ದಾವಣಗೆರೆಯಲ್ಲಿ ಸಿ.ಬಿ.ರಿಷ್ಯಂತ್ ಮಾಡಿದ ಕೆಲಸವೇನು?

Suddivijaya
Suddivijaya June 26, 2023
Updated 2023/06/26 at 1:34 PM

ಸುದ್ದಿವಿಜಯ, ದಾವಣಗೆರೆ: ಬೆಣ್ಣೆ ನಗರಿಗೆ ನೋವಿನ ವಿದಾಯ ಹೇಳಿದ  ಖಡಕ್ ಆಫೀಸರ್ ರಿಷ್ಯಂತ್ ಕಡಲಕಿನಾರೆ ಮಂಗಳೂರಿಗೆ ಹೊರಟ ಖಾಕಿ ಪಡೆಯ ಅಚ್ಚುಮೆಚ್ಚಿನ ಐಪಿಎಸ್ ಅಧಿಕಾರಿ ಅವರ ಖಡಕ್ ವರ್ಕ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ.

*ಐಪಿಎಸ್ ಅಧಿಕಾರಿಯೊಬ್ಬರ ಕೃಪಾಕಟಕ್ಷವಿದ್ದ ಇಂಟರ್‍ನ್ಯಾಷನಲ್ ನಟೋರಿಯಸ್ ಇಮ್ರಾನ್ ಸಿದ್ದಿಕೀ ಬಂಧನ, ಈತ ಅಕ್ರಮ ಮರಳು ದಂಧೆಯಲ್ಲಿ ಪೆÇಲೀಸರಿಂದಲೇ ಹಣ ವಸೂಲಿ ಮಾಡುತ್ತಿದ್ದ. ಈತನಿಗೆ ಅನೇಕ ದೊಡ್ಡ ಅಧಿಕಾರಿಗಳು ಬೆಂಗಾವಲಾಗಿದ್ದರು. ಈ ನಡುವೆ ಎಸ್ಪಿ ರಿಷ್ಯಂತ್ ಏರ್‌ಪೋರ್ಟ್‌ಗೆ ಹೋದರೂ ಹಿಡಿದು ತಂದು ಜೈಲಿಗೆ ಹಾಕಿದ್ದರು.

*ರೈತರಿಂದ ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿ ಮಾಡಿ ಹಣ ಕೊಡದೇ ಮೋಸ ಮಾಡಿದ ಆರು ಆರೋಪಿಗಳನ್ನು ಬಂಧಿಸಿ ಸುಮಾರು 2 ಕೋಟಿ ಆರವತ್ತೇಂಟು ಲಕ್ಷದ 91 ಸಾವಿರ ಹಣವನ್ನು ಅನ್ನದಾತರಿಗೆ ವಾಪಸ್ ಕೊಡಿಸಿದ್ದರು. ಬ್ಯಾಂಕ್ ಉದ್ಯೋಗಿಯೊಬ್ಬ ಇದರಲ್ಲಿ ಭಾಗಿಯಾಗಿದ್ದ. ಈ ಪ್ರಕರಣವನ್ನು ಡಿಸಿಆರ್‍ಬಿ ಡಿಎಸ್ಪಿ ಬಿ.ಎಸ್.ಬಸವರಾಜ್ ಭೇದಿಸಿದ್ದರು.

*ಅಂತರಾಜ್ಯ ಕಳ್ಳರಾದ ಓಜಿ ಕುಪ್ಪಂ ಗ್ಯಾಂಗ್ ಭೇದಿಸುವಲ್ಲಿ ಎಸ್ಪಿ ರಿಷ್ಯಂತ್ ಯಶಸ್ವಿಯಾಗಿದ್ದು, 4 ಪ್ರಕರಣಗಳಲ್ಲಿ 21 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದರು.

*ಕೇರಳ ಮೂಲದ ವ್ಯಕ್ತಿಗೆ ನಕಲಿ ಚಿನ್ನ ನೀಡಿದ ವ್ಯಕ್ತಿ ಬಂಧಿಸಿ 22 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದರು. ಈತ ತರೀಕೆರೆ ಮೂಲದ ವ್ಯಕ್ತಿಯಾಗಿದ್ದ

*ಎಲೆಬೇತೂರಿನಲ್ಲಿ ವೃದ್ಧರನ್ನು ಡಬಲ್ ಮರ್ಡರ್ ಮಾಡಿದ ಕೊಲೆಗಾರರನ್ನು ಹಿಡಿದು ಜೈಲಿಗಟ್ಟಿದ್ದರು.

*ದಾವಣಗೆರೆಯಲ್ಲಿ ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು, ನಗರದಲ್ಲೇಡೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಸಿಸಿ ಕ್ಯಾಮೆರಾ, ಸಿಟಿ ವ್ಯಾಪ್ತಿಯಲ್ಲಿ ಎಲ್ಲೆ ಕ್ರೈಂ ನಡೆದರೂ ಕುಳಿತಲ್ಲೇ ವೀಕ್ಷಣೆ ಮಾಡುವ ವ್ಯವಸ್ಥೆ

*ಹಲವು ದಿನಗಳಿಂದ ಸ್ಥಳೀಯ ಠಾಣೆಗಳಲ್ಲಿ ಠಿಕಾಣಿ ಹೂಡಿದ್ದ ಪೊಲೀಸ್ಪೇದೆಗಳನ್ನು ಬೇರೆ ಕಡೆ ಎತ್ತಿ ಹಾಕಿದ ಕೀರ್ತಿ ಎಸ್ಪಿ ರಿಷ್ಯಂತ್‍ರದ್ದು.

*ರಾತ್ರಿವೇಳೆ ವಸೂಲಿ, ಜೂಜು, ಅಕ್ರಮ ಮರಳು ದಂಧೆಗೆ ತಡೆ, ಕೆಳ ಹಂತದ ಪೊಲೀಸರಿಗೆ ಆಗಾಗ ಎಚ್ಚರಿಕೆ, ಆರೋಪವಿದ್ದರೇ ಸಂಪೂರ್ಣ ತನಿಖೆ ನಂತರ ಅಮಾನತು

*ಸೈಬರ್ ಕ್ರೈಂ, ಡ್ರಗ್ಸ್ ಜಾಗೃತಿ, ಗಾಂಜಾ ದಂಧೆಕೋರರ ವಶ

*ಮಾಜಿ ಸಚಿವ ರೇಣುಕಾಚಾರ್ಯ ಸಹೋದರ ಮಗನ ಪ್ರಕರಣದಲ್ಲಿ ರಾತ್ರಿ-ಹಗಲು ಕೆಲಸ, ನಿದ್ದೆಯಿಲ್ಲದೇ ತನಿಖೆ

*ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆ, ಉತ್ತಮ ಶಿಕ್ಷಕರ ನೇಮಕ, ಪ್ರಾಕ್ಟಿಕಲ್‍ಗೆ ಒತ್ತು

*ಪೊಲೀಸ್ ಮಕ್ಕಳಿಗೆ ಪಬ್ಲಿಕ್ ಶಾಲೆಯಲ್ಲಿ ಉತ್ತಮ ಶಿಕ್ಷಣ ಕೊಡಿಸಿದ ಎಸ್ಪಿ

* ಪೊಲೀಸ್  ಡಾಗ್ ತುಂಗಾ ಎಂಬ ಶ್ವಾನಗೆ ಸಮಾಧಿ ಕಟ್ಟಿಸಿದ ಎಸ್ಪಿ

*ತುಂಗಾಳ ಸಾಧನೆ ಹಿನ್ನೆಲೆಯಲ್ಲಿ ಇನ್ನೊಂದು ಶ್ವಾನಕ್ಕೆ ತುಂಗಾ 2 ಎಂಬ ಹೆಸರು

Share this Article
Leave a comment

Leave a Reply

Your email address will not be published. Required fields are marked *

error: Content is protected !!