ಸುದ್ದಿವಿಜಯ, ಜಗಳೂರು: ಅಂತರಾಷ್ಟ್ರೀಯ ಭರತ ನಾಟ್ಯ ಆಕ್ಟಿವ್ ಟೀಸ್ ಸ್ಪರ್ಧೆಯಲ್ಲಿ ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಮಲ್ಲೇಶ್ ಮೀನಾ ದಂಪತಿಗಳ ಪುತ್ರಿ ಮಂದಿರಾ ಪ್ರಥಮ ಸ್ಥಾನಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ.
ಮಂದಿರ ಬಾಲ್ಯದಿಂದಲೂ ಭತರ ನಾಟ್ಯ ಕಲೆಯನ್ನು ಮೈಗೂಡಿಸಿಕೊಂಡಿದ್ದು ಉತ್ತಮ ತರಬೇತಿ ಪಡೆಯುವ ಮೂಲಕ ಹಲವು ವೇದಿಕೆಗಳಲ್ಲಿ ಭತರ ನಾಟ್ಯ ಪ್ರದರ್ಶನ ಮಾಡಿದ್ದಾರೆ. ಥೈಲಾಂಡ್ ದೇಶದಲ್ಲಿ ನೆಡೆದ ಅಂತರಾಷ್ಟ್ರೀಯ ಭರತ ನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಮಂದಿರ ಅವರು ಮೂಲತ ಜಗಳೂರು ತಾಲ್ಲೂಕು ಹಿರೇಮಲ್ಲನಹೊಳೆ ಗ್ರಾಮದವರಾಗಿದ್ದು ಸದ್ಯ ಕುಟುಂಬದವರು ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ಬಾಲ್ಯದಿಂದಲೂ ದಾವಣಗೆರೆ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತ ಭರತ ನಾಟ್ಯ ಕಲೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಥೈಲಾಂಡ್ ನಲ್ಲಿ ಭರತ ನಾಟ್ಯ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಿ ಪದಕ ನೀಡಿ ಗೌರವಿಸಿದ್ದಾರೆ. ಮಂದಿರ ಅವರ ಸಾಧನೆ ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಕುಟುಂಬದವರು ಸ್ನೇಹಿತರು ಹಾರೈಸಿದ್ದಾರೆ.