ ತುಂಬ ಅವಶ್ಯಕವಾಗಿದೆ. ಹಾಗಾಗಿ ಬ್ರಿಟಿಷರ ಕಾಲದ ಪಟ್ಟಣ ಪಂಚಾಯಿತಿ ಕಾರ್ಯಾಲಯವನ್ನು ಸಂಪರ್ಕ ಕಚೇರಿಯನ್ನಾಗಿ ಮಾಡಲಾಗಿದೆ. ಇದರಿಂದ ತಾಲೂಕಿನ ಸುತ್ತಮುತ್ತಲಿನ ಜನರಿಗೆ ಅನುಕೂವಲಾಗಲಿದೆ ಎಂದರು.
ಕಚೇರಿಯಲ್ಲಿ ನಿತ್ಯ ಐದಾರು ಯುವಕರು ಕೆಲಸ ಮಾಡುತ್ತಾರೆ. ಒಬ್ಬರು ಒಂದೊಂದು ಜವಾಬ್ದಾರಿಗಳನ್ನು ಹೊತ್ತುಕೊಂಡು ಜನರ ನೋವುಗಳನ್ನು ಆಲಿಸಿ ಅವರ ವಿಳಾಸವನ್ನು ಸಂಗ್ರಹಿಸಿ ಸಂಜೆ ನಮ್ಮ ಗಮನಕ್ಕೆ ತರುತ್ತಾರೆ ಆ ನಂತರ ಅದನ್ನು ಪರಿಶೀಲಿಸಿ ಸಮಸ್ಯೆಗಳನ್ನು ಪರಿಹರಿಸುವ ಪ್ರಮಾಣಿಕ ಕೆಲಸವನ್ನು ಮಾಡುತ್ತೇನೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಷೀರ್ ಅಹಮದ್, ಕ್ಷೇತ್ರ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ನಿವೃತ್ತ ಅಧಿಕಾರಿ ಸಿ. ತಿಪ್ಪೇಸ್ವಾಮಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ.ಶೇಖರಪ್ಪ, ಸಿ.ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ. ಪ.ಪಂ ಸದಸ್ಯರಾದ ರಮೇಶ್‍ರೆಡ್ಡಿ, ರವಿಕುಮಾರ್ ಸೇರಿದಂತೆ ಮತ್ತಿತರಿದ್ದರು.