ಸುದ್ದಿವಿಜಯ, ಜಗಳೂರು: ಕಳೆದ ಶುಕ್ರವಾರ ಸುರಿದ ಭಾರಿ, ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಕಸಬಾ ಹೋಳಿಯಲ್ಲಿ ಅಂದಾಜು 15 ಎಕರೆ ಅಡಕೆ, ಬಾಳೆ, ಪಪ್ಪಾಯ ಗಿಡಗಳು ಧರೆಗುರುಳಿವೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಎಲ್.ವೆಂಕಟೇಶ್ವರನಾಯ್ಕ್ ತಿಳಿಸಿದ್ದಾರೆ.
ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿ ವೀಕ್ಷಿಸಿದ ಅವರು, ಭರಮಸಮುದ್ರ ಗ್ರಾಮದ ರೈತರಾದ ಅಲವೇಲಮ್ಮ, ಅನಿಲ್ ಕುಮಾರ್, ಅಲವೇಲಮ್ಮ, ಸತ್ಯನಾರಾಯಣ ರೆಡ್ಡಿ, ಮಂಜುಳಮ್ಮ, ಸಿದ್ದಮ್ಮನಹಳ್ಳಿಯ ದೊಡ್ಡಮಾರಪ್ಪ, ಚನ್ನನಗೌಡ, ದೇವೇಂದ್ರಪ್ಪ, ಜಿ.ಆರ್.ಮಲ್ಲೇಶಪ್ಪ ಸೇರಿದಂತೆ ಅನೇಕ ರೈತರ ಹೊಲಗಳಲ್ಲಿ ಫಸಲಿಗೆ ಬಂದಿದ್ದ ಬಾಳೆ, ಪಪ್ಪಾಯ ಗಿಡಗಳು ಧರೆಗುರುಳಿವೆ ಎಂದು ತಿಳಿಸಿದರು.
ಇಲಾಖೆಯಿಂದ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಷ್ಟದ ಬಗ್ಗೆ ಲೆಕ್ಕಹಾಕಿ ಜಿಪಿಎಸ್ ಫೋಟೋ ತೆಗೆದು ಸೂಕ್ತ ದಾಖಲೆಗಳನ್ನು ರೈತರು ಒದಗಿಸಿದರೆ ಅವರಿಗೆ ಸರಕಾರದಿಂದ ಪರಿಹಾರ ಬರಲಿದೆ ಎಂದು ತಿಳಿಸಿದರು.